ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯಕ್ಕೆ ತಂಡ ಪ್ರಕಟ: ಮಯಾಂಕ್​, ಕೆ.ಎಲ್​ ರಾಹುಲ್​ಗೆ ಸ್ಥಾನ

ದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಟೆಸ್ಟ್​ ಪಂದ್ಯಕ್ಕೆ ಭಾರತೀಯ ಕ್ರಿಕೆಟ್​ ಆಯ್ಕೆ ಸಮಿತಿ ಬುಧವಾರ ತಂಡ ಪ್ರಕಟಿಸಿದ್ದು ಕರ್ನಾಟಕದ ಕೆ.ಎಲ್​ ರಾಹುಲ್​ ಮತ್ತು ಮಯಾಂಕ್​ ಅಗರ್ವಾಲ್​ ಅವರಿಗೆ ಸ್ಥಾನ ಸಿಕ್ಕಿದೆ.

ಮಯಾಂಕ್​ ಅಗರ್ವಾಲ್​ ಈ ಹಿಂದಿನ ಬಾಕ್ಸಿಂಗ್​ ಡೇ ಪಿಚ್​ನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಮತ್ತೊಮ್ಮೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಗಾಯದ ಸಮಸ್ಯೆಗೆ ಸಿಲುಕಿರುವ ಅಶ್ವಿನ್​ ಅವರನ್ನೂ ತಂಡಕ್ಕೆ ಆಯ್ಕೆ ಮಾಡಲಾಗಿದೆಯಾದರೂ, ಅವರು ಮೈದಾನಕ್ಕಿಳಿಯುವರೋ ಇಲ್ಲವೋ ಎಂಬುದನ್ನು ಗುರುವಾರ ಬೆಳಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.

ತಂಡ ಹೀಗಿದೆ: ವಿರಾಟ್​ ಕೊಹ್ಲಿ (ನಾಯಕ), ರಹಾನೆ (ಉಪ ನಾಯಕ), ಕೆ. ಎಲ್​ ರಾಹುಲ್​, ಮಯಾಂಕ್​ ಅಗರ್ವಾಲ್​, ಪುಜಾರ, ವಿಹಾರಿ, ಪಂಥ್​, ರವೀಂದ್ರ ಜಡೇಜಾ, ರವಿಚಂದ್ರ ಅಶ್ವಿನ್​, ಕೆ.ಯಾದವ್​, ಮಹಮದ್​ ಶಮಿ, ಜಸ್ಪ್ರಿತ್​ ಬೂಮ್ರಾ, ಉಮೇಶ್​ ಯಾದವ್​ಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ. ಅಶ್ವಿನ್​ ಅವರ ಲಭ್ಯತೆ ಗುರುವಾರ ಬೆಳಗ್ಗೆ ನಿರ್ಧಾರವಾಗಲಿದೆ.