ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ಇಂಡಿಯನ್ ಬ್ಯಾಂಕ್, 118ನೇ ಫೌಂಡೇಶನ್ ದಿನಾಚರಣೆ ಅಂಗವಾಗಿ ಠೇವಣಿ ಬೆಳವಣಿಗೆಯನ್ನು ಹೆಚ್ಚಿಸಲು ಬ್ಯಾಂಕ್ ವಿಶೇಷ ಠೇವಣಿ ಅಭಿಯಾನ ಅಭಿಯಾನ 118 ಅನ್ನು ಪ್ರಾರಂಭಿಸಿದ್ದು, ಈ ಬಗ್ಗೆ ಬಸವನಗುಡಿಯಲ್ಲಿ ವಾಕ್‌ಥಾನ್ ಅಭಿಯಾನ ನಡೆಸಿತು.
ವಾಕ್‌ಥಾನ್ ಅಭಿಯಾನಕ್ಕೆ ಇಂಡಿಯನ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಕುಮಾರ್ ಬಜಾಜ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಫೀಲ್ಡ್ ಜನರಲ್ ಮ್ಯಾನೇಜರ್ ಪಂಕಜ್ ತ್ರಿಪಾಠಿ, ವಲಯ ವ್ಯವಸ್ಥಾಪಕ ಸಿ ಡಿ ರಾಮರಾವ್, ಉಪ ಪ್ರಧಾನ ವ್ಯವಸ್ಥಾಪಕ ಎ ಪಿ ಮಹಾಪಾತ್ರ, ಉಪ ವಲಯ ವ್ಯವಸ್ಥಾಪಕರಾದ ಡಿ.ಎಸ್.ಎಸ್.ಭಾರತಿ ಮತ್ತು ಗ್ರಾಹಕರು ಹಾಜರಿದ್ದರು.
ಬೆಂಗಳೂರಿನಾದ್ಯಂತ 100ಕ್ಕೂ ಹೆಚ್ಚು ಜನರು ವಾಕಥಾನ್‌ನಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಅಭಿಯಾನ 118 ರ ಭಾಗವಾಗಿ, ಅನೇಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳೊಂದಿಗೆ ಪ್ಯಾನ್ ಇಂಡಿಯಾ ನಡೆಸಲಾಗುತ್ತಿದೆ.
7ನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಇಂಡಿಯನ್ ಬ್ಯಾಂಕ್, 118ನೇ ಫೌಂಡೇಶನ್ ದಿನಾಚರಣೆಯನ್ನು ಆ.15 ರಂದು ಆಚರಿಸಲಿದೆ.
ಆ.15ರಂದು ಸ್ವದೇಶಿ ಬ್ಯಾಂಕ್ ಆಗಿ ಸ್ಥಾಪಿತವಾದ ಮೇಲೆ 100 ಮಿಲಿಯನ್ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. 40775 ಉದ್ಯೋಗಿಗಳು, 5,093 ಎಟಿಎಂಗಳು ಮತ್ತು ನಗದು ಠೇವಣಿ ಯಂತ್ರಗಳೊಂದಿಗೆ 5,846 ಶಾಖೆಗಳನ್ನು ಹೊಂದಿದೆ.
ಬ್ಯಾಂಕಿನ ಒಟ್ಟು ವ್ಯವಹಾರವು 12.20 ಲಕ್ಷ ಕೋಟಿ (ಖಿಖ150 ಶತಕೋಟಿ) ದಾಟಿದೆ ಮತ್ತು ಜೂನ್ 23 ರಲ್ಲಿ 1709 ಇ್ಟ ನಿಂದ ಜೂನ್ 24 ರಲ್ಲಿ 2403 ಇ್ಟ ನಲ್ಲಿ ನಿವ್ವಳ ಲಾಭವು ಶೇ.41 ವರ್ಷಕ್ಕೆ ಏರಿಕೆಯಾಗಿದೆ.
ಇಂಡಿಯನ್ ಬ್ಯಾಂಕ್ 118ನೇ ಫೌಂಡೇಶನ್ ದಿನಾಚರಣೆ ಅಂಗವಾಗಿ ವಾಕಥಾನ್ ಅಭಿಯಾನ
You Might Also Like
ಪುರುಷರು ಕುಳಿತು or ನಿಂತುಕೊಂಡು ಮೂತ್ರ ವಿಸರ್ಜನೆ ಮಾಡ್ಬೇಕಾ? ಇಲ್ಲಿದೆ ಉಪಯುಕ್ತ ಮಾಹಿತಿ… Urinate Position
ಸಾಮಾನ್ಯವಾಗಿ ಪುರುಷರು ನಿಂತುಕೊಂಡೇ ಮೂತ್ರ ವಿಸರ್ಜನೆ ( Urinate Position ) ಮಾಡುತ್ತಾರೆ. ಆದರೆ, ಈ…
ನಿಮ್ಮ ಅಂಗೈನಲ್ಲಿ H ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Palmistry
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Success Secrets: ನಿಮ್ಮ ಜೀವನದಲ್ಲಿ ಈ 4 ಸ್ಥಳಗಳಲ್ಲಿ ಎಂದಿಗೂ ಹಿಂಜರಿಯಬೇಡಿ! ಈ ಕೆಲಸ ಮಾಡಿದ್ರೆ ಸಕ್ಸಸ್ ಗ್ಯಾರೆಂಟಿ
ಬೆಂಗಳೂರು: ಆಚಾರ್ಯ ಚಾಣಕ್ಯರನ್ನು ಭಾರತದ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ…