Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಏರ್‌ಇಂಡಿಗೋದಲ್ಲಿ ಸೊಳ್ಳೆ ಕಾಟ: 1.35 ಲಕ್ಷ ರೂ. ಪರಿಹಾರ ಪಡೆದ ವಕೀಲರು

Sunday, 16.09.2018, 6:03 PM       No Comments

ನವದೆಹಲಿ: ವಿಮಾನದಲ್ಲಿದ್ದ ಸೊಳ್ಳೆಗಳು ಪ್ರಯಾಣಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದರಿಂದ ಗುರ್ಗಾಂವ್‌ ಮೂಲದ ಖಾಸಗಿ ವಿಮಾನಯಾನ ಇಂಡಿಗೋ ಮತ್ತು ಭಾರತ ವಿಮಾನಯಾನ ಪ್ರಾಧಿಕಾರ(AAI) ಕ್ಕೆ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ವೇದಿಕೆಯು 1.35 ಲಕ್ಷ ದಂಡ ವಿಧಿಸಿದೆ.

ಈ ಕುರಿತು ದೂರು ನೀಡಿದ್ದ ನಗರದ ಮೂವರು ವಕೀಲರಿಗೆ ಇಂಡಿಗೋ ಮತ್ತು ಎಎಐ ಸೇರಿ ತಲಾ 30 ಸಾವಿರ ದಂಡ ಮತ್ತು 10 ಸಾವಿರ ದಾವೆಯ ವೆಚ್ಚವನ್ನು ನೀಡುವಂತೆ ಆದೇಶಿಸಿದೆ. ಅಲ್ಲದೆ ಗ್ರಾಹಕರ ವೇದಿಕೆಯ ಕಾನೂನು ನೆರವು ಖಾತೆಯಲ್ಲಿ ಪ್ರತಿ ದೂರುಗಳಿಗೆ 5 ಸಾವಿರ ರೂ. ಠೇವಣಿ ಮಾಡಲು ತಿಳಿಸಿದೆ.

ವಕೀಲ ದೀಪಿಂದರ್‌ ಸಿಂಗ್‌, ಸುಖಂದೀಪ್‌ ಸಿಂಗ್‌ ಮತ್ತು ಉಪ್‌ದೀಪ್‌ ಸಿಂಗ್‌ ಎಂಬವರು ಈ ವರ್ಷದ ಏಪ್ರಿಲ್‌ 4 ರಂದು ದೆಹಲಿಯಿಂದ ಅಮೃತ್‌ಸರಕ್ಕೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಸೊಳ್ಳೆಗಳಿಂದಾಗಿ ತೊಂದರೆಗೀಡಾಗಿದ್ದರು. ಇದರಿಂದಾಗಿ ಮೇ 29ರಂದು ಗ್ರಾಹಕ ವಿವಾದಗಳ ಪರಿಹಾರ ಮಂಡಳಿಗೆ ದಾಖಲಿಸಿದ್ದೆವು.

ದೀಪಿಂದರ್‌ ಸಿಂಗ್‌ ಮಾತನಾಡಿ, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋದ ವಿಮಾನವನ್ನೇರಿದೆವು. ಆಗ ಅಲ್ಲಿ ಸೊಳ್ಳೆಗಳು ಅಧಿಕವಿದ್ದವು. ಈ ಕುರಿತು ಸಿಬ್ಬಂದಿಗೆ ದೂರು ನೀಡಿದರೂ ಪರಿಹಾರ ಕ್ರಮ ಕೈಗೊಳ್ಳುವ ಬದಲು ಅಸಹಾಯಕತೆಯನ್ನು ತೋರ್ಪಡಿಸಿದರು. ಇದೊಂದು ಸಣ್ಣ ಸಮಸ್ಯೆಯಾಗಿದ್ದು, ದಿನನಿತ್ಯದ ಪ್ರಯಾಣದಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಕುರಿತು ಗ್ರಾಹಕರ ಸೇವೆಗೆ ಇಮೇಲ್‌ ಮಾಡಿ ಸೊಳ್ಳೆಗಳು ಪ್ರಯಾಣಿಕರ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತಿವೆ ಎಂದು ದೂರನ್ನು ದಾಖಲಿಸಿದೆವು. ನಂತರ ಅಮೃತಸರಕ್ಕೆ ತಲುಪಿದ ನಂತರ ಇತರೆ ಪ್ರಯಾಣಿಕರೊಂದಿಗೆ ತೆರಳಿ ಏರ್‌ಪೋರ್ಟ್‌ ಪ್ರಾಧಿಕಾರಕ್ಕೆ ದೂರನ್ನು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top