ಮೊದಲ ಕೃತಕ ಹಾರ್ಟ್ ವಾಲ್ವ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆ ಅನ್ವಯ ಇದೇ ಮೊದಲ ಬಾರಿಗೆ ದೇಶೀಯವಾಗಿ ‘ಕೃತಕ ಅಯೋಟಿಕ್ ವಾಲ್ವ್’ ತಯಾರಿಸಲಾಗಿದೆ. ಓಪನ್ ಹಾರ್ಟ್ ವಾಲ್ವ್ (ಹೃದಯ ಕವಾಟ) ಬದಲಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಲು ಶಕ್ತರಾಗಿರದ ಮತ್ತು ಶಸ್ತ್ರಚಿಕಿತ್ಸೆಯಿಂದ ಜೀವಕ್ಕೆ ಅಪಾಯ ವಾಗುವ ಆತಂಕದಲ್ಲಿರುವ ಜನರಿಗೆ ಇದರಿಂದ ಅನುಕೂಲವಾಗಲಿದೆ. ‘ಮೈ ವಾಲ್’ ಹೆಸರಿನಲ್ಲಿ ಕೃತಕ ವಾಲ್ವ್ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಓಪನ್ ಹಾರ್ಟ್​ಗೆ ಪರ್ಯಾಯ: ‘ಅನೇಕ ಕಾರಣಗಳಿಂದಾಗಿ ಜನರು ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಹಿಂಜರಿಯುತ್ತಾರೆ. ಅಂಥವರಿಗೆ ದೇಶೀಯ ನಿರ್ವಿುತ ವಾಲ್ವ್ ನೆರವಾಗಲಿದೆ. ಟ್ರಾನ್ಸ್ ಕ್ಯಾಥರರ್ ಅಯೋಟಿಕ್ ಹಾರ್ಟ್ ವಾಲ್ವ್ ರೀಪ್ಲೇಸ್​ವೆುಂಟ್ (ಟಿಎವಿಆರ್) ಮೂಲಕ ಮೈವಾಲ್ ಅಳವಡಿಸಲಾಗುತ್ತದೆ’ ಎಂದು ಮೆರಿಲ್ ಕಂಪನಿಯ ಉಪಾಧ್ಯಕ್ಷ ಸಂಜೀವ್ ಭಟ್ ಹೇಳಿದ್ದಾರೆ.

ಶಸ್ತ್ರಚಿಕಿತ್ಸೆ ರಹಿತವಾಗಿ ಕೃತಕ ವಾಲ್ವ್ ಅಳವಡಿಕೆ ವಿಧಾನ ದೇಶದಲ್ಲೇ ಬಹುದೊಡ್ಡ ಸಂಶೋಧನೆಯಾಗಿದೆ. ಈ ಅಳವಡಿಕೆಯಿಂದಾಗಿ ರೋಗಿಗಳು ಶೀಘ್ರ ಗುಣಮುಖರಾಗಿದ್ದಾರೆ ಎಂದು ಹೃದಯತಜ್ಞ ರವೀಂದರ್ ಸಿಂಗ್ ರಾವ್ ಹೇಳಿದ್ದಾರೆ.

ಹೃದ್ರೋಗದಿಂದ ಬಳಲುತ್ತಿದ್ದ ಒಬ್ಬ ವ್ಯಕ್ತಿಗೆ ಒಂದೂವರೆ ವರ್ಷಗಳ ಹಿಂದೆ ಮೊದಲ ಬಾರಿಗೆ ಮೈವಾಲ್ ಅಳವಡಿಸಲಾಗಿತ್ತು. ಅವರು ಯಾವುದೇ ತೊಂದರೆ ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ. ರೋಗಿಯ ಹೃದಯ ಸಂಬಂಧಿ ತೊಂದರೆಯ ಲಕ್ಷಣಗಳು ಕಡಿಮೆಯಾಗಿವೆ.

| ರವೀಂದರ್ ಸಿಂಗ್ ರಾವ್, ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್

Leave a Reply

Your email address will not be published. Required fields are marked *