ಇಳಕಲ್ಲ.(ಗ್ರಾ): ಮನುಷ್ಯ ಧರ್ಮ ಅರಿತು ಬಾಳಬೇಕು ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳ ಹೇಳಿದರು.
ಬ್ರಾಹ್ಮಣ ಸಮಾಜ ಹಾಗೂ ಬಾಗಲಕೋಟೆಯ ವಿಶ್ವಮಾಧ್ವ ಪರಿಷತ್ ವತಿಯಿಂದ ವೆಂಕಟೇಶ ದೇವಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಗೀತಾ ಅಭಿಯಾನ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ತಿಳಿಸಿದಂತೆ ಅಸುರಿ ಗುಣಗಳನ್ನು ತ್ಯಜಿಸಿ ದೈವಿ ಗುಣಗಳನ್ನು ಹೊಂದಬೇಕು. ಉತ್ತಮ ಸಮಾಜ ನಿರ್ಮಾಣ ಮಾಡಲು ನಮ್ಮ ಅಂತರಂಗ ಶುದ್ಧಗೊಳಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಬಂಡು ಕಟ್ಟಿ ಮಾತನಾಡಿದರು. ಡಾ. ಸುಶೀಲ ಸು. ಕಾಖಂಡಕಿ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಾಂಡುರಂಗ ಕುಲಕರ್ಣಿ ಅವರು ಗುರುಗಳಿಗೆ ಪಾದಪೂಜೆ ಸಲ್ಲಿಸಿದರು.
ನಾರಾಯಣಾಚಾರ್ಯ ಪೂಜಾರ, ಹಾಗೂ ಪ್ರವಚನ ಕಾರ್ಯಕ್ರಮಗಳ ಪ್ರಾಯೋಜಕರಾದ ಡಾ. ಅಭಿಜಿತ್ ಗುರುರಾಜ ಕಾಖಂಡಕಿ, ಪ್ರೊ. ರಮೇಶ ಕೆ. ಕುಲಕರ್ಣಿ, ಭಾಸ್ಕರ ಪಾಟೀಲ, ಅಶೋಕ ಗೊಂಬಿ ಅವರನ್ನು ಗೌರವಿಸಲಾಯಿತು.
ಪಂ. ರಘೂತ್ತಮಾಚಾರ್ಯ ಹಾಗೂ ಪಂ. ಬಿಂಧುಮಾಧವಾಚಾರ್ಯ ನಾಗಸಂಪಿಗಿ, ಉತ್ತರಾದಿಮಠ ಸಂಸ್ಥಾನದ ಪ್ರಸ್ತುತ ದಿವಾನರಾದ ಶಶಿ ಆಚಾರ್ಯರು, ಕಾರ್ಕಳ, ಕಾಶೀನಾಥ ದೇಶಪಾಂಡೆ, ಗಿರಿಧರ ದೇಸಾಯಿ ಮತ್ತಿತರರಿದ್ದರು.