More

    ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆಯ ಸಮಾಧಾನ; ಡ್ರಾದತ್ತ ಪಂದ್ಯ

    ನವದೆಹಲಿ: ರೈಲ್ವೇಸ್ ಬೌಲರ್​ಗಳ ಮಾರಕ ದಾಳಿ ನಡುವೆಯೂ ಶರತ್ ಶ್ರೀನಿವಾಸ್ (56* ರನ್, 164 ಎಸೆತ, 5 ಬೌಂಡರಿ) ತೋರಿದ ಜಿಗುಟು ಬ್ಯಾಟಿಂಗ್ ಫಲವಾಗಿ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ 7ನೇ ಸುತ್ತಿನ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆಯ ಸಮಾಧಾನ ಕಂಡಿತು. ಪಂದ್ಯಕ್ಕೆ ಗುರುವಾರವೇ ಅಂತಿಮ ದಿನವಾಗಿದ್ದು, ಪಂದ್ಯ ಬಹುತೇಕ ಡ್ರಾದತ್ತ ಸಾಗಿದೆ. ಮೊದಲೆರಡು ದಿನದಾಟಕ್ಕೆ ಮಳೆ-ಮಂದ ಬೆಳಕು ಬಹುತೇಕ ಅಡ್ಡಿಯಾಗಿತ್ತು. 17 ರನ್ ಮುನ್ನಡೆ ಹೊಂದಿರುವ ಕರ್ನಾಟಕ ಅಂತಿಮ ದಿನದಾಟದಲ್ಲಿ ನಾಟಕೀಯ ತಿರುವು ಪಡೆದರಷ್ಟೇ ಗೆಲುವಿನ ಸಾಧ್ಯತೆಗಳಿವೆ.

    ಕಾರ್ನೆಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 7 ವಿಕೆಟ್​ಗೆ 160 ರನ್​ಗಳಿಂದ 3ನೇ ದಿನದಾಟ ಆರಂಭಿಸಿದ ರೈಲ್ವೇಸ್, 182 ರನ್​ಗಳಿಗೆ ಸರ್ವಪತನ ಕಂಡಿತು. ಬಳಿಕ ಕರ್ನಾಟಕ ತಂಡ, ಮಧ್ಯಮ ವೇಗಿ ಅಮಿತ್ ಮಿಶ್ರಾ (70ಕ್ಕೆ 5) ಹಾಗೂ ಹಿಮಾಂಶು ಸಂಗ್ವಾನ್ (47ಕ್ಕೆ 3) ಮಾರಕ ದಾಳಿ ನಡುವೆಯೂ ಆರಂಭಿಕ ದೇವದತ್ ಪಡಿಕಲ್ (55 ರನ್, 75 ಎಸೆತ, 9 ಬೌಂಡರಿ) ಹಾಗೂ ಶರತ್ ಶ್ರೀನಿವಾಸ್ ಹೋರಾಟದ ಫಲವಾಗಿ ದಿನದಂತ್ಯಕ್ಕೆ 9 ವಿಕೆಟ್​ಗೆ 199 ರನ್​ಗಳಿಸಿದೆ.

    ಕರ್ನಾಟಕದ ಇನಿಂಗ್ಸ್​ಗೆ ಆರಂಭದಲ್ಲೇ ಆಘಾತ ಎದುರಾಯಿತು. ಮೊದಲ ಓವರ್​ನಲ್ಲೇ ಆರ್.ಸಮರ್ಥ್ ನಿರ್ಗಮಿಸಿದರೆ, ಬಳಿಕ ಬಂದ ರೋಹನ್ ಕದಂ (2), ನಾಯಕ ಕರುಣ್ ನಾಯರ್ (17), ಕೆವಿ ಸಿದ್ದಾರ್ಥ್ (4) ನಿರಾಸೆ ಅನುಭವಿಸಿದರು. ಅರ್ಧಶತಕ ಗಳಿಸುವ ಮೂಲಕ ದೇವದತ್ ಪಡಿಕಲ್ ಭರವಸೆ ಉಳಿಸಿಕೊಂಡರು. 85 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡ ಕರ್ನಾಟಕ ಇನಿಂಗ್ಸ್ ಹಿನ್ನಡೆ ಭೀತಿ ಎದುರಿಸಿತು. ಕೆ.ಗೌತಮ್ (41 ರನ್, 31 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಶರತ್ ಜೋಡಿ 7ನೇ ವಿಕೆಟ್​ಗೆ 64ರನ್ ಪೇರಿಸಿತು. ಬಳಿಕ ಮಿಥುನ್ (1) ಹಾಗೂ ರೋನಿತ್ ಮೋರೆ (0) ತ್ವರಿತವಾಗಿ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ಪ್ರತೀಕ್ ಜೈನ್ ಜತೆಗೂಡಿ ಮುರಿಯದ ಕೊನೇ ವಿಕೆಟ್​ಗೆ 22 ರನ್ ಗಳಿಸಿದ ಶರತ್ ತಂಡಕ್ಕೆ ಮುನ್ನಡೆ ದಕ್ಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.

    ರಾಜಸ್ಥಾನ, ಸೌರಾಷ್ಟ್ರಕ್ಕೆ ಜಯ

    ಸೌರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಗೋವಾ, ಸಿಕ್ಕಿಂ ಹಾಗೂ ಆಂಧ್ರ ತಂಡಗಳು ಮೂರನೇ ದಿನದಾಟದಲ್ಲೇ ಗೆಲುವಿನ ನಗೆ ಬೀರಿದವು. ನಾಯಕ ಜೈದೇವ್ ಉನಾದ್ಕತ್ ಎರಡೂ ಇನಿಂಗ್ಸ್​ಗಳಲ್ಲಿ ತಲಾ 6 ವಿಕೆಟ್ ಕಬಳಿಸಿದ ಸಾಧನೆಯಿಂದ ಸೌರಾಷ್ಟ್ರ ತಂಡ ಬರೋಡ ಎದುರು 4 ವಿಕೆಟ್​ಗಳಿಂದ ಜಯ ದಾಖಲಿಸಿತು. ಎ ಮತ್ತು ಬಿ ಗುಂಪಿನ ಇತರ ಪಂದ್ಯಗಳಲ್ಲಿ ರಾಜಸ್ಥಾನ ತಂಡ 9 ವಿಕೆಟ್​ಗಳಿಂದ ಹೈದರಾಬಾದ್ ಎದುರು, ಉತ್ತರ ಪ್ರದೇಶ ತಂಡ 7 ವಿಕೆಟ್​ಗಳಿಂದ ಮಧ್ಯಪ್ರದೇಶ ಎದುರು ಜಯ ದಾಖಲಿಸಿದವು. ಮುಂಬೈ ಹಾಗೂ ಹಿಮಾಚಲ ಪ್ರದೇಶ ನಡುವಿನ ಪಂದ್ಯದಲ್ಲಿ ಮಳೆಯಿಂದಾಗಿ 3ನೇ ದಿನದಾಟವೂ ರದ್ದುಗೊಂಡಿತು. ಆಂಧ್ರ 7 ವಿಕೆಟ್​ಗಳಿಂದ ಕೇರಳ ವಿರುದ್ಧ ಜಯಿಸಿತು.

    ರೈಲ್ವೇಸ್ ಪ್ರಥಮ ಇನಿಂಗ್ಸ್:

    72 ಓವರ್​ಗಳಲ್ಲಿ 7 ವಿಕೆಟ್​ಗೆ 160

    (ಸೋಮವಾರ 6 ವಿಕೆಟ್​ಗೆ 98)

    ಅರಿಂದಮ್ ಘೋಷ್ ಸಿ ಕದಂ ಬಿ ಮಿಥುನ್ 59

    ಅಮಿತ್ ಮಿಶ್ರಾ ಬಿ ಪ್ರತೀಕ್ ಜೈನ್ 10

    ಟಿ ಪ್ರದೀಪ್ ಔಟಾಗದೆ 9

    ಸಂಗ್ವಾನ್ ಸಿ ಶರತ್ ಬಿ ಮಿಥುನ್ 4

    ಇತರ: 6. ವಿಕೆಟ್ ಪತನ: 7-142, 8-160, 9-178. ಬೌಲಿಂಗ್: ಅಭಿಮನ್ಯು ಮಿಥುನ್ 15.4-5-51-4, ಪ್ರತೀಕ್ ಜೈನ್ 22-9-38-5, ರೋನಿತ್ ಮೋರೆ 11-4-21-1, ಕೆ. ಗೌತಮ್ 20-7-39-0, ಶ್ರೇಯಸ್ ಗೋಪಾಲ್ 9-0-30-0.

    ಕರ್ನಾಟಕ ಪ್ರಥಮ ಇನಿಂಗ್ಸ್:

    65 ಓವರ್​ಗಳಲ್ಲಿ 9 ವಿಕೆಟ್​ಗೆ 199

    ಆರ್. ಸಮರ್ಥ್ ಬಿ ಅಮಿತ್ ಮಿಶ್ರಾ 0

    ಪಡಿಕಲ್ ಸಿ ರಾವತ್ ಬಿ ಸಂಗ್ವಾನ್ 55

    ರೋಹನ್ ಕದಂ ಎಲ್​ಬಿಡಬ್ಲ್ಯು ಬಿ ಅಮಿತ್ 2

    ಕರುಣ್ ನಾಯರ್ ಎಲ್​ಬಿಡಬ್ಲ್ಯು ಬಿ ಸಂಗ್ವಾನ್ 17

    ಕೆವಿ ಸಿದ್ಧಾರ್ಥ್ ಎಲ್​ಬಿಡಬ್ಲ್ಯು ಬಿ ಸಂಗ್ವಾನ್ 4

    ಶರತ್ ಶ್ರೀನಿವಾಸ್ ಬ್ಯಾಟಿಂಗ್ 56

    ಶ್ರೇಯಸ್ ಗೋಪಾಲ್ ಸಿ ಸೌರಭ್ ಬಿ ಅವಿನಾಶ್ 12

    ಕೆ. ಗೌತಮ್ ಸಿ ತ್ಯಾಗಿ ಬಿ ಅಮಿತ್ ಮಿಶ್ರಾ 41

    ಮಿಥುನ್ ಬಿ ಅಮಿತ್ ಮಿಶ್ರಾ 1

    ರೋನಿತ್ ಮೋರೆ ಬಿ ಅಮಿತ್ ಮಿಶ್ರಾ 0

    ಪ್ರತೀಕ್ ಜೈನ್ ಬ್ಯಾಟಿಂಗ್ 2

    ಇತರ: 9. ವಿಕೆಟ್ ಪತನ: 1-0, 2-21, 3-57, 4-65, 5-85, 6-110, 7-174, 8-177, 9-177. ಬೌಲಿಂಗ್: ಅಮಿತ್ ಮಿಶ್ರಾ 20-4-70-5, ಟಿ. ಪ್ರದೀಪ್ 12-4-27-0, ಹಿಮಾಂಶು ಸಂಗ್ವಾನ್ 15-3-47-3, ಅವಿನಾಶ್ ಯಾದವ್ 12-0-36-1, ಹರ್ಷ್ ತ್ಯಾಗಿ 6-0-13-0.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts