More

  VIDEO| ಲಡಾಖ್​ನ 17 ಸಾವಿರ ಅಡಿ ಎತ್ತರದ ಕೊರೆಯುವ ಚಳಿಯಲ್ಲೂ ರಾಷ್ಟ್ರಧ್ವಜ ಹಿಡಿದು ಯೋಧರಿಂದ ಗಣರಾಜ್ಯೋತ್ಸವ ಸಂಭ್ರಮ

  ನವದೆಹಲಿ: ದೇಶಾದ್ಯಂತ 71ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಇಂಡೋ-ಟಿಬೆಟನ್ ಬಾರ್ಡರ್​ ಪೊಲೀಸ್​(ಐಟಿಬಿಪಿ) ಪಡೆ ಕೊರೆಯುವ ಚಳಿಯಲ್ಲೂ ತ್ರಿವರ್ಣ ಧ್ವಜ ಹಿಡಿದು ವಂದೇ ಮಾತರಂ​ ಎಂದು ಘೋಷಣೆ ಕೂಗಿ ದೇಶಪ್ರೇಮ ಮೆರೆದರು.

  ಲಡಾಖ್​ನ ಹಿಮಾಲಯ ಶ್ರೇಣಿಯಲ್ಲಿ ಸುಮಾರು 17000 ಅಡಿ ಎತ್ತರದ ಪ್ರದೇಶದಲ್ಲಿ ರಾಷ್ಟ್ರಧ್ವಜ ಹಿಡಿದು ಐಟಿಬಿಪಿ ಸಿಬ್ಬಂದಿ ಗಣರಾಜ್ಯೋತ್ಸವವನ್ನು ಸಂಭ್ರಮಿಸಿ, ಖುಷಿಪಟ್ಟರು.

  ಲಡಾಖ್​ನಲ್ಲಿ ಸದ್ಯ ಮೈನಸ್​ 20 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶವಿದ್ದು, ಕೊರೆಯುವ ಚಳಿಯಲ್ಲೂ ಹಿಮಯೋಧರು “ಭಾರತ್​ ಮಾತಾ ಕೀ ಜೈ” ಮತ್ತು “ವಂದೇ ಮಾತರಂ” ಎಂದು ಉದ್ಘೋಷಗಳನ್ನು ಕೂಗಿ ರಾಷ್ಟ್ರಭಕ್ತಿಯನ್ನು ಮೆರೆದರು.

  ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಯೋಧರ ದಿಟ್ಟತನಕ್ಕೆ ಹಾಗೂ ರಾಷ್ಟ್ರಪ್ರೇಮಕ್ಕೆ ನೆಟ್ಟಿಗರು ಫಿದಾ ಆಗಿ, ಮೆಚ್ಚುಗೆ ಮಹಾಪೂರ ಹರಿಸಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts