ಎಲ್ಲರಿಗೂ ಗುಣಮಟ್ಟದ ಆಹಾರ

ಮೂಡಿಗೆರೆ: ರಾಜ್ಯದ ಜನತೆ ಬಡತನದಲ್ಲಿ ಹಸಿದಿರಬಾರದೆಂಬ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಹಾರ ಭದ್ರತಾ ಯೋಜನೆಯಡಿ ಪ್ರತಿ ವ್ಯಕ್ತಿಗೂ ಗುಣಮಟ್ಟದ ಆಹಾರ ಒದಗಿಸಲು ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯದ ಪಡಿತರದಾರರಿಗೆ ಉಚಿತ ಆಹಾರ ನೀಡಲಾಗುತ್ತಿದೆ. ಹೊಸ ಪಡಿತರ ಚೀಟಿ ವಿತರಣೆ ಕ್ರಮವನ್ನು ಸರಳೀಕರಣಗೊಳಿಸಿ ಬಡವರ್ಗದವರ ಕೈಗೆ ಸಿಗುವಂತೆ ಮಾಡಲಾಗಿದೆ ಎಂದರು.

ವಿವಿಧ ಯೋಜನೆಗಳಲ್ಲಿ ಶಾಲಾ ಮಕ್ಕಳು, ಬಾಣಂತಿಯರಿಗೆ ಉಚಿತ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಕಳೆದ ಐದೂವರೆ ವರ್ಷದಲ್ಲಿ ರಾಜ್ಯದ ಜನತೆ ಹಸಿದು ಕುಳಿತಿರುವುದು ಕಂಡುಬಂದಿಲ್ಲ. ಇಂದಿರಾ ಕ್ಯಾಂಟೀನ್​ನಿಂದ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಹಾರ ಪಡೆಯಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಎಂ.ಪಿ.ಕುಮಾರಸ್ವಾಮಿ, ಮಾಜಿ ಸಚಿವೆ ಮೋಟಮ್ಮ, ಡಿಸಿ ಎಂ.ಕೆ.ಶ್ರೀರಂಗಯ್ಯ ಮತ್ತಿತರರು ಇದ್ದರು.

ಬಾರಿ ಮಹಾಮಳೆಯಿಂದ ಚಾರ್ವಡಿ ಘಾಟ್​ನ ಹೆದ್ದಾರಿ 234, ಕಡೂರು-ಮೂಡಿಗೆರೆ ಹೆದ್ದಾರಿ 173 ಹಾಳಾಗಿದೆ. ಈ ಹೆದ್ದಾರಿಗಳ ಸಹಿತ ಎಲ್ಲ ರಸ್ತೆಗಳನ್ನೂ ಅಭಿವೃದ್ಧಿಪಡಿಸಲು ಸದ್ಯದಲ್ಲೇ ಉನ್ನತಮಟ್ಟದ ಅಧಿಕಾರಿಗಳ ಸಭೆ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು.

| ಕೆ.ಜೆ.ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ