21 C
Bengaluru
Wednesday, January 22, 2020

ಭುವನೇಶ್ವರ್ ಕುಮಾರ್​ಗೆ ಮತ್ತೆ ಗಾಯ, ಎನ್​ಸಿಎ ಕಾರ್ಯದ ಬಗ್ಗೆ ಕಳವಳ

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ನವದೆಹಲಿ: ಬಿಸಿಸಿಐ ಬಿಟ್ಟರೆ ಭಾರತೀಯ ಕ್ರಿಕೆಟ್​ನ ಅತ್ಯಂತ ಶಕ್ತಿಶಾಲಿ ಕೇಂದ್ರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ). ಬಿಸಿಸಿಐನ ಮಾಜಿ ಅಧ್ಯಕ್ಷ ರಾಜ್ ಸಿಂಗ್ ಡುಂಗಾರ್​ಪುರ್

ಅವರ ಉತ್ಸಾಹದಿಂದ 2000ದಲ್ಲಿ ಬೆಂಗಳೂರಿನಲ್ಲಿ ಆರಂಭವಾಗಿದ್ದ ಎನ್​ಸಿಎಗೆ ಇಂದು ರಾಹುಲ್ ದ್ರಾವಿಡ್ ಕ್ರಿಕೆಟ್ ವ್ಯವಹಾರಗಳ ಮುಖ್ಯಸ್ಥರಾಗಿದ್ದಾರೆ. ಆದರೆ, ಎನ್​ಸಿಎ ದಿನದಿಂದ ದಿನಕ್ಕೆ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತಿರುವ ಅನುಮಾನ ವ್ಯಕ್ತವಾಗಿದೆ. ಅದರಲ್ಲೂ, ವೇಗಿ ಭುವನೇಶ್ವರ್ ಕುಮಾರ್ ಸಂಪೂರ್ಣ ಫಿಟ್ ಎಂದು ಘೋಷಿಸಿದ 15 ದಿನಗಳ ಒಳಗಾಗಿಯೇ ಮತ್ತೊಮ್ಮೆ ಅವರು ಗಾಯಗೊಂಡಿರುವುದು ಎನ್​ಸಿಎಯಲ್ಲಿನ ಸ್ಪೆಷಲಿಸ್ಟ್​ಗಳ ಕಾರ್ಯದ ಬಗ್ಗೆ ಕಳವಳ ಮೂಡುವಂತೆ ಮಾಡಿದೆ.

ಕ್ರಿಕೆಟ್ ಹೈ ಫರ್ಫಾಮೆನ್ಸ್ ಸೆಂಟರ್ ಆಗಿ ಗುರುತಿಸಿ ಕೊಂಡಿರುವ ಎನ್​ಸಿಎಗೆ ಗಾಯಾಳುವಾದ ಕ್ರೀಡಾಪಟುಗಳು ಪುನಃಶ್ಚೇತನ ಶಿಬಿರಕ್ಕಾಗಿ ಬರುವುದು ವಾಡಿಕೆ. ಆದರೆ, ಇಲ್ಲಿನ ಸ್ಪೆಷಲಿಸ್ಟ್​ಗಳ ಕಾರ್ಯದ ಬಗ್ಗೆ ಅಷ್ಟೇನೂ ಸಮಾಧಾನ ಹೊಂದಿಲ್ಲದ ಜಸ್​ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ, ಪುನಃಶ್ಚೇತನ ಶಿಬಿರಕ್ಕಾಗಿ ಎನ್​ಸಿಎಗೆ ಹೋಗಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಗಾಯದಿಂದ ಚೇತರಿಸಿಕೊಂಡು ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಮರಳಿದ್ದ ಭುವಿ, ಕೇವಲ 2 ಪಂದ್ಯ ಆಡಿದ ಬಳಿಕ ಸ್ಪೋರ್ಟ್ಸ್ ಹರ್ನಿಯಾ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.

ಬುಮ್ರಾ ಹಾಗೂ ಪಾಂಡ್ಯ ಪುನಃಶ್ಚೇತನಕ್ಕಾಗಿ ಎನ್​ಸಿಗೆ ತೆರಳುತ್ತಿಲ್ಲ ಎಂದು ಟೀಮ್ ಮ್ಯಾನೇಜ್​ವೆುಂಟ್​ಗೆ ತಿಳಿಸಿದ್ದಾರೆ. ಗುತ್ತಿಗೆಯಲ್ಲಿರುವ ಆಟಗಾರರು ಎನ್​ಸಿಎಯಲ್ಲಿಯೇ ಪುನಃಶ್ಚೇತನದಲ್ಲಿ ಭಾಗಿ ಯಾಗಬೇಕು ಎನ್ನುವುದು ನಿಯಮ. ಆದರೆ, ಒಂದು ಹಂತದ ಬಳಿಕ ಆಟಗಾರ ರಿಗೆ ತಾವು ಇಷ್ಟಪಟ್ಟ ಫಿಸಿಯೋ ಜತೆ ಪುನಃಶ್ಚೇತನದಲ್ಲಿ ಭಾಗಿಯಾಗುವ ಅವಕಾಶವನ್ನು ನೀಡಬೇಕಾಗುತ್ತದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭುವನೇಶ್ವರ್​ಗೆ ಶಸ್ತ್ರಚಿಕಿತ್ಸೆ ಅಗತ್ಯ

ಎನ್​ಸಿಎಯಲ್ಲಿ ಈ ರೀತಿಯ ಕಾರ್ಯಲೋಪ ಆಗಿರುವುದು ಇದೇ ಮೊದಲಲ್ಲ. ವೃದ್ಧಿಮಾನ್ ಸಾಹ ಇಂಜುರಿ ಬಗ್ಗೆಯೂ ಇದೇ ರೀತಿ ಆಗಿತ್ತು. ಆದರೆ, ಭುವನೇಶ್ವರ್ ಈ ಗಾಯದಿಂದಾಗಿ ಬಹುತೇಕ ನ್ಯೂಜಿಲೆಂಡ್ ಪ್ರವಾಸವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಕಾಣುತ್ತಿದೆ. ಅಲ್ಲಿನ ಸೀಮ್ ಹಾಗೂ ಸ್ವಿಂಗ್ ಕಂಡೀಷನ್​ಗೆ ಭುವಿ ಸೇವೆ ಅಗತ್ಯವಿತ್ತು. ಆದರೆ, ಈಗ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಅನಿವಾರ್ಯತೆ ಇದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದು, ಐಪಿಎಲ್ ವೇಳೆಗೆ ಅವರು ಕ್ರಿಕೆಟ್​ಗೆ ಮರಳುವ ಸಾಧ್ಯತೆ ಇದೆ ಎಂದಿದ್ದಾರೆ.

ತಮ್ಮ ದೇಹದಲ್ಲಿ ಎಲ್ಲೋ ತೊಂದರೆ ಆಗುತ್ತಿದೆ ಎಂದು ಟೀಮ್ ಮ್ಯಾನೇಜ್​ವೆುಂಟ್​ಗೆ ಭುವನೇಶ್ವರ್ ಶೀಘ್ರವಾಗಿ ಮಾಹಿತಿ ನೀಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ನಿತಿನ್ ಪಟೇಲ್ ಹಾಗೂ ಇತರ ಸಿಬ್ಬಂದಿ ಶೀಘ್ರವಾಗಿ ಮುಂಬೈನಲ್ಲಿ ಅವರ ಟೆಸ್ಟ್ ಮಾಡಿದ್ದಾರೆ. ಅವರು ಫಿಟ್ ಹಾಗೂ ಆಯ್ಕೆಗೆ ಲಭ್ಯ ಎಂದು ಎನ್​ಸಿಎ ಹೇಳಿದ ಬಳಿಕವೇ ಆಯ್ಕೆ ಮಾಡಿದ್ದೆವು. ಹಾಗಿದ್ದರೂ ಈ ಸಮಸ್ಯೆ ಕಾಡಿದೆ ಎಂದು ತಿಳಿಸಿದ್ದಾರೆ.

ಅಂದಾಜು 3 ತಿಂಗಳು ಭುವನೇಶ್ವರ್ ಎನ್​ಸಿಎಯಲ್ಲಿ ಇದ್ದರು. ಬೆಂಗಳೂರಿ ನಲ್ಲಿ ಅವರಿಗೆ ಸಾಕಷ್ಟು ಟೆಸ್ಟ್​ಗಳೂ ನಡೆದಿವೆ. ಅವರ ಎಲ್ಲ ಇಂಜುರಿಗಳ ಬಗ್ಗೆ ಗಮನ ನೀಡಲಾಗಿತ್ತು. ಆದರೆ, ಅವರ ಹರ್ನಿಯಾ ಬಗ್ಗೆ ಗಮನ ನೀಡಿಲ್ಲ. ಮುಂಬೈನಲ್ಲಿ ಇದರ ಪರೀಕ್ಷೆ ನಡೆಸಿದಾಗ ಗಾಯವಿರುವುದು ಪತ್ತೆಯಾಗಿದೆ.

| ಬಿಸಿಸಿಐ ಅಧಿಕಾರಿ

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...