Friday, 16th November 2018  

Vijayavani

Breaking News

ಆರ್​ಸಿಬಿ ತಂಡದ ಕೋಚ್​ ಆಗಿ ಗ್ಯಾರಿ ಕರ್ಸ್ಟನ್, ಆಶಿಶ್ ನೆಹ್ರಾ ಆಯ್ಕೆ

Tuesday, 02.01.2018, 4:13 PM       No Comments

ಹೊಸದಿಲ್ಲಿ: 2011 ರ ವಿಶ್ವಕಪ್​ನಲ್ಲಿ ಭಾರತದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ತರಬೇತುದಾರ ಗ್ಯಾರಿ ಕಸ್ಟರ್ನ್​ ಹಾಗೂ ಇತ್ತೀಚೆಗೆ ತಂಡದಿಂದ ವಿದಾಯ ಹೇಳಿದ ಟೀಂ ಇಂಡಿಯಾದ ಎಡಗೈ ವೇಗಿ ಆಶಿಶ್​ ನೆಹ್ರಾ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ

ಏಪ್ರಿಲ್​ ತಿಂಗಳಿನಿಂದ ಪ್ರಾರಂಭವಾಗುವ ಇಂಡಿಯನ್​ ಪ್ರೀಮಿಯರ್​ ಲೀಗ್​ನ 11ನೇ ಆವೃತ್ತಿಯಲ್ಲಿ ಆರ್​ಸಿಬಿ ತಂಡವನ್ನು ಈ ಇಬ್ಬರು ಪರಿಣಿತರು ಮುನ್ನಡೆಸಲಿದ್ದಾರೆ. ಬ್ಯಾಟಿಂಗ್​ ವಿಭಾಗಕ್ಕೆ ಗ್ಯಾರಿ ಕಸ್ಟರ್ನ್​ ಹಾಗೂ ಬೌಲಿಂಗ್​ ವಿಭಾಗಕ್ಕೆ ಆಶಿಶ್​ ನೆಹ್ರಾ ತರಬೇತಿ ನೀಡಲಿದ್ದಾರೆ.

ಕೇವಲ ತರಬೇತುದಾರರಲ್ಲದೇ ಲೀಗ್​​ನ ಉದ್ದಕ್ಕೂ ತಂಡದ ಮಾರ್ಗದರ್ಶಕರಾಗಿಯೂ ಈ ಇಬ್ಬರು ತಮ್ಮ ಕೆಲಸವನ್ನು ನಿಭಾಯಿಸಲಿದ್ದಾರೆ. ಉಳಿದಂತೆ ತಂಡದ ಕೋಚ್​ ಆಗಿ ನ್ಯೂಜಿಲೆಂಡ್​ ತಂಡದ ಮಾಜಿ ನಾಯಕ ಡೇನಿಯಲ್​ ವೆಟ್ಟೀರಿ ಅವರನ್ನು ಹಾಗೇ ಉಳಿಸಿಕೊಂಡಿದ್ದಾರೆ.

ಈಗಾಗಲೇ ಟೀ ಇಂಡಿಯಾಗೆ ವಿಶ್ವಕಪ್​ ಗೆಲುವು ತಂದು ಕೊಟ್ಟಿರುವ ಗ್ಯಾರಿ ಕಸ್ಟರ್ನ್​ ಇದುವರೆಗೂ ಐಪಿಎಲ್​ ಪ್ರಶಸ್ತಿ ಗೆಲ್ಲದ ಆರ್​ಸಿಬಿಗೂ ಜಯದ ಗರಿ ತಂದುಕೊಡುವ ವಿಶ್ವಾಸವಿದೆ. ಇನ್ನು ನೆಹ್ರಾ ಇದೇ ಮೊದಲ ಬಾರಿಗೆ ಬೌಲಿಂಗ್​ ಕೋಚ್​ ಆಗಿ ತಂಡವೊಂದನ್ನು ಮುನ್ನಡೆಸಲಿರುವುದು ವಿಶೇಷ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top