ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಆರೋಗ್ಯವಿದ್ದರೆ ಏನು ಬೇಕಿದ್ದರೂ ಪಡೆಯಬಹುದು ಎನ್ನುವುದು ಇದರ ಅರ್ಥ. ಜೀವನದಲ್ಲಿ ಆರೋಗ್ಯ ಅತಿ ಮುಖ್ಯ. ಹಣ, ಆಸ್ತಿ ಸಂಪಾದಿಸಿದ ಮಾತ್ರಕ್ಕೆ ಸುಖವಾಗಿ ಬದುಕಬಹುದು ಎಂದು ಭಾವಿಸುವುದು ದಡ್ಡತನ. ಏಕೆಂದರೆ ಆರೋಗ್ಯವೇ ಇಲ್ಲದ ಮೇಲೆ ಲೌಕಿಕ ಸುಖಗಳು, ಸುಖ- ನೆಮ್ಮದಿಯನ್ನು ಕೊಡುವುದಿಲ್ಲ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನೀವು ಕೊಡಬಹುದಾದ ಅತಿ ದೊಡ್ಡ ಉಡುಗೊರೆ ಎಂದರೆ ಆರೋಗ್ಯ. ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ನಾವು ಎಷ್ಟೇ ಪ್ರಯತ್ನಿಸಿದರೂ ನಮ್ಮನ್ನು ಆಗಾಗ ಅನಾರೋಗ್ಯ ಸಮಸ್ಯೆ ಕಾಡದೆ ಬಿಡುವುದಿಲ್ಲ. ವಯೋಸಹಜವಾಗಿ ಕಾಡುವ ರೋಗಗಳು ಒಂದೆಡೆಯಾದರೆ, ದಿಢೀರ್ ಬಂದೆರಗುವ ಅನಾರೋಗ್ಯ ಸಮಸ್ಯೆಗಳು ಇಡೀ ಕುಟುಂಬವನ್ನು ಹೈರಾಣಾಗಿಸಿಬಿಡುತ್ತವೆ. ಮನೆಯಲ್ಲಿ ಯಾರೋ ಒಬ್ಬರು ಗಂಭೀರ ಆರೋಗ್ಯ ಸಮಸ್ಯೆಗೆ ಸಿಲುಕಿದಾಗ ಬರುವ ಆಸ್ಪತ್ರೆ ಖರ್ಚು ಆ ಕುಟುಂಬದ ಹಣಕಾಸಿನ ಪರಿಸ್ಥಿತಿಯನ್ನು ದಿಕ್ಕಾಪಾಲಾಗಿಸುತ್ತದೆ.
ತುಟ್ಟಿಯಾಗುತ್ತಿವೆ ವೈದ್ಯಕೀಯ ಸೇವೆ: ವಿಲ್ಲೀಸ್ ಟವರ್ಸ್ ವ್ಯಾಟ್ಸನ್ವತಿಯಿಂದ ನಡೆಸಲಾಗಿರುವ 2017ರ ಗ್ಲೋಬಲ್ ಮೆಡಿಕಲ್ ಟ್ರೆಂಡ್ಸ್ ಸಮೀಕ್ಷೆ ಪ್ರಕಾರ ಭಾರತದಲ್ಲಿ ಆರೋಗ್ಯ ಸೇವೆಗಳು ಪ್ರತಿ ವರ್ಷ ಶೇ.20 ತುಟ್ಟಿಯಾಗುತ್ತಿವೆ. ಆದರೆ ಬೇಸರದ ಸಂಗತಿಯೆಂದರೆ ಭಾರತದ ಗ್ರಾಮೀಣ ಪ್ರದೇಶದಲ್ಲಿನ ಶೇ.14.1 ಮತ್ತು ನಗರ ಪ್ರದೇಶದ ಶೇ.18.1 ಜನರು ಮಾತ್ರ ಆರೋಗ್ಯ ವಿಮೆ ಹೊಂದಿದ್ದಾರೆ. ನ್ಯಾಷನಲ್ ಸ್ಯಾಂಪಲ್ ಸರ್ವೆಯಲ್ಲಿ ಈ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಆರೋಗ್ಯ ವಿಮೆಯ ಮಹತ್ವ: ದೇಶದ ಬಹುಪಾಲು ಜನರಿಗೆ ಆರೋಗ್ಯ ವಿಮೆಯ ಮಹತ್ವ ಗೊತ್ತೇ ಇಲ್ಲ. ಅಯ್ಯೋ ನನಗೇನಾಗುತ್ತೆ, ಗಟ್ಟಿಮುಟ್ಟಾಗಿದ್ದೀನಿ, ಯಾವ ರೋಗನೂ ಬರಲ್ಲ, ಬಂದಾಗ ನೋಡ್ಕೋಳಣ ಬಿಡು. ಯಾರಾದ್ರು ಚೆನ್ನಾಗಿದ್ದಾಗಲೇ ಆರೋಗ್ಯ ಹದಗೆಡುತ್ತೆ ಅಂತ ಹೆಲ್ತ್ ಇನ್ಶೂರೆನ್ಸ್ಗೆ ಹಣ ಕಟ್ತಾರಾ ಅಂತ ಪ್ರಶ್ನಿಸೋ ಅಮಾಯಕರೇ ನಮ್ಮ ನಡುವೆ ಇದ್ದಾರೆ. ಹೀಗೆ ಮಾತನಾಡಿದವರು ಕಷ್ಟಕಾಲದಲ್ಲಿ ಹೆಂಡತಿಯ ಚಿನ್ನ ಅಡವಿಟ್ಟು ಆಸ್ಪತ್ರೆಗೆ ಹಣ ಕಟ್ಟಿದಂಥ ಸಾವಿರಾರು ಉದಾಹರಣೆ ನಮ್ಮ ಕಣ್ಮುಂದೆ ಇವೆ. ಹೆಲ್ತ್ ಇನ್ಶೂರೆನ್ಸ್ ಇಲ್ಲದ ಕಾರಣ ಶ್ರೀಮಂತರಾಗಿದ್ದವರೂ ಬಡವರಾದ ನೂರಾರು ನಿದರ್ಶನ ನಮ್ಮ ದೇಶದಲ್ಲಿ ಸಿಗುತ್ತವೆ.
ದುಡಿಯೋದು ಆಸ್ಪತ್ರೆಗೆ ದುಡ್ಡು ಕಟ್ಟೋಕಲ್ಲ: ದುಡಿಯೋದು ಆಸ್ಪತ್ರೆಗೆ ದುಡ್ಡು ಕಟ್ಟೋಕಲ್ಲ. ನಿಮ್ಮ ಬದುಕನ್ನು ಚೆನ್ನಾಗಿಟ್ಕೊಳ್ಳೋಕೆ. ನೀವು ಆಸ್ತಿ ಪಾಸ್ತಿನೆಲ್ಲ ಹುಷಾರು ತಪ್ಪಿದಾಗ ಮಾರ್ಕೆಂಡ್ರೆ ಬದುಕೋದು ಹೇಗೆ ಹೇಳಿ. ಯಾರು ದುಡ್ಡು ಕೊಡ್ತಾರೆ ಹೇಳಿ. ಅದಕ್ಕೆ ನಿಮ್ಮ ಕುಟುಂಬದ ಪ್ರತಿಯೊಬ್ಬರಿಗೂ ಹೆಲ್ತ್ ಇನ್ಶೂರೆನ್ಸ್ ಮಾಡ್ಸಿ. ವರ್ಷಕ್ಕೆ ಸುಮಾರು 10 ರಿಂದ 20 ಸಾವಿರ ರೂ. ಖರ್ಚು ಮಾಡಿದ್ರೆ ( 10 ರಿಂದ 20 ಸಾವಿರ ರೂ. ಅಗತ್ಯಕ್ಕೆ ಅನುಗುಣವಾಗಿ) ನಿಮ್ಮ ಕುಟುಂಬದವರೆಲ್ಲರಿಗೂ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಸಿಗುತ್ತೆ. ನೀವು ದುಡಿಯೋ ದುಡ್ಡನ್ನೆಲ್ಲ ಆಸ್ಪತ್ರೆಗೆ ಕಟ್ಟೋ ಬದ್ಲು ಅದರಲ್ಲಿ ಸ್ವಲ್ಪ ಹಣ ಆರೋಗ್ಯಕ್ಕೆ ಅಂತ ಎತ್ತಿಟ್ರೆ ಒಳ್ಳೇದಲ್ವಾ? ನೀವೇ ಹೇಳಿ.
ಯಾವ ಆರೋಗ್ಯ ವಿಮೆ ಪಡೆಯಬೇಕು ಅನ್ನೋದಕ್ಕೆ ಇಲ್ಲಿದೆ ಪಕ್ಕಾ ಉತ್ತರ
ಹೆಲ್ತ್ ಇನ್ಶೂರೆನ್ಸ್ ಯಾವ ಕಂಪನಿ ಯಿಂದ ಪಡೆಯಬೇಕು? ಕುಟಂಬಕ್ಕೆಲ್ಲ ಸೇರಿ ಒಂದು ಇನ್ಶೂರೆನ್ಸ್ ಪಡೆದರೆ ಸಾಕಾ? ತಂದೆ -ತಾಯಿಗೆ ಪ್ರತ್ಯೇಕವಾಗಿ ಇನ್ಶೂರೆನ್ಸ್ ಪಡೆಯಬೇಕಾ? ಹೆಲ್ತ್ ಇನ್ಶೂರೆನ್ಸ್ ಪಡೆಯುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ಹೆಲ್ತ್ ಇನ್ಶೂರೆನ್ಸ್ ಕ್ಲೇಮ್ ಮಾಡುವುದು ಹೇಗೆ? ಕವರೇಜ್ ಎಷ್ಟಿರಬೇಕು? ಹೆಲ್ತ್ ಇನ್ಶೂರೆನ್ಸ್ನಲ್ಲಿ ಎಲ್ಲ ಕಾಯಿಲೆಗೂ ಚಿಕಿತ್ಸೆ ಸಿಗುತ್ತಾ? ಫ್ಯಾಮಿಲಿ ಫೋ›ಟರ್ ಪಾಲಿಸಿ ಅಂದ್ರೆ ಏನು? ಗ್ರೂಪ್ ಇನ್ಶೂರೆನ್ಸ್ ಅಂದ್ರೆ ಏನು? ಕಂಪನಿ ಹೆಲ್ತ್ ಇನ್ಶೂರೆನ್ಸ್ ಇರೋರಿಗೆ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಬೇಕಾ? ಹೆಲ್ತ್ ಇನ್ಶೂರೆನ್ಸ್ ಅಪ್ಲಿಕೇಷನ್ ತುಂಬುವಾಗ ಗಮನಿಸಬೇಕಾದ ಅಂಶಗಳೇನು? ಎಲ್ಲಿ ಆರೋಗ್ಯ ವಿಮೆ ಖರೀದಿಸಿದ್ರೆ ಕಡಿಮೆ ದರಕ್ಕೆ ಒಳ್ಳೆಯ ಇನ್ಶೂರೆನ್ಸ್ ಸಿಗುತ್ತೆ? ಹೆಲ್ತ್ ಇನ್ಶೂರೆನ್ಸ್ನಲ್ಲಿ ಯಾವೆಲ್ಲ ಕಾಯಿಲೆಗಳಿಗೆ ಕವರೇಜ್ ಸಿಗುವುದಿಲ್ಲ? ಏಜೆಂಟರ ಬಳಿ ಇನ್ಶೂರೆನ್ಸ್ ಖರೀದಿಸುವಾಗ ಗಮನಿಸಬೇಕಾದ ಅಂಶಗಳೇನು… ಹೀಗೆ ಆರೋಗ್ಯ ವಿಮೆಗೆ ಸಂಬಂಧಿಸಿದ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಂಡಿಯನ್ ಮನಿ ಡಾಟ್ ಕಾಂ ನ ಫೈನಾನ್ಶಿಯಲ್ ಫ್ರೀಡಂ ಆಪ್ನಲ್ಲಿರುವ ಹೆಲ್ತ್ ಇನ್ಶೂರೆನ್ಸ್ ಕೋರ್ಸ್ನಲ್ಲಿ ಸಂಪೂರ್ಣ ಉತ್ತರವಿದೆ. ಸುಮಾರು 2 ಗಂಟೆಗಳ ಅವಧಿಯ ಈ ಕೋರ್ಸ್ ನಲ್ಲಿ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಸಮಗ್ರ ಚಿತ್ರಣ ನೀಡಲಾಗಿದೆ. ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಕೋರ್ಸ್ ವಿನ್ಯಾಸಗೊಳಿಸಲಾಗಿದೆ.
ಸಿ.ಎಸ್. ಸುಧೀರ್ ಅವರೇ ಕೋರ್ಸ್ ಮಾರ್ಗದರ್ಶಕರು
ಇಂಡಿಯನ್ ಮನಿ ಡಾಟ್ ಕಾಂ ಸಂಸ್ಥಾಪಕ, ಹಣಕಾಸು ತಜ್ಞ ಸಿ.ಎಸ್.ಸುಧೀರ್ ಅವರೇ ಫೈನಾನ್ಶಿಯಲ್ ಫ್ರೀಡಂ ಆಪ್ನಲ್ಲಿರುವ ಹೆಲ್ತ್ ಇನ್ಶೂರೆನ್ಸ್ ಕೋರ್ಸ್ನಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಆರೋಗ್ಯ ವಿಮೆ ಖರೀದಿಸುವಾಗ ಎದುರಾಗುವ ಎಲ್ಲ ಗೊಂದಲಗಳಿಗೆ ಸರಳ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಈ ಕೋರ್ಸ್ ವೀಕ್ಷಣೆ ಮಾಡಿದರೆ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಸಮಗ್ರ ಮಾಹಿತಿ ಸಿಗುವ ಜತೆಗೆ ಒಳ್ಳೆಯ ಆರೋಗ್ಯ ವಿಮೆ ಆಯ್ಕೆ ನಿಮಗೆ ಸಾಧ್ಯವಾಗುತ್ತದೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ನಿಂದ ಫೈನಾನ್ಶಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ ಆರೋಗ್ಯ ವಿಮೆಯ ಬಗ್ಗೆ ಪಕ್ಕಾ ಮಾಹಿತಿ ಅರಿತು ಒಳ್ಳೆಯ ಆರೋಗ್ಯ ವಿಮೆ ಖರೀದಿಸಿ, ನೆಮ್ಮದಿಯಿಂದ ಜೀವಿಸಿ.
ವಿಜಯವಾಣಿ ಓದುಗರಿಗೆ 2,000 ರೂ. ಸ್ಕಾಲರ್ಶಿಪ್
ಫೈನಾನ್ಶಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ. VIJAYAVANI ಎಂದು ರೆಫರಲ್ ಕೋಡ್ ಬಳಸಿ, 2,000 ರೂ. ಸ್ಕಾಲರ್ಶಿಪ್ ಪಡೆಯಿರಿ.
ಕೋರ್ಸ್ನಲ್ಲಿ ಏನೆಲ್ಲ ಮಾಹಿತಿ ಇದೆ?
1. ಕೋರ್ಸ್ ಪರಿಚಯ
2. ಹೆಲ್ತ್ ಇನ್ಶೂರೆನ್ಸ್ ಏಕೆ ?
3. ಹೆಲ್ತ್ ಇನ್ಶೂರೆನ್ಸ್ ಪದಗಳ ಪರಿಚಯ
4. ನೀವು ಯಾವಾಗ ಹೆಲ್ತ್ ಇನ್ಶೂರೆನ್ಸ್ ಖರೀದಿಸಬೇಕು?
5. ವಿವಿಧ ಮಾದರಿಯ ಹೆಲ್ತ್
ಇನ್ಶೂರೆನ್ಸ್ ಪಾಲಿಸಿಗಳು
6. ನಿಮಗೆ ಯಾವ ಹೆಲ್ತ್ ಪ್ಲಾ್ಯನ್ ಸರಿಹೊಂದುತ್ತದೆ?
7. ಹೆಲ್ತ್ ಇನ್ಶೂರೆನ್ಸ್ನಲ್ಲಿ ಪರಿಗಣಿಸದ ಅಂಶಗಳು
8. ಹೆಲ್ತ್ ಇನ್ಶೂರೆನ್ಸ್ ರೈಡರ್ಸ್
9. ನಿಮಗೆ ಎಷ್ಟು ಹೆಲ್ತ್ ಇನ್ಶೂರೆನ್ಸ್
ಕವರೇಜ್ ಬೇಕು?
10. ಸರಿಯಾದ ಆರೋಗ್ಯ ವಿಮೆ ಆಯ್ಕೆ ಹೇಗೆ?
11. ಪೋರ್ಟೆಬಲಿಟಿ ( ಪರಿವರ್ತಿಸುವುದು/ವರ್ಗಾಯಿಸುವುದು)
12. ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್ ( ಟಿಪಿಎ)
13. ಕ್ಲೇಮ್ ಸೆಟಲ್ಮೆಂಟ್
14. ಕ್ಲೇಮ್ ನಿರಾಕರಿಸಿದರೆ ಏನು ಮಾಡ್ಬೇಕು?
15. ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ವಿಸ್ತರಿಸಿಕೊಳ್ಳುವುದು ಹೇಗೆ?
16. ಸಾಕಷ್ಟು ಇನ್ಶೂರೆನ್ಸ್ ಕವರೇಜ್ ಇಲ್ಲದಿದ್ರೆ ಏನು ಮಾಡ್ಬೇಕು?
17. ಆರೋಗ್ಯ ವಿಮೆ ಬಗ್ಗೆ ಮತ್ತೆಮತ್ತೆ ಕೇಳುವ ಪ್ರಶ್ನೆಗಳು