More

  ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು: ಕೆನಡಾ ಪ್ರಜೆಗಳಿಗೆ ಭಾರತೀಯ ವೀಸಾ ಸೇವೆ ಸಸ್ಪೆಂಡ್

  ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್​ ನಿಜ್ಜರ್​ ಹತ್ಯೆ ವಿಚಾರದಲ್ಲಿ ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಸಂಘರ್ಷ ತಾರಕಕ್ಕೇರಿದ್ದು, ಭಾರತ ಪ್ರವಾದ ಮೇಲೆ ಕೆನಡಾ ಕೆಲವು ನಿರ್ಬಂಧಗಳನ್ನು ಹೇರಿರುವ ಬೆನ್ನಲ್ಲೇ ಭಾರತ ಕೆನಡಾ ಪ್ರಜೆಗಳಿಗೆ ಮುಂದಿನ ಆದೇಶದವರೆಗೆ ವೀಸಾ ಸೇವೆಯಲ್ಲಿ ಅಮಾನತಿನಲ್ಲಿ ಇರಿಸಿದೆ.

  ವೀಸಾ ಸಲಹಾ ಸೇವೆಗಳನ್ನು ಒದಗಿಸುವ ಭಾರತದಲ್ಲಿನ ಆನ್‌ಲೈನ್ ವೀಸಾ ಅರ್ಜಿ ಕೇಂದ್ರ ಬಿಎಲ್​ಎಸ್​ ಇಂಟನ್ಯಾಷನಲ್​ ತನ್ನ ವೆಬ್‌ಸೈಟ್‌ನಲ್ಲಿ ಈ ವಿಚಾರವನ್ನು ತಿಳಿಸಿದೆ. ಕಾರ್ಯಾಚರಣೆಯ ಕಾರಣಗಳಿಂದಾಗಿ 2023ರ ಸೆ. 21ರಿಂದ ಜಾರಿಗೆ ಬರುವಂತೆ ಮುಂದಿನ ಸೂಚನೆ ಬರುವವರೆಗೂ ಭಾರತೀಯ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹೆಚ್ಚಿನ ಅಪ್​ಡೇಟ್ಸ್​ಗಾಗಿ BLS ವೆಬ್‌ಸೈಟ್ ಅನ್ನು ಪರಿಶೀಲಿಸುತ್ತಿರಿ ಎಂದು ತಿಳಿಸಲಾಗಿದೆ.

  ಕೆನಡಾದ ಪ್ರಧಾನಿ ಜಸ್ಟಿನ್​ ಟ್ರುಡೋ ಅವರು ಭಾರತ ಸರ್ಕಾರದ ತನಿಖಾ ಏಜೆನ್ಸಿಗಳು ಮತ್ತು ಸಿಖ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್​ ಹತ್ಯೆಯ ನಡುವಿನ ಸಂಭಾವ್ಯ ಸಂಬಂಧದ ಆರೋಪದ ಮಾಡಿದ ಬೆನ್ನಲ್ಲೇ ಭಾರತ ಈ ಕ್ರಮ ಕೈಗೊಂಡಿದೆ. ಕೆನಾಡದಲ್ಲಿ ಭಾರತೀಯ ರಾಜತಾಂತ್ರಿ ಅಧಿಕಾರಿಗಳನ್ನು ಗಡಿಪಾರು ಮಾಡಿದ ಬೆನ್ನಲ್ಲೇ ಭಾರತದಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಗಡಿಪಾರು ಮಾಡಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

  ಸಂಸತ್ತಿನಲ್ಲಿ ಜಸ್ಟಿನ್ ಟ್ರುಡೊ ಹೇಳಿದ್ದೇನು?

  ಜೂನ್‌ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಸಿಖ್ ಸಮುದಾಯದ ಖಲಿಸ್ತಾನ ನಾಯಕ ಹರ್ದೀಪ್​ ಸಿಂಗ್​ ನಿಜ್ಜರ್​ ಹತ್ಯೆಯಾಗಿದ್ದ. ಕೆನಾಡದಲ್ಲಿ ಖಲಿಸ್ತಾನಿ ನಾಯಕನನ್ನು ಭಾರತ ಸರ್ಕಾರ ಹತ್ಯೆ ಮಾಡಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅಲ್ಲಿನ ಸಂಸತ್ತಿನಲ್ಲಿ ಹೇಳಿದ್ದರು. ಜಿ-20 ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆಗೂ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಎಂದು ಟ್ರುಡೊ ಹೇಳಿದ್ದರು. ಭಾರತದ ಕೈವಾಡದ ಬಗ್ಗೆ ಕೆನಡಾ ಸರ್ಕಾರಕ್ಕೆ ಗುಪ್ತಚರ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದ್ದರು. ಅಲ್ಲದೆ, ಕೆನಾಡದಲ್ಲಿ ಭಾರತೀಯ ರಾಜತಾಂತ್ರಿ ಅಧಿಕಾರಿಗಳನ್ನು ಕೆನಡಾ ಗಡಿಪಾರು ಮಾಡಿತು.

  ಇದನ್ನೂ ಓದಿ: ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

  ಈ ಆರೋಪಗಳನ್ನು ಭಾರತ ಸ್ಪಷ್ಟವಾಗಿ ನಿರಾಕರಿಸಿದೆ. ಕೆನಡಾದಲ್ಲಿ ಯಾವುದೇ ಹಿಂಸಾಚಾರದಲ್ಲಿ ಭಾರತ ಸರ್ಕಾರದ ಭಾಗಿಯಾಗಿರುವ ಆರೋಪಗಳು ಅಸಂಬದ್ಧ ಮತ್ತು ಪ್ರೇರಿತವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಅಲ್ಲದೆ, ಭಾರತದಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಗಡಿಪಾರು ಮಾಡುವ ಮೂಲಕ ತಿರುಗೇಟು ನೀಡಿದೆ. ​

  ಯಾರು ಈ ನಿಜ್ಜರ್​?

  ಹರ್ದೀಪ್ ಸಿಂಗ್​ ನಿಜ್ಜರ್​, ಪಂಜಾಬ್ ಮೂಲದ ಖಲಿಸ್ತಾನಿ ಉಗ್ರ. 1992ರಲ್ಲಿ ಕೆನಡಾಕ್ಕೆ ವಲಸೆ ಹೋಗಿ ನೆಲೆಸಿದ್ದ. ಖಲಿಸ್ತಾನ್ ಟೈಗರ್ ಪೋರ್ಸ್ (ಕೆಟಿಎಫ್) ಮುಖ್ಯಸ್ಥನಾಗಿ ಪ್ರತ್ಯೇಕ ಖಲಿಸ್ತಾನ ರಚನೆಗೆ ಆಗ್ರಹಿಸಿ ಭಾರತದ ವಿರುದ್ಧ ಕೆಲಸ ಮಾಡುತ್ತಿದ್ದ. ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಆತನ ಹೆಸರೂ ಇತ್ತು. ಬ್ರಾಂಪ್ಟನ್ ನಗರದಲ್ಲಿ ಖಲಿಸ್ತಾನ ಪರವಾಗಿ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ. ನಿಜ್ಜರ್ ವಿರುದ್ಧ 2015ರಲ್ಲಿ ಭಾರತ ಲುಕ್‌ಔಟ್ ನೋಟಿಸ್, 2016ರಲ್ಲಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಕೆನಡಾದಲ್ಲಿ ನಿಜ್ಜರ್ ವಿರುದ್ಧ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ನಿಜ್ಜರ್‌ನನ್ನು ಭಾರತದ ಗುಪ್ತಚರ ಸಂಸ್ಥೆ ರಾ ಹತ್ಯೆ ಮಾಡಿದೆ ಎಂದು ಖಲಿಸ್ತಾನ್ ಪರ ಸಂಘಟನೆಗಳು ಆರೋಪ ಮಾಡಿವೆ.

  ಕಲಹಕ್ಕೆ ಏನು ಕಾರಣ?

  * ಭಾರತದಲ್ಲಿ ಪ್ರತ್ಯೇಕತಾವಾದಿ ಹೋರಾಟ ನಡೆಸುತ್ತಿರುವ ಖಲಿಸ್ತಾನ ನಾಯಕರಿಗೆ ಕೆನಡಾ ಆಶ್ರಯ.
  * ಖಲಿಸ್ತಾನ ನಾಯಕರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಸಂಪರ್ಕ
  * ಖಲಿಸ್ತಾನ ಮೂಲಕ ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲು ಪಾಕಿಸ್ತಾನ ಸಂಚು
  * ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ಅವಕಾಶ ನೀಡುತ್ತಿದೆ ಎಂದು ಭಾರತದ ಆರೋಪ
  * ಇತ್ತೀಚೆಗೆ ಹಲವು ಖಲಿಸ್ತಾನಿ ನಾಯಕರ ನಿಗೂಢ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಆರೋಪ

  ಕೆನಡಾ-ಭಾರತ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು: ಪ್ರಚೋದನೆಗೆ ಯತ್ನಿಸುತ್ತಿಲ್ಲ ಎಂದ ಜಸ್ಟಿನ್ ಟ್ರುಡೊ

  ಭಾರತದ ಈ ಸ್ಥಳದಲ್ಲಿ ಪ್ರಯಾಣ ಮಾಡುವುದು ಅಸುರಕ್ಷಿತ; ಕೆನಡಾ ನೂತನ ಪ್ರಯಾಣ ಮಾರ್ಗಸೂಚಿ

  ರಾಜ್ಯೋತ್ಸವ ರಸಪ್ರಶ್ನೆ - 29

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts