ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿ, ರೋಹಿತ್​ಗಿಂತ ಹೆಚ್ಚು ರನ್​ ಗಳಿಸಿದ ಮಿಥಾಲಿ ರಾಜ್​

ನವದೆಹಲಿ: ಭಾರತದ ಮಹಿಳಾ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್​​ ಟಿ20 ಇಂಟರ್​ನ್ಯಾಷನಲ್​ ಕ್ರಿಕೆಟ್​​ನಲ್ಲಿ ಹೊಸ ದಾಖಲೆ ಬರೆದಿದ್ದು, ರನ್​ ಗಳಿಕೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಹಿಟ್​​ಮ್ಯಾನ್​ ಖ್ಯಾತಿಯ ರೋಹಿತ್​​ ಶರ್ಮಾ ರನ್ನು ಹಿಂದಿಕ್ಕಿದ್ದಾರೆ.

ಮಹಿಳಾ ಟಿ20 ವಿಶ್ವಕಪ್​ನಲ್ಲಿ ಗುರುವಾರ ಐರ್ಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ಮಿಥಾಲಿ ಈ ದಾಖಲೆ ಬರೆದಿದ್ದು, ಭಾರತದ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಕೀರ್ತಿಗೆ ಮಿಥಾಲಿ ಪಾತ್ರರಾಗಿದ್ದಾರೆ. ಮಿಥಾಲಿ 80 ಇನಿಂಗ್ಸ್​​ಗಳಲ್ಲಿ 2,283 ರನ್​​ ಕಲೆಹಾಕಿದ್ದಾರೆ. ರೋಹಿತ್​ ಶರ್ಮಾ 80 ಇನ್ನಿಂಗ್ಸ್​ಗಳಲ್ಲಿ 2,207 ರನ್​ ಗಳಿಸಿದ್ದರೆ, ವಿರಾಟ್ ಕೊಹ್ಲಿ 58 ಇನ್ನಿಂಗ್ಸ್​​ಗಳಲ್ಲಿ 2,102 ರನ್​​ ಕಲೆಹಾಕಿದ್ದಾರೆ.

17 ಅರ್ಧಶತಕ

ವಿಥಾಲಿ ರಾಜ್ ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್​ನಲ್ಲಿ ಇದುವರೆಗೂ 17 ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಅರ್ಧಶತಕ ಬಾರಿಸಿದ ವಿಶ್ವದ 3ನೇ ಬ್ಯಾಟ್ಸ್​ವುಮೆನ್ ಎನಿಸಿಕೊಂಡರು. ನ್ಯೂಜಿಲೆಂಡ್​ನ ಸುಜೀ ಬೇಟ್ಸ್ (21) ಹಾಗೂ ಸ್ಟೀಫಾನಿ ಟೇಲರ್ (20) ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದಾರೆ. (ಏಜೆನ್ಸೀಸ್​)