ಇಂದು ಇಂಗ್ಲೆಂಡ್​ಗೆ ಪ್ರಯಾಣ ಬೆಳಸಿ ಟೀಂ ಇಂಡಿಯಾ ಸೇರಿಕೊಳ್ಳಲಿರುವ ರಿಷಬ್​​ ಪಂತ್​

ಮುಂಬೈ: ದೆಹಲಿಯ ಯುವ ವಿಕೆಟ್​ ಕೀಪರ್​​ ಹಾಗೂ ಬ್ಯಾಟ್ಸ್​ಮನ್​​​ ರಿಷಬ್​​ ಪಂತ್​ ಅವರು ಇಂದು ಇಂಗ್ಲೆಂಡ್​ಗೆ ಪಯಣ ಬೆಳಸಲಿದ್ದಾರೆ ಎಂದು ಭಾರತ ಕ್ರಿಕೆಟ್​​ ನಿಯಂತ್ರಣ ಮಂಡಳಿ(ಬಿಸಿಸಿಐ) ಸ್ಪಷ್ಟಪಡಿಸಿದೆ.

ಭಾರತದ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್​​ ಧವನ್​​ ಅವರು ಗಾಯಗೊಂಡಿರುವ ಹಿನ್ನೆಲೆಯಲ್ಲಿ 15 ಆಟಗಾರರ ತಂಡಕ್ಕೆ ರಿಷಬ್​​ ಪಂತ್​ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ನಾಳೆ ನಡೆಯಲಿರುವ ನ್ಯೂಜಿಲೆಂಡ್​​​​ ವಿರುದ್ಧದ ಪಂದ್ಯ ಹಾಗೂ 16 ರಂದು ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಪಂತ್​​ ಪ್ರದರ್ಶನ ತೋರಲಿದ್ದಾರೆ.

ಆದಷ್ಟು ಬೇಗ ರಿಷಬ್​​ ಪಂತ್​ ಭಾರತದ 15 ಆಟಗಾರರ ತಂಡಕ್ಕೆ ಸೇರ್ಪಡೆಯಾಗಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್​​​​​​​​ ಸಮಿತಿ (ಐಸಿಸಿ) ಎಂದು ಬಿಸಿಸಿಐಗೆ ತಿಳಿಸಿದೆ. ಅದಕ್ಕಾಗಿ ಪಂತ್​​ ಇಂದು ಮುಂಬಯಿಯಿಂದ ಪಯಣ ಬೆಳೆಸಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧವನ್​​​​​ ಅದ್ಭುತ ಪ್ರದರ್ಶನ ತೋರುವ ಮೂಲಕ ಶತಕದಾಟವಾಡಿದ್ದರು. ಆ ಪಂದ್ಯದಲ್ಲಿಯೇ ಧವನ್​​​​​​ ಹೆಬ್ಬೆರಳು ಗಾಯಗೊಂಡಿತ್ತು. ವೈದ್ಯರು ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕು ಎಂದು ತಿಳಿಸಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *