ಏಷ್ಯಾಡ್​: ಶೂಟಿಂಗ್​ನಲ್ಲಿ ಸೌರಭ್​ ಚೌಧರಿಗೆ ಚಿನ್ನ, ಅಭಿಷೇಕ್​ ವರ್ಮಾಗೆ ಕಂಚು

ಜಕಾರ್ತ: ಭಾರತೀಯ ಕ್ರೀಡಾ ಪಟುಗಳು ಏಷ್ಯನ್​ ಗೇಮ್ಸ್​ನ 3ನೇ ದಿನವೂ ಪದಕ ಬೇಟೆಯನ್ನು ಮುಂದುವರೆಸಿದ್ದು, ಶೂಟಿಂಗ್​ನಲ್ಲಿ ಸೌರಭ್​ ಚೌಧರಿ ಚಿನ್ನ ಮತ್ತು ಅಭಿಷೇಕ್​ ವರ್ಮಾ ಕಂಚಿನ ಪದಕ ಜಯಿಸಿದ್ದಾರೆ.

ಮಂಗಳವಾರ ನಡೆದ 10 ಮೀಟರ್​ ಏರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ 16 ವರ್ಷದ ಸೌರಭ್​ ಚೌಧರಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಸೌರಭ್​ ಒಟ್ಟು 240.7 ಅಂಕ ಕಲೆ ಹಾಕಿದರೆ, ಅಭಿಷೇಕ್​ ವರ್ಮಾ 219.3 ಅಂಕ ಕಲೆ ಹಾಕಿ ಕಂಚಿನ ಪದಕ ಜಯಿಸಿದರು. ಇದೇ ಸ್ಪರ್ಧೆಯಲ್ಲಿ ಜಪಾನ್​ನ ಟೋಮೋಯುಕಿ ಮಟಸುದಾ ಬೆಳ್ಳಿ ಪದಕ ಜಯಿಸಿದರು. (ಏಜೆನ್ಸೀಸ್​)