VIDEO: ಜೇನುಗೂಡು ಕಟ್ಟಿದ ಸ್ಥಳ ನೋಡಿ ಕಂಗಾಲಾದ ನೆಟ್ಟಿಗರು; ತೀರ ಅಸಹಜ ಎಂದ್ರು ಕಿರಣ್​ ರಿಜಿಜು

ಒಮ್ಮೊಮ್ಮೆ ಅಸಹಜವಾದದ್ದೆಲ್ಲ ಸಾಧ್ಯವಾಗಿಬಿಡುತ್ತದೆ. ಅದನ್ನು ನೋಡಿ ಅಚ್ಚರಿ ಪಡುವುದು ನಮ್ಮ ಸರದಿಯಾಗಿರುತ್ತದೆ. ಸದ್ಯ ಕೇಂದ್ರ ಕ್ರೀಡಾ ಸಚಿವ ತಮ್ಮ ಟ್ವಿಟರ್​ನಲ್ಲಿ ಶೇರ್ ಮಾಡಿರುವ ವಿಡಿಯೋವೊಂದು ಅಸಹಜವೆನಿಸಿದರೂ ನೆಟ್ಟಿಗರಿಗೆ ಫುಲ್​ ಮಜಾ ಕೊಟ್ಟಿದೆ.

ಸಾಮಾನ್ಯವಾಗಿ ಮರದ ಮೇಲೆ ಗೂಡುಕಟ್ಟುವ ಜೇನು ಯುವಕನೋರ್ವನ ಮೈಮೇಲೆ ಕಟ್ಟಿರುವ ವಿಡಿಯೋ ಇದು. ಅದೂ ಕೂಡ ಜೇನುಗೂಡು ಕಟ್ಟಿದ್ದು ಆ ಯುವಕನ ಜಘನ ಭಾಗದಲ್ಲಿ. ಓರ್ವ ಯುವಕ ಮೆಟ್ಟಿಲುಗಳ ಮೇಲೆ ಅಂಗಿ -ಜೀನ್ಸ್​ ಪ್ಯಾಂಟ್​ ಧರಿಸಿ ನಿಂತಿದ್ದಾನೆ. ಆದರೆ ತೀರ ಅಸ್ವಾಭಾವಿಕ ಎನ್ನುವ ಸ್ಥಳದಲ್ಲಿ ಜೇನುಗೂಡು ಕಟ್ಟಿ ತೂಗುತ್ತಿದೆ. ಅದು ಜಘನದಿಂದ ಸ್ವಲ್ಪ ಕೆಳಭಾಗದವರೆಗೂ ಹರಡಿದೆ. ಅಲ್ಲೇ ಹುಳುಗಳೂ ಹಾರಾಡುತ್ತಿವೆ.
ಜೀನ್ಸ್​ ಪ್ಯಾಂಟ್ ಮೇಲೆ ಆ ಪರಿ ಜೇನುಗೂಡು ಕಟ್ಟಿದ್ದರೂ ಯುವಕ ಶಾಂತಿಯಿಂದ ನಿಂತಿದ್ದಾನೆ. ಅವನ ಸುತ್ತಲೂ ಒಂದಷ್ಟು ಜನ ದೊಡ್ಡದಾಗಿ ನಗುತ್ತ ಅದನ್ನು ವಿಡಿಯೋ ಮಾಡುತ್ತಿರುವುದನ್ನು ನೋಡಬಹುದು. ಇದು ನಾಗಾಲ್ಯಾಂಡ್​ನಲ್ಲಿ ನಡೆದಿದೆ ಎಂದು ಕಿರಣ್​ ರಜ್ಜು ತಮ್ಮ ವಿಡಿಯೋ ಕ್ಯಾಪ್ಷನ್​ನಲ್ಲಿ ತಿಳಿಸಿದ್ದಾರೆ. ವಿಡಿಯೋ ಪೋಸ್ಟ್ ಮಾಡಿದ ಅವರು, ನಿರೀಕ್ಷೆ ಮಾಡಲೂ ಸಾಧ್ಯವಿಲ್ಲದ ಸ್ಥಳದಲ್ಲಿ ಜೇನುಗೂಡು ಕಟ್ಟಿದೆ ಎಂದು ತಿಳಿಸಿದ್ದಾರೆ.

ಅದಕ್ಕೆ ಒಂದಷ್ಟು ಫನ್ನಿಯಾಗಿ ಕಾಮೆಂಟ್​ಗಳೂ ಬಂದಿವೆ. ಬಹುಶಃ ಆ ಯುವಕ ರಾಣಿ ಜೇನನ್ನು ಜೇಬಿನಲ್ಲಿ ಇಟ್ಟುಕೊಂಡಿರಬೇಕು. ಹಾಗಾಗೇ ಆತನ ಆ ಸ್ಥಳದಲ್ಲಿ ಜೇನುಗೂಡು ಕಟ್ಟಿಕೊಂಡಿವೆ ಎಂದು ಓರ್ವರು ಕಾಮೆಂಟ್​ ಮಾಡಿದ್ದಾರೆ. ಹಲವರು ಅದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *