More

    ಸಮುದ್ರದ ರಹಸ್ಯಗಳನ್ನು ಅನ್ವೇಷಿಸಲು ಭಾರತದ ಮೊದಲ ಮಾನವಸಹಿತ ಸಬ್‌ಮರ್ಸಿಬಲ್ ‘Matsya 6000’

    ಭಾರತದ ಮೊದಲ ಮಾನವಸಹಿತ ಸಬ್​ಮರ್ಸಿಬಲ್​ ಸಮುದ್ರದ ಆಳಕ್ಕೆ ಇಳಿಯಲು ಈಗಾಗಲೇ ಸಿದ್ದಗೊಂಡಿದೆ. ಭಾರತದ ಮೊದಲ ಮಾನವಸಹಿತ ಸಾಗರ ಮಿಷನ್‌ “ಸಮುದ್ರಯಾನ” ಆರಂಭ ಮಾಡಲಾಗಿದೆ. ಸಮುದ್ರದ ಆಳ ಹಾಗೂ ಸಮುದ್ರದ ಬಗ್ಗೆ ಸಂಸೋಧನೆ ಮಾಡುವ ಭಾರತದ ಈ “ಸಮುದ್ರಯಾನ” ಮಿಷನ್‌ನಲ್ಲಿ ಆರು ರಾಷ್ಟ್ರಗಳು ಕೈ ಜೋಡಿಸಿತ್ತು. ಒಂದು ಕಡೆಯಲ್ಲಿ ಭಾರತೀಯರು ಗಗನಯಾನಕ್ಕಾಗಿ ಚಂದ್ರಯಾನ-3ರಲ್ಲಿ ಯಶಸ್ವಿಯಾಗಿದ್ರೆ, ಇನ್ನೊಂದೆಡೆ ಭಾರತೀಯರು ಸಮುದ್ರಯಾನಕ್ಕಾಗಿ ಒಳ ಸಮುದ್ರಕ್ಕೆ ಧುಮುಕುತ್ತಿದ್ದಾರೆ.


    ಈ “ಸಮುದ್ರಯಾನ” ಮಿಷನ್‌ ಅನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಎನ್‌ಐಒಟಿ) ಕೈಗೊಂಡಿದ್ದು, ಈ ಯೋಜನೆಯು 6,000 ಕೋಟಿ ಆಳ ಸಮುದ್ರ ಮಿಷನ್‌ನ ಒಂದು ಭಾಗವಾಗಿದೆ.


    ಈ ವಾಹನವು 2.1-ಮೀಟರ್ ವ್ಯಾಸದ ಸುತ್ತುವರಿದ ಜಾಗವನ್ನು ಹೊಂದಿದೆ. ಟೈಟಾನಿಯಂ ಮಿಶ್ರಲೋಹ ಬಳಸಿ ಈ ವಾಹನವನ್ನು ನಿರ್ಮಾಣ ಮಾಡಲಾಗಿದೆ. ಮೂರು ಜನರನ್ನು ಸಾಗಿಸಲು ಸಾಧ್ಯವಾಗುವ ವಿನ್ಯಾಸ ಈ ಆಳ ಸಮುದ್ರದ ವಾಹನವಾದ ಮತ್ಸ್ಯ 6000 (Matsya 6000 )ರದ್ದು ಆಗಿದೆ.


    ಸಮುದ್ರಯಾನ ಯೋಜನೆಯು ಬಗ್ಗೆ ಆಗಸ್ಟ್​​ ತಿಂಗಳಲ್ಲಿ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ರಾಜ್ಯಸಭೆಯಲ್ಲಿ ಘೋಷಣೆ ಮಾಡಿದ್ದರು. ಸಬ್‌ಮರ್ಸಿಬಲ್ ‘ಮತ್ಸ್ಯ 6000’ ಮೂರು ಜನರನ್ನು 6,000 ಮೀಟರ್ ಆಳಕ್ಕೆ ಕೊಂಡೊಯ್ಯುತ್ತದೆ ಮತ್ತು ಆಳವಾದ ಸಮುದ್ರ ಸಂಪನ್ಮೂಲಗಳನ್ನು ಅಧ್ಯಯನ ಮಾಡುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಎನ್‌ಐಒಟಿ) ಈ ಸಬ್‌ಮರ್ಸಿಬಲ್ ಅನ್ನು ಸಮುದ್ರಯಾನ ಯೋಜನೆಯಡಿಯಲ್ಲಿ ನಿರ್ಮಿಸಿದೆ.


    ‘MATSYA 6000’ ಸಬ್​ಮರ್ಸಿಬಲ್​​​​ನಲ್ಲಿ ಸಿಬ್ಬಂದಿಯ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ:
    ‘MATSYA 6000’ ಸಬ್​ಮರ್ಸಿಬಲ್​​​​ನಲ್ಲಿ ಸಿಬ್ಬಂದಿಯ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಎನ್‌ಐಒಟಿಯ ವಿಜ್ಞಾನಿ ಸತ್ಯನಾರಾಯಣ್ ತಿಳಿಸಿದ್ದಾರೆ. ಸಮುದ್ರದಿಂದ ಸುಮಾರು 7 ಮೀಟರ್​​​ ಆಳದಲ್ಲಿ ಇದು ಯಾವ ರೀತಿ ಕಾರ್ಯ ನಿರ್ವಹಿಸಲಿದೆ? ಯಾವ ಸುರಕ್ಷತಾ ಕ್ರಮಗಳ ಬಗ್ಗೆ ಗಮನವಹಿಸಬೇಕು ಎಂಬುದನ್ನ ನೋಡಲು ಮಾನವರನ್ನು ಕಳುಹಿಸಿಯೇ ಈಗಾಗಲೇ ಪರೀಕ್ಷೆ ನಡೆಸಲಾಗಿದೆ.


    ‘MATSYA 6000’ ಸಬ್​ಮರ್ಸಿಬಲ್​​​​ನಲ್ಲಿನ ಸಂಪೂರ್ಣ ಪರೀಕ್ಷೆಯ ನಂತರ ಸಬ್‌ಮರ್ಸಿಬಲ್ ಅನ್ನು ಸಮುದ್ರದಾಳಕ್ಕೆ ಕಳಿಸಿದಲ್ಲಿ ಭಾರತವು, ಮಾನವಸಹಿತ ಸಬ್‌ಮರ್ಸಿಬಲನ್ನು ಸಮುದ್ರದ ಆಳಕ್ಕೆ ಕಳಿಸಿರುವ ವಿಶ್ವದ ಆರನೇ ರಾಷ್ಟ್ರವಾಗಲಿದೆ. ಈಗಾಗಲೇ ಯುಎಸ್, ರಷ್ಯಾ, ಫ್ರಾನ್ಸ್, ಜಪಾನ್ ಮತ್ತು ಚೀನಾದ ನಂತರ ಭಾರತ 6ನೇ ಸ್ಥಾನವನ್ನ ಗಿಟ್ಟಿಸಿಕೊಳ್ಳಲಿದೆ.


    ಸಬ್‌ಮರ್ಸಿಬಲ್‌ನ ಪ್ರಾಥಮಿಕ ವಿನ್ಯಾಸಗಳು ಪೂರ್ಣಗೊಂಡಿದ್ದು, ಡಿಸೆಂಬರ್ 2024 ರಲ್ಲಿ ಅರ್ಹತಾ ಪ್ರಯೋಗಗಳು ನಡೆಯಲಿವೆ. ಈ ಪರೀಕ್ಷೆಯ ನಂತರ ಗ್ರೀನ್​​​ ಸಿಗ್ನಲ್​​​ ಬಂದರೆ ಮತ್ಸ್ಯ 6000 ಸಬ್​ಮರ್ಸಿಬಲ್ ಸಮುದ್ರದ ಆಳಕ್ಕೆ ತೆರಳಲಿದೆ ಎಂದು (ಎನ್‌ಐಒಟಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts