ಟೆಸ್ಟ್​ ಪಂದ್ಯಕ್ಕೂ ಮುನ್ನವೇ ಕಿವಿ ಪಡೆಗೆ ಖಡಕ್ ವಾರ್ನಿಂಗ್ ಕೊಟ್ಟ ರೋಹಿತ್ ಶರ್ಮ | INDvsNZ Test

rohit sharma

ನವದೆಹಲಿ: 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮ (Rohit Sharma), ಅಖಾಡಕ್ಕಿಳಿದಾಗ ತಮ್ಮ ಬ್ಯಾಟ್​ನಿಂದ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಕುಳಿತಾಗ ಮೈಕ್​ನಿಂದ ತಮ್ಮ ಎದುರಾಳಿಗಳಿಗೆ ಸರಿಯಾದ ಟಕ್ಕರ್​ ಕೊಡುವುದನ್ನು ಚೆನ್ನಾಗಿ ಅರಿತಿದ್ದಾರೆ. ಈ ಹಿಂದೆ ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಗೆದ್ದ ಖುಷಿಯಲ್ಲಿ ಸೊಕ್ಕಿನ ಮಾತುಗಳನ್ನಾಡಿದ್ದ ಬಾಂಗ್ಲಾ ಆಟಗಾರರಿಗೆ ಪಂದ್ಯ ಆರಂಭಕ್ಕೂ ಮುನ್ನವೇ ವಾರ್ನಿಂಗ್ ರವಾನಿಸಿದ್ದ ರೋಹಿತ್​, ತಮ್ಮ ಮಾತಿನಂತೆಯೇ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟೆಸ್ಟ್ ಹಾಗೂ ಟಿ20 ಸರಣಿಯನ್ನು ಭಾರತದ ಎದುರು ವಶಪಡಿಸಿಕೊಳ್ಳುವಲ್ಲಿ ವಿಫಲವಾದ ಬಾಂಗ್ಲಾದೇಶಕ್ಕೆ ‘ಹಿಟ್​ಮ್ಯಾನ್’​ ಕೊಟ್ಟಿದ್ದ ಖಡಕ್ ವಾರ್ನಿಂಗ್​ ನೆನಪಾಗಿರುವುದರಲ್ಲಿ ಅನುಮಾನವೇ ಇಲ್ಲ ಎಂದೇ ಹೇಳಬಹುದು. ಸದ್ಯ ಇದೇ ರೀತಿ ನ್ಯೂಜಿಲೆಂಡ್ (New Zealand) ಟೀಮ್​ಗೂ ಶರ್ಮ ಒಂದು ಸಣ್ಣ ಸಂದೇಶವೊಂದನ್ನು (INDvsNZ Test) ರವಾನಿಸಿದ್ದಾರೆ.

ಇದನ್ನೂ ಓದಿ: ಹಕ್ಕೋತ್ತಾಯ ಸಮಾವೇಶ 23ಕ್ಕೆ ಮುಂದೂಡಿಕೆ

ಇದೇ ಬುಧವಾರದಿಂದ (ಅ.16) ಪ್ರಾರಂಭವಾಗಲಿರುವ ನ್ಯೂಜಿಲೆಂಡ್​ ಮತ್ತು ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರು ಪಂದ್ಯಗಳನ್ನು ಒಳಗೊಂಡಿರುವ ಟೆಸ್ಟ್ ಸರಣಿ ಪ್ರಾರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮ, “ಪ್ರತಿ ತಂಡವೂ ಹೊಸ ಸವಾಲಿನ ಜತೆಗೆ ಬರುತ್ತದೆ. ಕಿವಿ ಪಡೆ ಕೂಡ ಹಾಗೆಯೇ. ನಾವು ಯಾವುದೇ ತಂಡವನ್ನು ಆಡಿದರೂ ವಿಭಿನ್ನ ಸವಾಲುಗಳು ಇದ್ದೇ ಇರುತ್ತವೆ” ಎಂದಿದ್ದಾರೆ.

“ನಾವು ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ ಅನೇಕ ಪಂದ್ಯಗಳನ್ನು ಆಡಿದ್ದೇವೆ. ಆ ತಂಡದ ಆಟಗಾರರ ಬಲಾಬಲವೇನು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ನಮಗೆ ಉತ್ತಮ ತಿಳುವಳಿಕೆ ಇದೆ. ಅದಕ್ಕೆ ತಕ್ಕಂತೆಯೇ ನಾವು ನಮ್ಮ ಆಟವನ್ನು ಆಡಲಿದ್ದೇವೆ” ಎಂದು ರೋಹಿತ್ ತಮ್ಮದೇ ಶೈಲಿಯಲ್ಲಿ ಎದುರಾಳಿ ತಂಡಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ,(ಏಜೆನ್ಸೀಸ್).

ಅದೊಂದು ಘಟನೆ..! ಇನ್ಯಾವತ್ತು ಆತನೊಂದಿಗೆ ಕೆಲಸ ಮಾಡಲ್ಲ: ಅಚ್ಚರಿ ಹೇಳಿಕೆ ಕೊಟ್ಟ ನಟಿ ಶಮಾ

Share This Article

ಗಂಡ, ಹೆಂಡತಿ ಜಗಳದಿಂದ ಮನೆಯಲ್ಲಿ ನೆಮ್ಮದಿ ಇಲ್ಲವೇ? ಈ Vastu Tips ಪಾಲಿಸಿ..!

Vastu Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈವಾಹಿಕ ಜೀವನ ಯಾವಾಗಲೂ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಆದಾಗ್ಯೂ, ಸ್ವಲ್ಪ…

ದಪ್ಪ ಹೊಟ್ಟೆಯಿಂದ ತೊಂದರೆ ಆಗ್ತಿದೆಯೇ? ಇವುಗಳನ್ನು ಸೇವಿಸಿದ್ರೆ ಸಾಕು ಬೆಣ್ಣೆಯಂತೆ ಕರಗುತ್ತೆ ಕೊಬ್ಬು | Stomach trouble

Stomach trouble : ಅನೇಕರು ಹೊಟ್ಟೆಯ ಸಮಸ್ಯೆಗಳಿಂದ ಪ್ರತಿ ನಿತ್ಯ ಬಳಲುತ್ತಿದ್ದಾರೆ. ನಿಮಗೂ ದಪ್ಪ ಹೊಟ್ಟೆ…

ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep

Sleep : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು.…