24.7 C
Bangalore
Sunday, December 15, 2019

ಕರಾವಳಿಯಲ್ಲಿ ಸಾಂಕ್ರಾಮಿಕ ರೋಗ

Latest News

ಯೋಗ, ಧ್ಯಾನದಿಂದ ಉತ್ತಮ ಆರೋಗ್ಯ

ತುಮಕೂರು: ಯೋಗ, ಧ್ಯಾನಕ್ಕೆ ಒತ್ತು ಕೊಡುವ ಮೂಲಕ ನಿವೃತ್ತ ಪೊಲೀಸರು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ...

ಕನ್ನಡ ಸಾರಸ್ವತ ಲೋಕದ ದಿಗ್ಗಜರ ಕೃತಿಗಳ ಅಧ್ಯಯನ ಪರಿಪಾಠವಾಗಲಿ

ನೆಲಮಂಗಲ: ವಿದ್ಯಾರ್ಥಿಗಳು ಕನ್ನಡ ಸಾರಸ್ವತ ಲೋಕದ ದಿಗ್ಗಜರ ಕೃತಿಗಳನ್ನು ಅಧ್ಯಯನ ಮಾಡುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಎಚ್.ಎಸ್.ಲಕ್ಷ್ಮೀನಾರಾಯಣ್‌ಭಟ್ ತಿಳಿಸಿದರು. ಬೆಂಗಳೂರು ಉತ್ತರ ತಾಲೂಕು ದಾಸನಪುರದ ಆಚಾರ್ಯ...

ದ್ವಿಚಕ್ರ ವಾಹನ ಮತ್ತು ಕಾರು ಡಿಕ್ಕಿಯಾಗಿ ದ್ವಿ ಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು

ದಾಬಸ್‌ಪೇಟೆ: ಮಾಕೇನಹಳ್ಳಿ ಗ್ರಾಮದಲ್ಲಿ ಶನಿವಾರ ದ್ವಿಚಕ್ರ ವಾಹನ ಮತ್ತು ಕಾರು ಡಿಕ್ಕಿಯಾಗಿ ದ್ವಿ ಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ. ತುಮಕೂರು ಜಿಲ್ಲೆ...

ರಾಹುಲ್​ ಗಾಂಧಿಯವರನ್ನು ವಿರೋಧಿಸಿದ ಶಿವಸೇನೆಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ಇನ್ನೂ ಬೆಂಬಲ ನೀಡುತ್ತಿದೆಯಾ? ಗೊಂದಲ ವ್ಯಕ್ತಪಡಿಸಿದ ಮಾಯಾವತಿ

ನವದೆಹಲಿ: ನಾನು ರಾಹುಲ್​ ಸಾವರ್ಕರ್​ ಅಲ್ಲ ಎಂದು ಹೇಳಿದ್ದ ರಾಹುಲ್ ಗಾಂಧಿ ವಿರುದ್ಧ ಶಿವಸೇನೆ ತಿರುಗಿಬಿದ್ದಿದೆ. ರಾಹುಲ್​ ಗಾಂಧಿಯವರು ಸಾವರ್ಕರ್​ ಬಗ್ಗೆ ಆ ಮಾತುಗಳನ್ನು ಆಡಿದ್ದು ದುರದೃಷ್ಟಕರ...

ಲವ್​ ಫೇಲ್ಯೂರ್​ನಿಂದ ಯುವಕ ಆತ್ಮಹತ್ಯೆ: ಶವಪರೀಕ್ಷೆ ನಿರಾಕರಿಸಿ ಮೃತದೇಹ ಹೊತ್ತೊಯ್ದವರು ಪೊಲೀಸ್​ ಕೈಗೆ ಸಿಕ್ಕಿಬಿದ್ದಿದ್ಹೇಗೆ?

ಕರ್ನೂಲ್​: ಶವಪರೀಕ್ಷೆ ಬೇಡವೆಂದು ಹೇಳಿ ಯುವಕರಿಬ್ಬರು ತಮ್ಮ ಕುಟುಂಬದ ಸದಸ್ಯನೊಬ್ಬನ ಮೃತದೇಹವನ್ನು ಬೈಕ್​ನಲ್ಲಿ ಹಾಕಿಕೊಂಡು ಪರಾರಿಯಾಗುವಾಗ ಪೊಲೀಸರು ಬೆನ್ನತ್ತಿ ಮೃತದೇಹವನ್ನು ಮರಳಿ ತಂದ...

ಭರತ್ ಶೆಟ್ಟಿಗಾರ್ ಮಂಗಳೂರು

ಕರಾವಳಿಯಲ್ಲಿ ಬದಲಾಗುತ್ತಿರುವ ಹವಾಮಾನ ಹಲವಾರು ರೀತಿಯ ಸಾಂಕ್ರಾಮಿಕ ರೋಗಗಳನ್ನು ಆಮಂತ್ರಿಸುತ್ತಿದೆ. ಪ್ರಸ್ತುತ ಹೆಚ್ಚಾಗಿ ಗಂಟಲು ನೋವು, ಶೀತ, ಕಫ, ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಜನರನ್ನು ಬಸವಳಿಯುವಂತೆ ಮಾಡಿದೆ. ಇದೇ ಕಾರಣಕ್ಕೆ ವೈದ್ಯರ ಬಳಿ ತೆರಳುವವರ ಸಂಖ್ಯೆ ಅಧಿಕವಾಗಿದೆ.

ಜತೆಗೆ ಬಿಸಿಲಲ್ಲಿ ಕೆಲಸ ಮಾಡುವವರಿಗೆ ನಿರ್ಜಲೀಕರಣ (ಡಿಹೈಡ್ರೇಶನ್) ಸಮಸ್ಯೆಯೂ ಕಾಡುತ್ತಿದೆ.
ಬೆಳಗ್ಗಿನ ಅವಧಿಯಲ್ಲಿ ಸಣ್ಣ ಚಳಿ, ಮಧ್ಯಾಹ್ನವಾಗುತ್ತಲೇ ಸುಡು ಬಿಸಿಲು, ಕೆಲವೊಮ್ಮೆ ಮೋಡ ಕವಿದ ವಾತಾವರಣ, ಸಾಯಂಕಾಲ-ರಾತ್ರಿ ಶೀತ ಮಿಶ್ರಿತ ಬಿಸಿ ವಾತಾವರಣ. ಇದು ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ಕಂಡುಬರುತ್ತಿರುವ ವಾತಾವರಣದ ವಿಶ್ಲೇಷಣೆ. ಸಾಂಕ್ರಾಮಿಕ ರೋಗ ಹರಡುವ ವೈರಸ್‌ಗಳಿಗೆ ಇದು ಉತ್ತಮವಾಗಿದೆ. ಒಂದು ಸಲ ಗಂಟಲು ನೋವು ಕಾಣಿಸಿಕೊಂಡರೆ ಅದು ಶೀತಕ್ಕೆ ಪರಿವರ್ತನೆಯಾಗುತ್ತದೆ. ಬಳಿಕ- ಜ್ವರ ಕೆಮ್ಮು ಕಾಣಿಸಿಕೊಂಡು ಒಂದು ವಾರ ಕಾಲ ಕಾಡುತ್ತದೆ.

ಕೆಲವೊಬ್ಬರಿಗೆ ಕೆಮ್ಮು-ಕಫ ತಿಂಗಳಿಂದ ಕಾಡುತ್ತಿದೆ. ಸುಸ್ತು, ನಿತ್ರಾಣ ಉಂಟಾಗಿ ಮಲಗಿಕೊಂಡೇ ವಿಶ್ರಾಂತಿ ಪಡೆಯುವ ಪರಿಸ್ಥಿತಿ ಬಂದೊದಗುತ್ತಿದೆ. ಇದರ ಜತೆಗೆ ನೀರಿನಿಂದಲೇ ಹರಡುವ ಆಮಶಂಕೆ, ವಾಂತಿ-ಭೇದಿ, ವಿಷಮ ಶೀತ ಜ್ವರ, ಟೈಫೈಡ್ ರೋಗಗಳೂ ಬೇಸಿಗೆಯಲ್ಲಿ ಬಾಧಿಸುವ ಕಾಡುವ ಸಾಧ್ಯತೆಯಿದೆ.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಪ್ರತಿನಿತ್ಯ ಸರಾಸರಿ 50 ಮಂದಿ ಗಂಟಲು ನೋವು, ಶೀತ, ಕಫ, ಜ್ವರದ ಕಾರಣಕ್ಕೆ ಔಷಧಕ್ಕೆ ಬರುತ್ತಿದ್ದಾರೆ. ಖಾಸಗಿ ಕ್ಲಿನಿಕ್‌ಗಳಲ್ಲಿಯೂ ಜ್ವರ ಹಿನ್ನೆಲೆಯಲ್ಲಿ ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಗಾಮೀಣ ಭಾಗಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜನರು ಭೇಟಿ ನೀಡುತ್ತಿದ್ದಾರೆ.

ನಿಯಂತ್ರಣ ಹೇಗೆ?: ಕುದಿಸಿ ಆರಿಸಿದ ಶುದ್ಧ ನೀರನ್ನೇ ಸೇವಿಸಬೇಕು. ರಾತ್ರಿ ಹಾಗೂ ಬೆಳಗ್ಗಿನ ಜಾವ ವಾಕಿಂಗ್, ಸೈಕ್ಲಿಂಗ್ ಹೋಗುವ ಅಭ್ಯಾಸ ಇರುವವರು ತಲೆ, ಕಿವಿ ಮುಚ್ಚಿಗೆಯಾಗುವ ಟೊಪ್ಪಿ ಧರಿಸಬೇಕು. ಇಬ್ಬನಿ ಸೋಂಕದಂತೆ ಎಚ್ಚರ ವಹಿಸಬೇಕು. ಐಸ್‌ಕ್ರೀಂ, ತಂಪು ಪಾನೀಯ ಸೇವನೆ ಉತ್ತಮವಲ್ಲ. ಹೆಚ್ಚು ಖಾರ ಸೇವನೆ ಮಾಡದೇ ಇರುವುದು ಒಳ್ಳೆಯದು. ಬಿಸಿ ಬಿಸಿಯಾದ ಆಹಾರ ಸೇವನೆ ಉತ್ತಮ ಎನ್ನುತ್ತಾರೆ ವೈದ್ಯರು.

ಮನೆ ಔಷಧ: ಬಿಸಿ ನೀರಿಗೆ ಉಪ್ಪು ಹಾಕಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವಿಗೆ ಮುಕ್ತಿ ದೊರೆಯುತ್ತದೆ. ಉಪ್ಪು ನೀರಲ್ಲಿ ಸೋಂಕು ನಿರೋಧಕ ಇರುವುದರಿಂದ ದಿನದಲ್ಲಿ ನಾಲ್ಕು ಬಾರಿ ಹೀಗೆ ಮಾಡುವುದರಿಂದ ನೋವು ಉಪಶಮನವಾಗುತ್ತದೆ. ಗಂಟಲು ನೋವಿಗೆ ಜೇನು ಕೂಡಾ ಉತ್ತಮ ಔಷಧ. ಒಂದು ಲೋಟ ನೀರಿಗೆ ಎರಡು ಟೇಬಲ್ ಸ್ಪೂನ್‌ಗಳಷ್ಟು ಜೇನು ಸೇರಿಸಿ ದಿನಕ್ಕೆ ಐದಾರು ಬಾರಿ ಸೇವಿಸಿದರೆ ಶೀತ, ಗಂಟಲು ನೋವಿನಿಂದ ಮುಕ್ತಿ ದೊರೆಯುತ್ತದೆ. ಉಪ್ಪು ಮತ್ತು ಕಾಳುಮೆಣಸಿನ ಹುಡಿಯನ್ನು ಲಿಂಬೆಯ ತುಂಡಿಗೆ ಚಿಮುಕಿಸಿ ನಂತರ ಲಿಂಬೆಯನ್ನು ಚಪ್ಪರಿಸಬೇಕು. ಲಿಂಬೆಯ ರಸವನ್ನು ಬಿಸಿ ನೀರಿನೊಂದಿಗೆ ಮಿಶ್ರ ಮಾಡಿಕೊಂಡು ಬಾಯಿ ಮುಕ್ಕಳಿಸುವುದರಿಂದಲೂ ನೋವು ಶಮನವಾಗುತ್ತದೆ ಎಂದು ಸುಳ್ಯ ನೀರಬಿದಿರೆಯ ಹಿರಿಯ ನಾಟಿ ವೈದ್ಯರಾಮಣ್ಣ ನಾಕ ವಿಜಯವಾಣಿಗೆ ತಿಳಿಸಿದ್ದಾರೆ.

ಸಾರ್ವಜನಿಕ ಸಮಾರಂಭಗಳಲ್ಲಿ ಎಚ್ಚರ: ಕರಾವಳಿಯಲ್ಲಿ ಪ್ರಸ್ತುತ ಸಾರ್ವಜನಿಕ ಸಭೆ ಸಮಾರಂಭಗಳ ಸೀಸನ್ ನಡೆಯುತ್ತಿದೆ. ಪ್ರತಿ ಊರಿನಲ್ಲಿಯೂ ಜಾತ್ರೆ, ನೇಮ, ಕೋಲ, ಬ್ರಹ್ಮಕಲಶ ಎಂದು ಜನರು ಒಟ್ಟಾಗುತ್ತಿದ್ದಾರೆ. ಗಂಟಲು ನೋವು, ಶೀತ, ಕಫ ಇರುವ ವ್ಯಕ್ತಿಗಳೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ವೈರಸ್‌ಗಳು ಒಬ್ಬರಿಂದೊಬ್ಬರಿಗೆ ಹರಡುತ್ತಿದೆ.

ಬೇಸಿಗೆ ಹಿನ್ನಲೆಯಲ್ಲಿ ಅತಿಯಾಗಿ ತಂಪು ಪಾನೀಯ ಸೇವನೆ ಸಲ್ಲದು. ಒಂದು ಸಲ ಹಿತವೆನಿಸಿದರೂ ಗಂಟಲ ಮೇಲೆ ಪರಿಣಾಮ ಬೀರಿ ಶೀತ-ಜ್ವರಕ್ಕೆ ಕಾರಣವಾಗಬಹುದು. ಕುದಿಸಿ ಆರಿಸಿದ ನೀರು ಕುಡಿಯಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಇತರರೊಂದಿಗೆ ವ್ಯವಹರಿಸುವಾಗ ಜಾಗರೂಕತೆ ವಹಿಸುವುದು ಅಗತ್ಯ.
| ಡಾ.ರಾಮಕೃಷ್ಣ ರಾವ್ ದ.ಕ.ಜಿಲ್ಲಾ ಆರೋಗ್ಯಾಧಿಕಾರಿ

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...