ಸಾಂಕ್ರಾಮಿಕ ರೋಗ ನಿಯಂತ್ರಣ ಮನಪಾ ನಿರಾಸಕ್ತಿ

ಶ್ರವಣ್‌ಕುಮಾರ್ ನಾಳ, ಮಂಗಳೂರು

ಮಂಗಳೂರು ನಗರ ವ್ಯಾಪ್ತಿಯಲ್ಲಿ ಡೆಂೆ ಹಾಗೂ ಮಲೇರಿಯಾ ನಿಯಂತ್ರಣಕ್ಕಾಗಿ ಮಾಡಿರುವ ಸಾಫ್ಟ್‌ವೇರ್‌ನ್ನು ಮತ್ತೆ ಬಳಕೆಗೆ ಅನುಷ್ಠಾನ ಮಾಡುವ ನಿರ್ಧಾರ ಕೈಗೊಂಡ ಬಳಿಕ ಡೆಂೆ, ಮಲೇರಿಯಾ ಪ್ರಕರಣ ಪತ್ತೆಯಾಗುತ್ತಿರುವುದು ಗಮನಾರ್ಹವಾಗಿ ಹೆಚ್ಚಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ಪ್ರಮುಖ ಅಂಗ ಎಂಪಿಡಬ್ಲೂೃಗಳು(ಬಹೂಪಯೋಗಿ ಕಾರ್ಮಿಕರು). ಇವರ ಸಮರ್ಪಕ ಬಳಕೆ ಸಾಂಕ್ರಾಮಿಕ ರೋಗಗಳಾದ ಡೆಂೆ, ಮಲೇರಿಯಾ ಹತೋಟಿಗೆ ತರುವುದಕ್ಕೆ ಅತಿಮುಖ್ಯ. ಕಳೆದ 1 ತಿಂಗಳ ಹಿಂದೆ ಇದನ್ನು ಏಕಾಗ್ರತೆಯಿಂದ ಮಾಡಿರುವ ಮನಪಾ ಆಡಳಿತ ಕಳೆದ 15 ದಿನದಿಂದ ಮಾತ್ರ ಸಾಂಕ್ರಾಮಿಕ ರೋಗ ನಿಯಂತ್ರಣದತ್ತ ಹೆಚ್ಚು ಆಸಕ್ತಿ ತೋರಿಲ್ಲ.

*ಫಾಲೊಅಪ್ ಮಾಡದ ಪಾಲಿಕೆ

ಒಂದೆಡೆ ಎಲ್ಲ ಲ್ಯಾಬ್‌ಗಳು, ಆಸ್ಪತ್ರೆಗಳಿಂದ ಡೆಂೆ, ಮಲೇರಿಯಾ ಪೀಡಿತರ ದತ್ತಾಂಶ ಪಡೆದು, ಅದನ್ನು ಮನಪಾ ಆರೋಗ್ಯ ವಿಭಾಗಕ್ಕೆ ಕಳಿಸುತ್ತವೆ. ಬಳಿಕ ಆಡಳಿತ ಆಯಾ ಪ್ರದೇಶಕ್ಕೆ ಅಲ್ಲಿನ ಎಂಪಿಡಬ್ಲ್ಯೂಗಳನ್ನು ಕಳುಹಿಸುವುದು ಅವರಿಂದ ಸ್ಥಳೀಯವಾಗಿ ಲಾರ್ವ ನಿರ್ಮೂಲನೆ, ಸ್ಥಳೀಯ ಜನರ ಕಾಂಟಾಕ್ಟ್ ಸ್ಮಿಯರ್ ಟೆಸ್ಟ್ ಮಾಡುವುದು, 14 ದಿನಗಳ ಬಳಿಕ ಮತ್ತೆ ಭೇಟಿ ನೀಡಿ ಸಾಂಕ್ರಾಮಿಕ ರೋಗ ಪೀಡಿತರು ಗುಣಮುಖರಾಗಿರುವುದನ್ನು ಖಚಿತಪಡಿಸಿ ಫೈಲ್ ಕ್ಲೋಸ್ ಮಾಡುವುದು ವ್ಯವಸ್ಥೆ. ಇದು ಸರಿಯಾಗಿ ಕಾರ್ಯನಿರ್ವಹಿಸಿದರೆ, ಫಾಲೊಅಪ್ ಆದರೆ ಡೆಂೆ, ಮಲೇರಿಯಾ ನಿಯಂತ್ರಣವಾಗುತ್ತದೆ, ಸ್ಮಿಯರ್ ಟೆಸ್ಟ್ ಮಾಡುವುದರಿಂದ ಪರಿಸರದಲ್ಲಿ ಇತರರಿಗೆ ಹಬ್ಬುವುದು ತಪ್ಪುತ್ತದೆ. ಒಂದು ಹಂತದ ವರೆಗೆ ಈ ವ್ಯವಸ್ಥೆ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದ್ದು, ಡೆಂೆ, ಮಲೇರಿಯಾ ಪ್ರಕರಣ ಇಳಿಮುಖವಾಗಿದೆ.

—————-

ಮೀಟರ್ ರೀಡಿಂಗ್ ಕೆಲಸ

ಇತ್ತೀಚೆಗೆ ಕೆಲವು ದಿನಗಳಿಂದ ಡೆಂೆ, ಮಲೇರಿಯಾ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿದ್ದ ಎಂಪಿಡಬ್ಲೂೃಗಳನ್ನು ನೀರಿನ ಮೀಟರ್ ರೀಡಿಂಗ್‌ಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಅವರಿಗೆ ಹೆಚ್ಚುವರಿ ಹೊರೆ ಇದೆ. ಮಲೇರಿಯಾ ವರದಿಯಾದ ಕಡೆಗಳಿಗೆ ಹೋಗಿ ಫಾಲೊ ಅಪ್ ಮಾಡುವುದು, ಲಾರ್ವ ನಿರ್ಮೂಲನೆಯ ಕೆಲಸ ಹಾಗೂ ಕಾಂಟ್ಯಾಕ್ಟ್ ಸ್ಮಿಯರ್ ಟೆಸ್ಟ್ ಮಾಡುವುದು ಸರಿಯಾಗಿ ಆಗುತ್ತಿಲ್ಲ, ಇದರಿಂದಾಗಿ ಮತ್ತೆ ಡೆಂೆ, ಮಲೇರಿಯಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. 2015ರಿಂದ 2017ರ ವರೆಗೆ ಮಲೇರಿಯಾ ಸಾಫ್ಟ್‌ವೇರ್ ಆಧಾರಿತ ವ್ಯವಸ್ಥೆ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಲ್ಯಾಬ್‌ಗಳಿಂದ ಮಲೇರಿಯಾ ರಿಪೋರ್ಟಿಂಗ್ ಗರಿಷ್ಠ ಸಂಖ್ಯೆಯಲ್ಲಿ ಆಗುತ್ತಿತ್ತು. ಮೊದಲು ಕೆಲವು ಸಾವಿರದಲ್ಲಿದ್ದ ಟೆಸ್ಟ್ ವರದಿ ಸಂಖ್ಯೆ ಐದಂಕೆ ಮೀರತೊಡಗಿತು.

——————–

————————

ಮನಪಾದಲ್ಲಿ ನೀರಿನ ಮೀಟರ್ ರೀಡಿಂಗ್ ಮಾಡುವ ಎಂಪಿಡಬ್ಲ್ಯು ಕಾರ್ಯಕರ್ತರೇ ಡೆಂಘಿ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಪರಿಸ್ಥಿತಿ ಇದೆ. ಡೆಂೆ, ಮಲೇರಿಯಾ ನಿಯಂತ್ರಣದಲ್ಲಿ ಎಂಪಿಡಬ್ಲೂೃಗಳ ಕೆಲಸ ಅತಿ ಮುಖ್ಯ. ಅವರನ್ನು ಇತರ ಕಾರ್ಯಗಳಿಗೆ ಬಳಸಿಕೊಳ್ಳುವುದು ಕೆಲವೊಮ್ಮೆ ಅನಿವಾರ್ಯ, ಆದರೆ ಮುಖ್ಯವಾಗಿ ಡೆಂೆ, ಮಲೇರಿಯಾವನ್ನು ಕಡೆಗಣಿಸದಂತೆ ಎಲ್ಲಾ ಕಾರ್ಯದಲ್ಲಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ.

ಸುಧೀರ್ ಶೆಟ್ಟಿ ಕಣ್ಣೂರು, ಮೇಯರ್ ಮಂಗಳೂರು

Share This Article

ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ.…

ಈರುಳ್ಳಿ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ! ಸಿಪ್ಪೆ ವೇಸ್ಟ್​ ಎಂದು ಬಿಸಾಡೋ ಬದಲು ಹೀಗೆ ಮಾಡಿ

ಯಾವುದೇ ಅಡುಗೆ ಮಾಡಿದ್ರು ಈರುಳ್ಳಿ ಬೇಕೆ... ಬೇಕು. ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ…

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…