ಕಡಬದಲ್ಲಿ ಇಂದಿರಾ ಕ್ಯಾಂಟೀನ್ ವಿಳಂಬ: ಬಡವರ ಹೊಟ್ಟೆ ತಣಿಸುವ ಕೇಂದ್ರ ಪ್ರಸ್ತಾವನೆಯಲ್ಲೇ ಬಾಕಿ : ನಿಗದಿಪಡಿಸಿದ ಭೂಮಿ ಖಾಲಿ

ವಿಜಯವಾಣಿ ಸುದ್ದಿಜಾಲ ಕಡಬ ತಾಲೂಕು ಕೇಂದ್ರ ಕಡಬದಲ್ಲಿ ಆರಂಭಗೊಳ್ಳಬೇಕಿದ್ದ ಬಹು ನಿರೀಕ್ಷೆಯ ಇಂದಿರಾ ಕ್ಯಾಂಟೀನ್ ಪ್ರಸ್ತಾವನೆಗಷ್ಟೇ ಸೀಮಿತವಾಗಿರುವುದು ಸ್ಥಳೀಯರಲ್ಲಿ ನಿರಾಸೆ ಮೂಡಿಸಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಡಬ ಸಹಿತ ರಾಜ್ಯದ ವಿವಿಧೆಡೆ 188 ಹೊಸ ಇಂದಿರಾ ಕ್ಯಾಂಟೀನ್‌ಗಳು ಕಾರ್ಯ ಆರಂಭಿಸಲಿವೆ ಎಂದು ಪ್ರಕಟಿಸಲಾಗಿತ್ತು. ಕಡಬ ಹೊಸ ತಾಲೂಕು ಆಡಳಿತ ಸೌಧ ಬಳಿಯಿರುವ ಎಪಿಎಂಸಿ ಪ್ರಾಂಗಣಕ್ಕೆ ಹೊಂದಿಕೊಂಡಿರುವಂತೆ ಇರುವ 5.5 ಸೆಂಟ್ಸ್ ಜಮೀನು ಇಂದಿರಾ ಕ್ಯಾಂಟೀನ್‌ಗೆ ನಿಗದಿಪಡಿಸಿದ್ದರೂ, ಜಮೀನು ಹಾಗೆಯೇ ಖಾಲಿ ಬಿದ್ದಿದೆ. ಕ್ಯಾಂಟೀನ್ ಆರಂಭಿಸಲು … Continue reading ಕಡಬದಲ್ಲಿ ಇಂದಿರಾ ಕ್ಯಾಂಟೀನ್ ವಿಳಂಬ: ಬಡವರ ಹೊಟ್ಟೆ ತಣಿಸುವ ಕೇಂದ್ರ ಪ್ರಸ್ತಾವನೆಯಲ್ಲೇ ಬಾಕಿ : ನಿಗದಿಪಡಿಸಿದ ಭೂಮಿ ಖಾಲಿ