ಆಗಸದಲ್ಲಿ ವಿಮಾನಗಳ ಡಿಕ್ಕಿ: ಭಾರತೀಯ ಯುವತಿ ಸಾವು

ವಾಷಿಂಗ್ಟನ್​: ಅಮೆರಿಕದ ಫ್ಲೋರಿಡಾದಲ್ಲಿ ನಡೆದ ವಿಮಾನ ದುರಂತದಲ್ಲಿ ಭಾರತದ 19 ವರ್ಷದ ಯುವತಿ ಸೇರಿ ಮೂವರು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಟ್ರೈನಿ ಪೈಲೆಟ್​ ಭಾರತದ ನಿಶಾ ಸೇಜ್ವಾಲ್​ (19), ಜಾರ್ಜ್ ಸ್ಯಾಂಚೆಜ್ (22), ರಾಲ್ಫ್​ ನೈಟ್​ (72) ಮೃತಪಟ್ಟಿದ್ದಾರೆ. ಅಪಘಾತದಲ್ಲಿ ನಾಲ್ಕನೇ ವ್ಯಕ್ತ ಸಹ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದ್ದು, ಆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ವಿಮಾನ ತರಬೇತಿ ಶಾಲೆಗೆ ಸೇರಿದ ಎರಡು ಸಣ್ಣ ವಿಮಾನಗಳ ನಡುವೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಡೀನ್ ಅಂತಾರಾಷ್ಟ್ರೀಯ ಶಾಲೆಗೆ ಸೇರಿದ ಪೈಪರ್ ಪಿ-34 ಹಾಗೂ ಸೆಸ್ನಾ 172 ವಿಮಾನಗಳಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳಿದ್ದರು. ಈ ವಿಮಾನಗಳು ಪರಸ್ಪರ ಡಿಕ್ಕಿಯಾದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ. ಕಳೆದ ಒಂದು ದಶಕದಲ್ಲಿ ಎರಡು ಡಜನ್​ಗೂ ಇಂತಹ ಪ್ರಕರಣಗಳು ಈ ತರಬೇತಿ ಶಾಲೆಯಲ್ಲಿ ವರದಿಯಾಗಿದೆ ಎಂದು ಅಮೆರಿಕ ವಿಮಾನಯಾನ ವಿಭಾಗ ತಿಳಿಸಿದೆ.

ಮೃತ ನಿಶಾ ಸೇಜ್ವಾಲ್ ಕಳೆದ 2017ರ ಸೆಪ್ಟೆಂಬರ್​ನಲ್ಲಿ ತರಬೇತಿಗೆ ಸೇರಿದ್ದಳು ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)