ಬಸವನಾಡಿನಲ್ಲಿ ಅಮಾನವೀಯ ಕೃತ್ಯ; ರೂಮ್‌ನಲ್ಲಿ ಕೈ-ಕಾಲು ಕಟ್ಟಿ ಹಾಕಿ ಹಲ್ಲೆ: ವಿಡಿಯೋ ವೈರಲ್ | Assaulted

blank

ವಿಜಯಪುರ: ಹಬ್ಬದ ಖರ್ಚಿಗೆ ಹಣ ಕೊಡುವುದಾಗಿ ಹೇಳಿ ಕಾರ್ಮಿಕರನ್ನು ಇಟ್ಟಿಗೆ ಭಟ್ಟಿಗೆ ಕರೆಯಿಸಿಕೊಂಡ ಮಾಲೀಕ ಅವರ ಕೈ-ಕಾಲು ಕಟ್ಟಿ ರೂಮ್‌ನಲ್ಲಿ ಕೂಡಿ ಹಾಕಿ ಪ್ಲಾಸ್ಟಿಕ್ ಪೈಪ್‌ನಿಂದ ಅಮಾನವೀಯವಾಗಿ ಹಲ್ಲೆ( Assaulted) ನಡೆಸಿರುವ ಪ್ರಕರಣ ವಿಜಯಪುರ ನಗರ ಹೊರವಲಯದ ಗಾಂಧಿ ನಗರದಲ್ಲಿ ಬೆಳಕಿಗೆ ಬಂದಿದೆ.

ಸ್ಥಳೀಯ ಗಾಂಧಿ ನಗರಕ್ಕೆ ಹತ್ತಿರದಲ್ಲಿರುವ ಬಸವನಗರದ ನಿವಾಸಿಯಾಗಿರುವ ಖೇಮು ರಾಠೋಡ ಮಾಲೀಕತ್ವದ ಇಟ್ಟಿಗೆ ಭಟ್ಟಿಯಲ್ಲಿ ಈ ಜ.15 ರಿಂದ 18ರವರೆಗೆ ಈ ಘಟನೆ ನಡೆದಿದ್ದು, ಇದೀಗ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ:‘ಪದ್ಮಾವತ್​’ನಲ್ಲಿ ದೀಪಿಕಾ ಮಾಡಿದ ಪಾತ್ರ​ ಮೊದಲು ಬಂದಿದ್ದು ನನಗೆ; ಬೇಡವೆನ್ನಲು ಕಾರಣ ಹೀಗಿದೆ ಎಂದ Kangana Ranaut 

ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ, ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಟ್ಟಿಗೆ ಭಟ್ಟಿ ಮಾಲೀಕರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಬೀಚ್​ನಲ್ಲಿ 1 ಸೆಲ್ಫಿಗೆ ₹ 100 ಎಂದ ರಷ್ಯನ್​ ಮಹಿಳೆ; ಜನರು ಮಾಡಿದ್ದೇನು ನೀವೇ ನೋಡಿ.. | Viral Video

ಪ್ರಕರಣದ ಹಿನ್ನೆಲೆ

ಖೇಮು ರಾಠೋಡ ಅವರ ಇಟ್ಟಿಗೆ ಭಟ್ಟಿಯಲ್ಲಿ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಸದಾಶಿವ ಬಸಪ್ಪ ಮಾದರ, ಸದಾಶಿವ ಚಂದ್ರಪ್ಪ ಬಬಲಾದಿ ಹಾಗೂ ಉಮೇಶ ಮಾಳಪ್ಪ ಮಾದರ ಎಂಬ ಕಾರ್ಮಿಕರು ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದರು. ಜ. 13 ರಂದು ಸಂಕ್ರಮಣದ ನಿಮಿತ್ತ ಸ್ವಗ್ರಾಮಕ್ಕೆ ತೆರಳಿದ್ದರು. ಬಳಿಕ ಮಾಲೀಕ ಖೇಮು ರಾಠೋಡ ಕೆಲಸಕ್ಕೆ ಬರುವಂತೆ ಕರೆ ಮಾಡಲಾಗಿ ಹಬ್ಬಕ್ಕಾಗಿ 10 ಸಾವಿರ ರೂಪಾಯಿ ಕೇಳಿದ್ದಾರೆ.(ಪ್ರತಿ ಸಾರಿ ದುಡ್ಡು ಕೇಳುತ್ತಿದ್ದಾರೆ ಎಂ ಬ ಕಾರಕ್ಕೆ) ಇಟ್ಟಿಗೆ ಭಟ್ಟಿಗೆ ಬಂದು ಹಣ ತೆಗೆದುಕೊಂಡು ಹೋಗುವಂತೆ ಖೇಮು ರಾಠೋಡ ಕಾರ್ಮಿಕರಿಗೆ ತಿಳಿಸಿದ್ದು, ಅದರಂತೆ ಜ. 15 ರಂದು ಬೆಳಗ್ಗೆ 9.30ಕ್ಕೆ ಕಾರ್ಮಿಕರು ಇಟ್ಟಿಗೆ ಭಟ್ಟಿಗೆ ಬಂದಿದ್ದಾರೆ. ಅವರನ್ನು ಮಾಲೀಕ ಖೇಮು ರಾಠೋಡ, ಆತನ ಮಗ ರೋಹನ ರಾಠೋಡ ಹಾಗೂ ಇನ್ನೂ ಕೆಲವು ಜನರು ಸೇರಿ ಅವರ ಕೈಕಾಲು ಕಟ್ಟಿ ರೂಮ್‌ನಲ್ಲಿ ಕೂಡಿ ಹಾಕಿ ಹೊಡೆದಿದ್ದಾರೆ. ಬಳಿಕ ಜ. 18 ರಂದು ಬೆಳಗ್ಗೆ 10ರ ಸುಮಾರಿಗೆ ಕಾರ್ಮಿಕರನ್ನು ರೂಮ್‌ನಿಂದ ಹೊರಗೆ ಕರೆದುಕೊಂಡು ಬಂದು ಪುನಃ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ಗುತ್ತಿಗೆದಾರರು:24ಕ್ಕೆ ಕಾರ್ಯಕಾರಿ ಸಮಿತಿ ಸಭೆ

ವಿಡಿಯೋ ವೈರಲ್

ಕಾರ್ಮಿಕರನ್ನು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವಕ್ತವಾಯಿತು. ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಖೇಮು ರಾಠೋಡ, ಸಚಿನ ಮಾನವರ ಹಾಗೂ ವಿಶಾಲ ಜುಮನಾಳ ಎಂಬುವರನ್ನು ಬಂಧಿಸಿದ್ದಾರೆ. ಕೆಲವರು ತಲೆ ಮರೆಸಿಕೊಂಡಿದ್ದು ಹುಡುಕಾಟ ನಡೆಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಅಭಿಷೇಕ್​​ & ಐಶ್ವರ್ಯಾ​ ಮದುವೆಗೆ ಕಳುಹಿಸಿದ್ದ ಸ್ವೀಟ್ಸ್​ ಅಮಿತಾಭ್​​​​ ಬಚ್ಚನ್​ಗೆ ವಾಪಸ್​​ ಕೊಟ್ಟೆ; ಶತ್ರುಘ್ನ ಸಿನ್ಹಾ ​​ಹೀಗೇಳಿದ್ದೇಕೆ? | Amitabh Bachchan

Share This Article

ಕೂಡಲೇ ಇವುಗಳನ್ನು ತಿನ್ನುವುದನ್ನು ನಿಲ್ಲಿಸದಿದ್ರೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗೋದು ಗ್ಯಾರಂಟಿ! Sperm Count

Sperm Count : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು…

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…