More

  ಶ್ರೀಲಂಕಾದ ಲೆಜೆಂಡ್ಸ್​ ಕ್ರಿಕೆಟ್​ ಟ್ರೋಫಿಯಲ್ಲಿ ಮ್ಯಾಚ್​ ಫಿಕ್ಸಿಂಗ್: ಇಬ್ಬರು ಭಾರತೀಯರ ವಿರುದ್ಧ​ ಆರೋಪ

  ಕೊಲಂಬೊ: ಶ್ರೀಲಂಕಾದಲ್ಲಿ ಆಯೋಜನೆಗೊಂಡ ಲೆಜೆಂಡ್ಸ್​ ಕ್ರಿಕೆಟ್​ ಟ್ರೋಫಿಯಲ್ಲಿ ತಂಡವೊಂದರ ಮಾಲೀಕತ್ವ ಹೊಂದಿರುವ ಭಾರತೀಯ ಪೌರ ಯೋಣಿ ಪಟೇಲ್​ ಮತ್ತೊಂದು ತಂಡದ ಮ್ಯಾನೇಜರ್​ ಆಗಿರುವ ಭಾರತದ ಪಿ. ಆಕಾಶ್​ ಜತೆಗೂಡಿ ಮ್ಯಾಚ್​ ಫಿಕ್ಸಿಂಗ್​ ನಡೆಸಲು ಯತ್ನಿಸಿದ ಆರೋಪ ಎದುರಿಸಿದ್ದಾರೆ. ಇದರಿಂದಾಗಿ ಕೊಲಂಬೊದ ಮ್ಯಾಜಿಸ್ಟ್ರೆಟ್​ ಕೋರ್ಟ್​, ಇಬ್ಬರಿಗೂ ಒಂದು ತಿಂಗಳ ಕಾಲ ದೇಶ ಬಿಟ್ಟು ಹೋಗದಂತೆ ರ್ನಿಬಂಧ ಹೇರಲಾಗಿದೆ.

  ಐಸಿಸಿ ಮತ್ತು ಶ್ರೀಲಂಕಾ ಕ್ರಿಕೆಟ್​ ಮಂಡಳಿಯ ಮಾನ್ಯತೆ ಹೊಂದಿರದ ಈ ಟೂರ್ನಿಯಲ್ಲಿ ಯೋಣಿ ಪಟೇಲ್​, ಕ್ಯಾಂಡಿ ಸ್ವಾಂಪ್​ ಆರ್ಮಿ ತಂಡದ ಮಾಲೀಕರಾಗಿದ್ದರೆ, ಪಿ. ಆಕಾಶ್​ ಪಂಜಾಬ್​ ರಾಯಲ್ಸ್​ ತಂಡದ ಮ್ಯಾನೇಜರ್​ ಆಗಿದ್ದರು. ಇವರಿಬ್ಬರು ಫಿಕ್ಸಿಂಗ್​ ಆಮಿಷ ಒಡ್ಡಿರುವ ಬಗ್ಗೆ ಟೂರ್ನಿಯಲ್ಲಿ ಆಡಿದ್ದ ಶ್ರೀಲಂಕಾದ ಮಾಜಿ ನಾಯಕ ಉಪುಲ್​ ತರಂಗ ಮತ್ತು ನ್ಯೂಜಿಲೆಂಡ್​ನ ಮಾಜಿ ಆಟಗಾರ ನೀಲ್​ ಬ್ರೂಮ್​ ದೂರು ನೀಡಿದ್ದಾರೆ. ಹೀಗಾಗಿ ಇಬ್ಬರಿಗೂ ಪ್ರಕರಣದ ತನಿಖೆ ಮುಗಿಯುವವರೆಗೆ ದೇಶ ಬಿಟ್ಟುಹೋಗದಂತೆ ರ್ನಿಬಂಧ ಹೇರಲಾಗಿದೆ.

  ಶ್ರೀಲಂಕಾ ಮ್ಯಾಚ್​ ಫಿಕ್ಸಿಂಗ್​ ಮತ್ತು ಕ್ರೀಡಾ ಭ್ರಷ್ಟಾಚಾರದ ವಿರುದ್ಧ ಕಾನೂತು ತಂದಿರುವ ದಣ ಏಷ್ಯಾದ ಮೊದಲ ದೇಶವಾಗಿದ್ದು, ಪ್ರಕರಣದಲ್ಲಿ ತಪ್ಪಿತಸ್ಥರಾದರೆ ಇಬ್ಬರೂ 10 ವರ್ಷ ಜೈಲು ಮತ್ತು ದಂಡ ಶಿಕ್ಷೆಗೆ ಗುರಿಯಾಗಲಿದ್ದಾರೆ. 2019ರಲ್ಲಿ ಲಂಕಾದಲ್ಲಿ ಜಾರಿಯಾಗಿರುವ ಈ ಕಾನೂನಿನ ಅಡಿಯಲ್ಲಿ, ಫಿಕ್ಸಿಂಗ್​ ಆಮಿಷದ ಬಗ್ಗೆ ದೂರು ನೀಡದಿದ್ದರೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

  IPL 2024: ಯಶಸ್ವಿ ಜೈಸ್ವಾಲ್​ ಬ್ಯಾಟಿಂಗ್​ ಕೊಂಡಾಡಿದ ವೆಸ್ಟ್​ ಇಂಡೀಸ್​ ದಿಗ್ಗಜ ಬ್ರಿಯಾನ್​ ಲಾರಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts