VIDEO | ಲಂಡನ್​​ನ ಓವಲ್​​ ಕ್ರೀಡಾಂಗಣದ ಮುಂದೆ ಚುರುಮುರಿ ಮಾರಾಟ ಮಾಡುತ್ತಿದ್ದ ಬ್ರಿಟಿಷ್​​ ಪ್ರಜೆ ವಿಡಿಯೋ ವೈರಲ್​​​

ಲಂಡನ್​: ಓವಲ್​​ ಕ್ರೀಡಾಂಗಣದ ಮುಂದೆ ಬ್ರಿಟಿಷ್​​​​​​ ಪ್ರಜೆಯೊಬ್ಬರು ಚುರುಮುರಿ ಮಾರಾಟ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಕ್ರೀಡಾಂಗಣದ ಹೊರಗಡೆ ಭಾರತದ ಬೀದಿ ಬದಿ ಸಿಗುವ ಚುರುಮುರಿ ಮಾರಾಟ ಮಾಡುತ್ತಿದ್ದನ್ನು ನೋಡಿ ಭಾರತದ ಕ್ರಿಕೆಟ್​​ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ.

ಉತ್ತರ ಭಾರತದ ‘ಜಾಲ್​​ಮುರಿ’ ಮತ್ತು ದಕ್ಷಿಣ ಭಾರತದಲ್ಲಿ ‘ಚುರುಮುರಿ’ ಎಂದು ಕರೆಯುವ ಈ ತಿನಿಸನ್ನು ಇಂಗ್ಲೆಂಡ್​​ನ ವ್ಯಕ್ತಿ ದೇಸಿ ಶೈಲಿಯಲ್ಲಿ ಮಾರಾಟ ಮಾಡುತ್ತಿರುವುದನ್ನು ಕಂಡ ಭಾರತೀಯರು ವಿಡಿಯೋ ಮಾಡಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್​​ನ ಆಂಗಸ್​​​​ ಡೆನೂನ್​​ ಎಂಬ ವ್ಯಕ್ತಿ ಕೋಲ್ಕತಾದಲ್ಲಿ ಈ ತಿಂಡಿಯನ್ನು ಸವಿದು ಬಂದು ಇಂಗ್ಲೆಂಡ್​​ನಲ್ಲಿ ಜಾಲ್​​​​ಮುರಿ ಎಕ್ಸ್ ಪ್ರೆಸ್​​ ಎಂದು ವ್ಯಾಪಾರ ಮಾಡಿ ಪ್ರತಿ ಪ್ಲೇಟ್​​ಗೆ 310 ರೂಪಾಯಿಯಂತೆ ವ್ಯಾಪಾರ ಮಾಡಿ ಭರ್ಜರಿ ಲಾಭ ಗಳಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​​ ಆಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *