ಮಂಡ್ಯ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿ ನೇಮಕಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ರಾಜ್ಯ ಹೈಕೋರ್ಟ್ ಮುಂದುವರಿಸಿ ಆದೇಶಿದೆ.
ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರು ಜಿಲ್ಲಾ ಕಸಾಪ ಕಾರ್ಯಕಾರಿ ಮಂಡಳಿ ವಿಸರ್ಜಿಸಿ ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಸ್.ಮುದ್ದೇಗೌಡ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಇದನ್ನು ಪ್ರಶ್ನಿಸಿ ಕಾರ್ಯಕಾರಿ ಮಂಡಳಿ ಸದಸ್ಯ ಚೇತನ್‌ಕುಮಾರ್ ಸೇರಿದಂತೆ ಹಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿ ಪುರಸ್ಕರಿಸಿದ್ದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಕಸಾಪ ನಿಯಮಾವಳಿಗಳ ಪಾಲನೆಯಾಗಿಲ್ಲ ಎಂಬ ಕಾರಣದಿಂದ ಡಾ.ಮಹೇಶಜೋಶಿ ನೇಮಕ ಮಾಡಿದ್ದ ಕಾರ್ಯಕಾರಿ ಮಂಡಳಿ ನೇಮಕ್ಕಕೆ ತಡೆಯಾಜ್ಞೆ ನೀಡಿದ್ದರು. ಈ ಬಗ್ಗೆ ಫೆ.6ರಂದು ವಿಚಾರಣೆ ನಡೆದಿದ್ದು, ಮತ್ತೆ ತಡೆಯಾಜ್ಞೆಯನ್ನು ಮುಂದುವರಿಸಿ ನ್ಯಾಯಮೂರ್ತಿಗಳು ಆದೇಶ ನೀಡಿದ್ದಾರೆ.
ಕಸಾಪ ಜಿಲ್ಲಾ ಕಾರ್ಯಕಾರಿ ನೇಮಕ ವಿವಾದ: ತಡೆಯಾಜ್ಞೆ ಮುಂದುವರಿಕೆ ಆದೇಶ

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional
devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…
ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ಸಾಕು! Watermelon
Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…
ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol
Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…