ಬೆಂಗಳೂರು ತಂಡಕ್ಕೆ ಸುಲಭ ಗೆಲುವು

ಪುಣೆ: ಹೊಸ ಐಐಪಿಕೆಎಲ್ ಕಬಡ್ಡಿ ಲೀಗ್​ನಲ್ಲಿ ಕಣಕ್ಕಿಳಿದಿರುವ ಸಿಲಿಕಾನ್ ಸಿಟಿಯ ಫ್ರಾಂಚೈಸಿ ಬೆಂಗಳೂರು ರೈನೋಸ್ ಶುಭಾರಂಭ ಮಾಡಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 39-32ರಿಂದ ಪುದುಚೇರಿ ಪ್ರೆಡೇಟರ್ಸ್ ತಂಡವನ್ನು ಸೋಲಿಸಿತು. ಮೊದಲ ಕ್ವಾರ್ಟರ್ ಅವಧಿಯಿಂದಲೇ 13-5 ಅಂಕಗಳ ಭರ್ಜರಿ ಮುನ್ನಡೆಯೊಂದಿಗೆ ಆಟ ಆರಂಭಿಸಿದ ಬೆಂಗಳೂರು ಪ್ರತಿ ಹಂತದಲ್ಲೂ ಸ್ಥಿರ ಆಟದೊಂದಿಗೆ ಗಮನಸೆಳೆಯಿತು. ಆದರೆ 2ನೇ ಕ್ವಾರ್ಟರ್ ಅವಧಿಯಲ್ಲಿ ಬೆಂಗಳೂರು ತಂಡದ ಮುನ್ನಡೆಗೆ ಏಟು ಬಿತ್ತು. 3ನೇ ಕ್ವಾರ್ಟರ್ ಅವಧಿಯಲ್ಲಿ ತಿರುಗೇಟು ನೀಡಿದ ಬೆಂಗಳೂರು ಮುನ್ನಡೆಯನ್ನು ಹೆಚ್ಚಿಸಿಕೊಂಡಿತು.

ಅಂತಿಮ ಕ್ವಾರ್ಟರ್ ಅವಧಿಯಲ್ಲಿ ಪ್ರೆಡೇಟರ್ಸ್ ತಂಡ ಬೆಂಗಳೂರಿಗಿಂತ ಒಂದು ಅಂಕ ಹೆಚ್ಚು ಗಳಿಸಿದರೂ ಗೆಲುವು ದಕ್ಕಲಿಲ್ಲ.-ಏಜೆನ್ಸೀಸ್

Leave a Reply

Your email address will not be published. Required fields are marked *