More

    ಸೋಂಕಿದ್ದರೂ ನೆಗೆಟೀವ್ ! ಸಿಟಿ ಸ್ಕ್ಯಾನ್​ನಲ್ಲಿ ಪಾಸಿಟಿವ್ ಬಂದರೆ ಆಸ್ಪತ್ರೆಗೆ ದಾಖಲು

    ಬೆಂಗಳೂರು : ಕರೊನಾ ಸೋಂಕು ತಗುಲಿದ್ದರೂ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಕೆಲವೊಮ್ಮೆ ನೆಗೆಟಿವ್ ಬರುತ್ತಿದೆ. ರೋಗದ ಗುಣಲಕ್ಷಣಗಳಿರುವ ಹಿನ್ನೆಲೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿದಾಗ ಅದರಲ್ಲಿ ಸೋಂಕು ಹರಡಿರುವುದು ಕಾಣಿಸುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

    ಹೀಗೆ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರುವ ಕರೊನಾ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ದಾಖಲಾಗಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಸೂಚನೆ ಕೊಟ್ಟಿದ್ದೇವೆ. ಸಿಟಿ ಸ್ಕ್ಯಾನ್, ಇನ್ಫ್ಲೇಮೇಬಲ್ ಮಾರ್ಕರ್ಸ್, ಡೈಮರ್‌ನಲ್ಲಿ ಪಾಸಿಟಿವ್ ಬಂದರೂ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

    ಇದನ್ನೂ ಓದಿ: ರಾಜಕಾರಣಿಗಳ ಮೇಲೆ ನೆಟ್ಟಿಗರ ಕೆಂಗಣ್ಣು : ನಾಯಕರ ಖಾಸಗಿ ನಂಬರ್​ಗಳು ವೈರಲ್ !

    ಕರೊನಾ ಬಗ್ಗೆ ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಸಚಿವ ಸುಧಾಕರ್, ಕರೊನಾ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಬಳಸಲಾಗುವ ರೆಮ್​ಡೆಸಿವಿರ್ ಚುಚ್ಚುಮದ್ದುಗಳನ್ನು ಒದಗಿಸಲು 28 ಕೋಟಿ ರೂ ಮಂಜೂರಾಗಿದೆ. ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ‌ದೊರಕಿದೆ ಎಂದು ತಿಳಿಸಿದ್ದಾರೆ.

    ಸರ್ಕಾರದ ಎಚ್ಚರಿಕೆ ಘಂಟೆ : ಮನೆಯಲ್ಲೂ ಮಾಸ್ಕ್​ ತೊಡಬೇಕಾದ ಸಮಯ ಬಂದಿದೆ !

    ಭಾರತದ ಆಕ್ಸಿಜನ್ ಪೂರೈಕೆಗಾಗಿ 50 ಸಾವಿರ ಡಾಲರ್ ನೀಡಿದ ಐಪಿಎಲ್ ಆಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts