ರಿಷಭ್​ ಪಂತ್​ಗೆ ಸ್ಲೆಡ್ಜ್​ ಮಾಡಿದ ಬ್ರಾಡ್​ಗೆ ತಕ್ಕ ಪಾಠ ಕಲಿಸಿದ ಕೊಹ್ಲಿ

ಲಂಡನ್​: ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಯುವ ಆಟಗಾರ ರಿಷಭ್​ ಪಂತ್​ಗೆ ಇಂಗ್ಲೆಂಡ್​ ವೇಗಿ ಸ್ಟುವರ್ಟ್​ ಬ್ರಾಡ್​ ಸ್ಲೆಡ್ಜ್​ ಮಾಡಿದ್ದರು. ಕ್ರೀಡಾ ಸ್ಪೂರ್ತಿ ಮರೆತಿದ್ದ ಬ್ರಾಡ್​ಗೆ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ತಕ್ಕ ಪಾಠ ಕಲಿಸಿದ್ದಾರೆ.

ಹೌದು ಮೂರನೇ ಪಂದ್ಯದಲ್ಲಿ ರಿಷಭ್​ ಪಂತ್​ ಕೇವಲ ಒಂದು ರನ್​ ಗಳಿಸಿ ಔಟಾಗಿದ್ದರು. ಪಂತ್​ ಪೆವಿಲಿಯನ್​ಗೆ ಹಿಂದಿರುಗುತ್ತಿದ್ದಾಗ ಬ್ರಾಡ್​ ಅವರಿಗೆ ಸ್ಲೆಡ್ಜ್​ ಮಾಡಿದ್ದರು. ಆ ನಂತರ ಇಂಗ್ಲೆಂಡ್​ ಎರಡನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮಾಡುವ ಸಂದರ್ಭದಲ್ಲಿ ಭಾರತೀಯ ಬೌಲರ್​ಗಳು ಇಂಗ್ಲೆಂಡ್​ನ ಬಾಲಂಗೋಚಿಗಳಿಗೆ ಅದರಲ್ಲೂ ಮುಖ್ಯವಾಗಿ ಬ್ರಾಡ್​ಗೆ ಅಗ್ರೆಸಿವ್​​ ಆಗಿ ಬೌಲಿಂಗ್​ ಮಾಡಿದ್ದರು.

ಭಾರತ ತಂಡ ಗೆಲ್ಲಲು ಕೇವಲ 2 ವಿಕೆಟ್​ ಬೇಕಾಗಿತ್ತು. ಈ ಸಂದರ್ಭದಲ್ಲಿ ಬೌಲಿಂಗ್​ ಮಾಡುತ್ತಿದ್ದ ಮೊಹಮ್ಮದ್​ ಶಮಿ ವಿಕೆಟ್​ ಪಡೆಯುವ ಉತ್ಸಾಹದಲ್ಲಿ ಆಕ್ರಮಣಕಾರಿಯಾಗಿ ಬ್ರಾಡ್​ಗೆ ಬೌಲ್​ ಮಾಡಿದರು. ಈ ಸಂದರ್ಭದಲ್ಲಿ ವಿರಾಟ್​ ಕೊಹ್ಲಿ ಕಡೆಗೆ ತಿರುಗಿದ ಬ್ರಾಡ್​ ನಿಮ್ಮ ಬೌಲರ್​ಗಳು ಆಕ್ರಮಣಕಾರಿಯಾಗಿ ಬೌಲಿಂಗ್​ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೊಹ್ಲಿ ನೀನು ಪಂತ್​ಗೆ ಬೌಲಿಂಗ್​ ಮಾಡುವಾಗ ಇದೇ ರೀತಿಯಲ್ಲಿ ಬೌಲಿಂಗ್​ ಮಾಡಿದ್ದೆ ಎಂದು ಪ್ರತಿಕ್ರಿಯೆ ನೀಡಿದ್ದರು. ಆ ಮೂಲಕ ಬ್ರಾಡ್​ಗೆ ತಕ್ಕ ಪಾಠ ಕಲಿಸಿದ್ದರು.

ಈ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್​ ವಿರುದ್ಧ 203 ರನ್​ಗಳ ಅಂತರದಿಂದ ಗೆಲುವು ಸಾಧಿಸಿತ್ತು. (ಏಜೆನ್ಸೀಸ್​)