Wednesday, 12th December 2018  

Vijayavani

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹಕ್ಕು ಮಂಡನೆ        ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಸಮಯ ಕೋರಿದ ಟಿಎಂಸಿ        ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ        ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೆ. ಚಂದ್ರಶೇಖರ್​ ರಾವ್​       
Breaking News

ಟೀಮ್ ಇಂಡಿಯಾದಲ್ಲಿ ಅಭದ್ರತೆ!

Friday, 20.07.2018, 3:05 AM       No Comments

ಇಂಗ್ಲೆಂಡ್ ಪ್ರವಾಸದ ಏಕದಿನ ಸರಣಿಯಲ್ಲಿ ಸೋಲು ಕಂಡ ಬಳಿಕ ವಿರಾಟ್ ಕೊಹ್ಲಿಗಿಂತ ಹೆಚ್ಚಾಗಿ ಬೇಸರವಾಗಿದ್ದು, ಮಾಜಿ ನಾಯಕ ಸೌರವ್ ಗಂಗೂಲಿಗೆ. ಲೀಡ್ಸ್ ಏಕದಿನದಲ್ಲಿ 8 ವಿಕೆಟ್​ಗಳ ಸೋಲು ಕಂಡ ಬಳಿಕ ವಿಶ್ಲೇಷಕರಾಗಿದ್ದ ಗಂಗೂಲಿ, ತಂಡದ ಆಯ್ಕೆಯ ಬಗ್ಗೆ ಅಪಸ್ವರ ಎತ್ತಿದರು. ‘ಯಾವುದೇ ತಂಡದ ಅಗ್ರ ನಾಲ್ವರು ಬ್ಯಾಟ್ಸ್​ಮನ್​ಗಳು ಅತ್ಯುತ್ತಮ ಆಟಗಾರರಾಗಿರುತ್ತಾರೆ. ಅವರ ಮೇಲೆ ನಂಬಿಕೆ ಇಡಬೇಕು. ಕೆಎಲ್ ರಾಹುಲ್ ಬಳಿ, ತೆರಳಿ ನಿನಗೆ 15 ಪಂದ್ಯ ಕೊಡುತ್ತೇನೆ. ನಿರಾಳವಾಗಿ ನಿನ್ನ ಆಟವಾಡು’ ಎಂದು ಕೊಹ್ಲಿ ಹೇಳಬಲ್ಲರೆ ಎಂದು ಪ್ರಶ್ನಿಸಿದ್ದರು.

ವಿರಾಟ್ ಕೊಹ್ಲಿಯ ನಾಯಕತ್ವಕ್ಕಿಂತ ಸೌರವ್ ಗಂಗೂಲಿ ಟೀಮ್ ಇಂಡಿಯಾ ಆಟಗಾರರಲ್ಲಿ ಇರುವ ಅಭದ್ರತೆಯ ಕುರಿತು ಹೆಚ್ಚು ಆತಂಕ ಹೊಂದಿದ್ದಾರೆ ಎನ್ನುವುದು ಅವರ ಮಾತುಗಳಲ್ಲೇ ಅರ್ಥವಾಗುತ್ತಿತ್ತು. ವಿಶ್ವಕಪ್​ಗೆ ಇನ್ನೊಂದೇ ವರ್ಷ ಬಾಕಿ ಇದೆ. ಆದರೆ, ಟೀಮ್ ಇಂಡಿಯಾದ ಗೆಲುವಿನ ಕಾಂಬಿನೇಷನ್ ಇನ್ನೂ ಸಿದ್ಧವಾಗಿಲ್ಲ. ಈಗಾಗಲೇ ಒಂದು ವಿಶ್ವಕಪ್​ನಲ್ಲಿ (ಟಿ20) ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿಗೆ, ಮುಂದಿನ ವರ್ಷದ ವಿಶ್ವಕಪ್​ನಲ್ಲಿ ಈ ಆಟಗಾರರು ಖಂಡಿತಾ ಆಡಲಿದ್ದಾರೆ ಎನ್ನುವ ವಿಶ್ವಾಸ ಇದ್ದಂತಿಲ್ಲ. ನಿರ್ವಹಣೆಗಿಂತ ಹೆಚ್ಚಾಗಿ ಕೊಹ್ಲಿ ಆಟಗಾರರ ಬದಲಾವಣೆಯಲ್ಲಿಯೇ ಹೆಚ್ಚಿನ ಸ್ಥಿರತೆ ಪ್ರದರ್ಶಿಸುತ್ತಿದ್ದಾರೆ. ಕೊಹ್ಲಿ ಈವರೆಗೂ ನಾಯಕರಾಗಿ ಆಡಿದ 35 ಟೆಸ್ಟ್ ಪಂದ್ಯಗಳ ಪೈಕಿ ಸತತ ಎರಡು ಟೆಸ್ಟ್ ಗಳಲ್ಲಿ ಒಂದೇ ತಂಡವನ್ನು ಈವರೆಗೂ ಆಡಿಸಿಲ್ಲ. ಇನ್ನು ನಾಯಕನಾಗಿ ಆಡಿದ 52 ಏಕದಿನ ಪಂದ್ಯಗಳಲ್ಲೂ ಕನಿಷ್ಠ ಒಂದಾದರೂ ಬದಲಾವಣೆ ಮಾಡಿದ್ದಾರೆ. ಇದರಿಂದಾಗಿ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್​ಮನ್​ಗಳಾದ ಕೆಎಲ್ ರಾಹುಲ್, ಅಜಿಂಕ್ಯ ರಹಾನೆ, ಮನೀಷ್ ಪಾಂಡೆ ಹಾಗೂ ಕರುಣ್ ನಾಯರ್​ಗೆ ಅಭದ್ರತೆ ಕಾಡಿರುವುದಂತೂ ನಿಜ. ಒಂದು ಪಂದ್ಯದಲ್ಲಿ ಶತಕ ಬಾರಿಸಿದರೆ, ಮುಂದಿನ ಪಂದ್ಯದಲ್ಲಿ ತಂಡದಲ್ಲಿ ಇರುತ್ತೇವೆ ಎನ್ನುವ ಯಾವ ವಿಶ್ವಾಸವೂ ಈ ಆಟಗಾರರಲ್ಲಿಲ್ಲ. ಹಾಗೇನಾದರೂ, ಮುಂದಿನ ಪಂದ್ಯದಲ್ಲಿ ಅವಕಾಶ ಸಿಕ್ಕಿ, ವಿಫಲರಾದಲ್ಲಿ ಮರು ಪಂದ್ಯಕ್ಕೆ ಹೊರಬೀಳುವುದು ನಿಶ್ಚಿತ ಎನಿಸಿದೆ. ತಂಡದ ಹಿರಿಯ ಆಟಗಾರರಾದ ಎಂಎಸ್ ಧೋನಿ ಹಾಗೂ ಶಿಖರ್ ಧವನ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮೇಲೆ ಇಟ್ಟಿರುವಷ್ಟು ನಂಬಿಕೆಯ ಅಲ್ಪ ಪ್ರಮಾಣವೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ಮೇಲಿಲ್ಲ. ವಿಶ್ವಕಪ್ ಮುನ್ನೆಲೆಯಲ್ಲಿ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಆತಂಕಕ್ಕೆ ಕಾರಣವಾಗಿದೆ ಎನ್ನುವುದನ್ನು ಸ್ವತಃ ಕೊಹ್ಲಿ ಕೂಡ ಒಪ್ಪಿಕೊಂಡಿದ್ದಾರೆ. 4ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರ ಸಿಕ್ಕಿಲ್ಲ ಎನ್ನುವುದು ಇದರ ಹಿಂದಿನ ಸೂಕ್ಷ್ಮ. 2015ರ ವಿಶ್ವಕಪ್​ನಲ್ಲಿ ಮುಗಿದ ದಿನದಿಂದಲೂ ಈ ಕ್ರಮಾಂಕದ ಬ್ಯಾಟಿಂಗ್​ಗೆ ನಡೆಸಿರುವಷ್ಟು ಬ್ಯಾಟ್ಸ್​ಮನ್​ಗಳ ಪ್ರಯೋಗ ಮತ್ತೆ ಯಾವ ಕ್ರಮಾಂಕಕ್ಕೂ ನಡೆದಿಲ್ಲ.

ಕೆಎಲ್ ರಾಹುಲ್ ಸೂಕ್ತ ಎಂದ ಗಂಗೂಲಿ

ಪ್ರಸ್ತುತ ಸನ್ನಿವೇಶದಲ್ಲಿ ಕೆಎಲ್ ರಾಹುಲ್​ರನ್ನು 4ನೇ ಕ್ರಮಾಂಕದಲ್ಲಿ ಯಾವುದೇ ಯೋಚನೆಯಿಲ್ಲದೆ ಆಡಿಸಬಹುದು ಎನ್ನುವುದು ಗಂಗೂಲಿ ಅಭಿಪ್ರಾಯ. ರಾಹುಲ್ ಈ ಕ್ರಮಾಂಕದಲ್ಲಿ ಆಡಿದರೆ, ಧೋನಿ ಮೇಲಿನ ಒತ್ತಡ ಕಡಿಮೆಯಾಗಲಿದೆ ಎನ್ನುವ ಅಂಶವನ್ನೂ ಅವರು ತಿಳಿಸಿದ್ದಾರೆ. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಧೋನಿ ಕಷ್ಟಪಡುತ್ತಿದ್ದಾರೆ. ರಾಹುಲ್ 4ನೇ ಕ್ರಮಾಂಕದಲ್ಲಿ ಆಡಿದಲ್ಲಿ ಖಂಡಿತ ಧೋನಿಯ ಮೇಲಿನ ಒತ್ತಡ ಕಡಿಮೆ ಆಗಲಿದೆ. ‘ತಂಡದ ಉತ್ತಮ ಆಟಗಾರ 4ನೇ ಕ್ರಮಾಂಕದಲ್ಲಿ ಆಡಬೇಕು. ಧೋನಿ, ರೈನಾ ಹಾಗೂ ದಿನೇಶ್ ಕಾರ್ತಿಕ್ ಕ್ರಮವಾಗಿ 5, 6 ಹಾಗೂ 7ನೇ ಕ್ರಮಾಂಕದಲ್ಲಿ ಇಳಿಯಬೇಕು. ಟಾಪ್ ಕ್ಲಾಸ್ ಆಟಗಾರ 4ನೇ ಕ್ರಮಾಂಕದಲ್ಲಿ ಇದ್ದರೆ ತಂಡ ಸಮತೋಲನ ಕಂಡುಕೊಳ್ಳಲಿದೆ’ ಎನ್ನುವುದು ಗಂಗೂಲಿ ಗಮನಿಸಿರುವ ಅಂಶವಾಗಿದೆ. ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ ಟಿ20ಯಲ್ಲಿ ರಾಹುಲ್ ಅದ್ಭುತ ಶತಕ ಬಾರಿಸಿದ್ದರು. ಆದರೆ, ಲಾರ್ಡ್ಸ್​ನಲ್ಲಿ ಶೂನ್ಯಕ್ಕೆ ಔಟಾದ ಬೆನ್ನಲ್ಲೇ ಅಂತಿಮ ಏಕದಿನದಿಂದ ಹೊರಬಿದ್ದಿದ್ದರು. ಇಂಥ ಪರಿಸ್ಥಿತಿಯಲ್ಲಿ ನಿಮಗೆ ಉತ್ತಮ ಆಟಗಾರ ದೊರಕುವುದಿಲ್ಲ ಎಂದು ದಾದಾ ತಿಳಿಸಿದ್ದಾರೆ.

ಕೊಹ್ಲಿ ಈವರೆಗೂ 35 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿ ಮುನ್ನಡೆಸಿದ್ದಾರೆ. 35 ಪಂದ್ಯಗಳಲ್ಲೂ ಭಿನ್ನ ತಂಡವನ್ನು ಕಣಕ್ಕಿಳಿಸಿರುವ ಸಾಧನೆ ಇವರದು. ಭಿನ್ನ ತಂಡವನ್ನು ಕಣಕ್ಕಿಳಿಸಿಯೂ 21 ಪಂದ್ಯದಲ್ಲಿ ಗೆದ್ದ ಸಾಧನೆ ಕೊಹ್ಲಿಯದ್ದು. ಇವುಗಳ ಪೈಕಿ 7 ಟೆಸ್ಟ್​ಗಳಲ್ಲಿ ಒಬ್ಬರನ್ನು, 16 ಟೆಸ್ಟ್​ಗಳಲ್ಲಿ ಇಬ್ಬರನ್ನು, 6 ಟೆಸ್ಟ್​ಗಳಲ್ಲಿ ಮೂವರನ್ನು ಹಾಗೂ 5 ಟೆಸ್ಟ್ ಟೆಸ್ಟ್​ಗಳಲ್ಲಿ ನಾಲ್ವರನ್ನು, ಒಂದು ಟೆಸ್ಟ್​ನಲ್ಲಿ ಐವರನ್ನು ಕೊಹ್ಲಿ ಬದಲಿಸಿದ್ದಾರೆ. 2014ರಲ್ಲಿ ಅಡಿಲೇಡ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಯಕನಾಗಿ ಆಡಿದ ಮೊದಲ ಟೆಸ್ಟ್​ನಲ್ಲಿ 5 ಬದಲಾವಣೆ ಮಾಡಿದ್ದರು.

Leave a Reply

Your email address will not be published. Required fields are marked *

Back To Top