ಸೆಮಿಫೈನಲ್​ನಲ್ಲಿ ಸೋಲುಂಡ ಟೀಂ ಇಂಡಿಯಾ ಸ್ವದೇಶಕ್ಕೆ ಮರಳುವುದು ಇನ್ನೂ ತಡವಾಗಲಿದೆ, ಏಕೆ ಗೊತ್ತಾ?

ಲಂಡನ್​: ವಿಶ್ವಕಪ್​ನ ಮೊದಲ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಸೋತು ವಿಶ್ವಕಪ್​ ಅಭಿಯಾನವನ್ನು ಮುಗಿಸಿರುವ ಟೀಂ ಇಂಡಿಯಾದ ಆಟಗಾರರು ಸ್ವದೇಶಕ್ಕೆ ಮರಳಲು ಸಿದ್ಧರಾಗಿದ್ದಾರೆ. ಆದರೆ, ಅವರು ಮರಳುವುದು ಇನ್ನೂ ತಡವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.

ಮೊದಲ ಸೆಮಿಫೈನಲ್​ ಪಂದ್ಯ ಮಂಗಳವಾರ ಮುಕ್ತಾಯವಾಗಬೇಕಿತ್ತು. ಆದರೆ, ಮಳೆಯಿಂದಾಗಿ ಪಂದ್ಯ ಬುಧವಾರ ಮುಕ್ತಯವಾಗಿತ್ತು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ಸ್ವದೇಶಕ್ಕೆ ಮರಳಲು ಗುರುವಾರ ಟಿಕೆಟ್​ ಬುಕ್​ ಮಾಡಲಾಗಿದೆ. ತಕ್ಷಣಕ್ಕೆ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ತಂಡದ ಎಲ್ಲಾ ಆಟಗಾರರು ಜು. 14 ರಂದು ಭಾನುವಾರ ಲಂಡನ್​ನಿಂದ ಮುಂಬೈಗೆ ಹೊರಡಲಿದ್ದಾರೆ. ಸೋಲಿನ ಹತಾಶೆಯಲ್ಲಿರುವ ಆಟಗಾರರು ಆದಷ್ಟು ಬೇಗ ಅಲ್ಲಿಂದ ಹೊರಡಲು ಸಿದ್ಧರಾಗಿದ್ದರು. ಆದರೆ,ವಿಮಾನ ಟಿಕೆಟ್​ ಸಮಸ್ಯೆಯಿಂದಾಗಿ ಅವರು ಆಗಮಿಸುವುದು ಕೊಂಚ ತಡವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಭಾರತಕ್ಕೆ ಮರಳುತ್ತಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಮೇಲೆ ಅಭಿಮಾನಿಗಳು ಕಣ್ಣು ನೆಟ್ಟಿದ್ದಾರೆ. ವಿಶ್ವಕಪ್​ನಲ್ಲಿ ತಮ್ಮ ಪ್ರದರ್ಶನದಿಂದ ಸಾಕಷ್ಟು ಟೀಕೆಗೊಳಗಾಗಿರುವ ಧೋನಿ ತಮ್ಮ ಕ್ರಿಕೆಟ್​ ಭವಿಷ್ಯದ ಕುರಿತು ವೆಸ್ಟ್​ಇಂಡೀಸ್​ ಪ್ರವಾಸಕ್ಕೂ ಮುನ್ನ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ಕ್ರಿಕೆಟ್​ ಅಭಿಮಾನಿಗಳು ಅವರ ನಿರ್ಧಾರ ಏನಾಗಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಧೋನಿ ಕ್ರಿಕೆಟ್​ ಭವಿಷ್ಯದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಆ ಕುರಿತು ಅವರು ನನಗೆ ಇದುವರೆಗೆ ಏನನ್ನು ಹೇಳಿಲ್ಲ ಎಂದು ತಿಳಿಸಿದ್ದಾರೆ.

ಭಾನುವಾರ ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ಮತ್ತು ಇಂಗ್ಲೆಂಡ್​ ತಂಡ ಚೊಚ್ಚಲ ವಿಶ್ವಕಪ್​ ಗೆಲ್ಲಲು ಸೆಣೆಸಲಿವೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *