ವಿಶ್ವಕಪ್​​ಗಿಂತ ಇಂಡಿಯನ್​​​ ಪ್ರಿಮೀಯರ್​​ ಲೀಗ್​​​ ಉತ್ತಮ ಎಂದು ಎಬಿ ಡಿವಿಲಿಯರ್ಸ್​ ಹೇಳಿದ್ದೇಕೆ?

ಬೆಂಗಳೂರು : ಇಂಗ್ಲೆಂಡ್​ನಲ್ಲಿ ಇದೇ 30 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್​​​​​​ಗಿಂತ ಐಪಿಎಲ್​​ ಉತ್ತಮ ಟೂರ್ನಿ ಎಂದು ರಾಯಲ್​​ ಚಾಲೆಂಜರ್ಸ್​ ಸ್ಫೋಟಕ ಬ್ಯಾಟ್ಸಮನ್​​​​​​ ಹಾಗೂ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ ತಿಳಿಸಿದ್ದಾರೆ.

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಐಷಾರಾಮಿ ವಸ್ತುಗಳ ಕಂಪನಿ ಮೌಂಟ್​​ಬ್ಲ್ಯಾಂಕ್​ನ ರಾಯಭಾರಿಯಾಗಿ ವಿಶ್ವಕಪ್​ ಮತ್ತು ಐಪಿಎಲ್​​ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕಳೆದ ವಿಶ್ವಕಪ್​​ ಆವೃತ್ತಿಗಳಲ್ಲಿ ನಾನು ಉತ್ತಮ ಆಟವಾಡಿದರೂ ಐಪಿಎಲ್​​ನಲ್ಲಿ ಆಡಿರುವಷ್ಟು ಜೋಶ್​​​​​ ಇರಲಿಲ್ಲ. ಆದರೆ ಐಪಿಎಲ್​​ನಲ್ಲಿ ಉತ್ತಮ ಜೋಶ್​​​ನೊಂದಿಗೆ ಭಾರತ ಅಭಿಮಾನಿಗಳ ಪ್ರೋತ್ಸಾಹ ದೊರೆತಿದೆ ಎಂದು ಹೇಳಿದ್ದಾರೆ.
ಡಿಲಿಯರ್ಸ್​ ಡೆಲ್ಲಿ ಡೇರ್​​ಡೆವಿಲ್ಸ್​​​​​​ ತಂಡದ ಮೂಲಕ ಐಪಿಎಲ್​​ಗೆ ಪದಾರ್ಪಣೆ ಮಾಡಿದ್ದರು. ಕಳೆದ ನಾಲ್ಕು ಆವೃತ್ತಿಗಳಿಂದ ಆರ್​ಸಿಬಿ ತಂಡದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.

ನಾನು 2007, 2011 ಮತ್ತು 2015ರ ವಿಶ್ವಕಪ್​​​ನಲ್ಲಿ ರಾಷ್ಟ್ರೀಯ ತಂಡದ ಪರ ಆಡಿದ್ದೆ. ಆದರೆ, ತಂಡ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ತಂಡದ ಎಲ್ಲ ಆಟಗಾರರೊಂದಿಗೆ ಕಳೆದ ಕ್ಷಣಗಳನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ತಂಡದ ಅನುಭವವನ್ನು ನೆನಪಿಸಿಕೊಂಡರು.

ರಾಯಲ್​​ ಚಾಲೆಂಜರ್ಸ್​ ತಂಡದಲ್ಲಿ ನಾನು ಕಳೆದ ನಾಲ್ಕು ಆವೃತ್ತಿಗಳಿಂದ ಪ್ರದರ್ಶನ ನೀಡುತ್ತಿದ್ದೇನೆ. ಐಪಿಎಲ್​​ ಟಿ-20 ಪಂದ್ಯವಾಗಿದ್ದು , ವಿಶ್ವಕಪ್​​ಗಿಂತ ಭಿನ್ನವಾಗಿದೆ. ನನ್ನ ದೃಷ್ಟಿಯಲ್ಲಿ ವಿಶ್ವಕಪ್​​ಗಿಂತ ಐಪಿಎಲ್​​ ಉತ್ತಮ ಟೂರ್ನಿ ಎಂದು ಎಬಿಡಿ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)