ಮಾರ್ಚ್​ ತ್ರೈಮಾಸಿಕದಲ್ಲಿ ಇನ್ಫೊಸಿಸ್​ ಸಂಸ್ಥೆಯ ನಿವ್ವಳ ಲಾಭದಲ್ಲಿ ಶೇ.13 ಹೆಚ್ಚಳ: 4,074 ಕೋಟಿ ರೂ. ನೆಟ್​ ಪ್ರಾಫಿಟ್​

ಬೆಂಗಳೂರು: ಪ್ರತಿಷ್ಠಿತ ಐಟಿ ಸಂಸ್ಥೆ ಇನ್ಫೊಸಿಸ್​ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕದಲ್ಲಿ ಒಟ್ಟು 4,074 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿಗೆ ಶುಕ್ರವಾರ ಸಲ್ಲಿಸಿರುವ ಮಾಹಿತಿಯ ಪ್ರಕಾರ 2018ರ ಅಕ್ಟೋಬರ್​-ಡಿಸೆಂಬರ್​ ತ್ರೈಮಾಸಿಕದಲ್ಲಿದ್ದ 3,609 ಕೋಟಿ ರೂ. ನಿವ್ವಳ ಲಾಭದಲ್ಲಿ ಶೇ.13 ಹೆಚ್ಚಳವಾಗಿ 4,074 ಕೋಟಿ ರೂ. ತಲುಪಿದೆ.

2018-19ನೇ ವಿತ್ತೀಯ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಇನ್ಫೊಸಿಸ್​ಗೆ 21,539 ಕೋಟಿ ರೂ. ಆದಾಯ ಬಂದಿದೆ. ಹಿಂದಿನ ತ್ರೈಮಾಸಿಕದಲ್ಲಿ 21,400 ಕೋಟಿ ರೂ. ಆದಾಯ ಇರುವುದಾಗಿ ಸಂಸ್ಥೆ ಹೇಳಿಕೊಂಡಿತ್ತು. ಇದಕ್ಕೆ ಹೋಲಿಸಿದಾಗ ಅದರ ಆದಾಯ ಹರಿವಿನಲ್ಲಿ ಶೇ.0.65 ಹೆಚ್ಚಳವಾಗಿದೆ.

10.50 ರೂ. ಲಭಾಂಶ: ಕಂಪನಿಯ ಪ್ರತಿ ಷೇರಿಗೆ 10.50 ರೂ. ಲಾಭಾಂಶ ನೀಡಲು ಸಂಸ್ಥೆಯ ನಿರ್ದೇಶಕರ ಮಂಡಳಿ ಸಮ್ಮತಿಸಿದೆ.