ಡ್ರೈವಿಂಗ್​ ಲೈಸೆನ್ಸ್​ ಪಡೆದ ದೇಶದ ಮೊದಲ ಕುಬ್ಜ! ಅವಮಾನವೇ ಹೊಸ ಇತಿಹಾಸ ಬರೆಯಲು ಕಾರಣ

ಹೈದರಾಬಾದ್​: ಮೂರು ಅಡಿ ಎತ್ತರವಿರುವ ಗಟ್ಟಿಪಲ್ಲಿ ಶಿವಲಾಲ್​ ಅವರು ಕುಬ್ಜ ಸಮುದಾಯದಲ್ಲೇ ಹೊಸ ಇತಿಹಾಸವೊಂದನ್ನು ಬರೆದಿದ್ದಾರೆ. ದೇಶದಲ್ಲಿ ಡ್ರೈವಿಂಗ್​ ಲೈಸೆನ್ಸ್​ ಪಡೆದ ಮೊದಲ ಕುಬ್ಜ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 42 ವರ್ಷದ ಶಿವಲಾಲ್​ ನಗರದ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತಾನು ಕುಬ್ಜನಾಗಿರುವುದುರಿಂದ ಪ್ರಯಾಣ ಮಾಡುವುದು ತುಂಬಾ ಕಷ್ಟಕರವಾಗಿದ್ದರಿಂದ ಸ್ವಾವಲಂಬಿಯಾಗುವ ಅವಶ್ಯಕತೆ ಇತ್ತು. ಆದರೆ ಎತ್ತರ ಕಡಿಮೆ ಇರುವುದರಿಂದ ಡ್ರೈವ್​ ಮಾಡುವುದು ಕೂಡ ಕಷ್ಟಕರವಾಗಿತ್ತು. ಹೀಗಾಗಿ ಸಾರ್ವಜನಿಕ ಸಾರಿಗೆ ಮತ್ತು ಕ್ಯಾಬ್ಸ್​ ಮೇಲೆ ಶಿವಲಾಲ್​ ಅವಲಂಬಿತರಾಗಿದ್ದರು. … Continue reading ಡ್ರೈವಿಂಗ್​ ಲೈಸೆನ್ಸ್​ ಪಡೆದ ದೇಶದ ಮೊದಲ ಕುಬ್ಜ! ಅವಮಾನವೇ ಹೊಸ ಇತಿಹಾಸ ಬರೆಯಲು ಕಾರಣ