ಬೆಳಗಾವಿ: ಜಿಲ್ಲೆಯ ಹಿಡಕಲ್ ಜಲಾಶಯದ ನೀರನ್ನು ಹುಬ್ಬಳ್ಳಿ-ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ನೀಡಬಾರದು ಎಂದು ಒತ್ತಾಯಿಸಿ ಬಸವ ಕಾಯಕ ಜೀವಿಗಳ ಸಂಘದಿಂದ ಗುರುವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಹಿಡಕಲ್ ಜಲಾಶಯದ ನೀರನ್ನು ಹುಬ್ಬಳ್ಳಿ-ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ನೀಡಿದರೆ ಬೆಳಗಾವಿಯ ಜನತೆಗೆ ನೀರಿನ ಸಮಸ್ಯೆ ಎದುರಾಗಲಿದೆ. ಹುಬ್ಬಳ್ಳಿ-ಧಾರವಾಡಕ್ಕೆ ನೀರು ನೀಡುವ ಸರ್ಕಾರದ ಈ ನಿರ್ಧಾರ ಬೆಳಗಾವಿಗರ ಮೇಲೆ ಅನ್ಯಾಯ ಮಾಡಿದಂತಾಗುತ್ತದೆ. ಈಗಾಗಲೇ 15 ದಿನಕ್ಕೊಮ್ಮೆ ಕೆಲವೊಂದು ಕಡೆ ನೀರು ಸರಬರಾಜು ಮಾಡಲಾಗುತ್ತಿದೆ. ಬೆಳಗಾವಿಯ ಜನಪ್ರತಿನಿಧಿಗಳು ಈ ಕುರಿತು ಮೌನ ವಹಿಸಿರುವುದು ಸರಿಯಲ್ಲ. ಈ ಯೋಜನೆ ನಿಲ್ಲಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಮಹಾಂತೇಶ ಗುಡಸ, ಅಶೋಕ ಬೆಂಡಿಗೇರಿ, ಜಗದೀಶ ಖಡಬಡಿ, ಸೂರ್ಯಕಾಂತ ಬಾಂವಿ, ಶರಣ ಪ್ರಸಾದ, ಶಿವಾನಂದ ವಾಘರವಾಡಿ, ಶರಣು ಲಿಂಗಾಯತ, ಎಸ್.ಎಸ್. ಪಾಟೀಲ, ಶಂಕರ ಗಡಗಲಿ ಇತರರಿದ್ದರು.
