More

  ಕೃಷಿ ಮೇಳದಲ್ಲಿ ಆಕರ್ಷಣೆಯ ಕೇಂದ್ರಸ್ಥಾನವಾದ ಮಾಹಿತಿ ಪ್ರದರ್ಶನ ಮಳಿಗೆ

  ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ಆಯೋಜಿಸಿರುವ ಕೃಷಿಮೇಳದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಪ್ರದರ್ಶನದ ಮಳಿಗೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ, ಶಾಸಕ ಶರತ್​ ಬಚ್ಚೇಗೌಡ ಇನ್ನಿತರರಿದ್ದರು.

  ಮಾಹಿತಿ ಪ್ರದರ್ಶನ ಮಳಿಗೆಯ ವಿನ್ಯಾಸಯು ವಿಶೇಷವಾಗಿದ್ದು, ಛಾಯಾಚಿತ್ರಗಳನ್ನು ತೆಗೆಸಿಕೊಳ್ಳಲು ಇಚ್ಛಿಸುವ ಆಸಕ್ತರಿಗೆ ಆಕರ್ಷಣೆಯ ತಾಣವಾಗಿದೆ. ಇಲ್ಲಿ ಅಳವಡಿಸಿರುವ ಫಲಕಗಳಲ್ಲಿ ಸರ್ಕಾರದ ಮಹತ್ವಾಕಾಂೆಯ ಕಾರ್ಯಕ್ರಮಗಳ ಮಾಹಿತಿ ಜತೆಗೆ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಕೂಡ ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳಾದ ಶಕ್ತಿ ಯೋಜನೆ, ಗೃಹಲ್ಮ ಯೋಜನೆ, ಗೃಹಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ ಯೋಜನೆಯ ಮಾಹಿತಿ ಪ್ರದರ್ಶಿಸಲಾಗಿದೆ.

  ರಾಜ್ಯ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳಾದ ಜನತಾದರ್ಶನ, ಪಿಟಿಸಿಎಲ್​ ಕಾಯ್ದೆಗೆ ತಿದ್ದುಪಡಿ, ಇಂದಿರಾ ಕ್ಯಾಂಟೀನ್​ ಮರು ಪ್ರಾರಂಭ, ರಾಭಾಗ್ಯಕ್ಕೆ ಹತ್ತರ ಸಂಭ್ರಮ, ಸಾಮಾಜಿಕ&ಶೈಣಿಕ ಸಮೀೆ, ಬ್ರಾ$್ಯಂಡ್​ ಬೆಂಗಳೂರು, ಸಾಮಾಜಿಕ ಮಾಧ್ಯಮ ನಿರ್ವಹಣಾ ಕೋಶ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳ ಕುರಿತು ಮಾಹಿತಿ ಪ್ರದರ್ಶನ ಮಾಡಲಾಗಿದೆ.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts