ಅಹಮದಾಬಾದ್​ ವಿಮಾನ ದುರಂತಕ್ಕೆ ಕ್ರಿಕೆಟಿಗರ ಶೋಕ

blank
blank

ಲಂಡನ್​: ಅಹಮದಾಬಾದ್​ ವಿಮಾನ ದುರಂತದಲ್ಲಿ ಮಡಿದವರಿಗೆ ಭಾರತ, ಆಸ್ಟ್ರೆಲಿಯಾ ಮತ್ತು ದಣ ಆಫ್ರಿಕಾ ತಂಡಗಳ ಕ್ರಿಕೆಟಿಗರು ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಾರತ ಮತ್ತು ಭಾರತ ಎ ತಂಡದ ಆಟಗಾರರು ಇಂಗ್ಲೆಂಡ್​ನ ಬೆಕೆನ್​ಹ್ಯಾಂನಲ್ಲಿ ಚತುರ್ದಿನ ಪಂದ್ಯ ಆಡುವುದಕ್ಕೆ ಮುನ್ನ ಸಾಲಾಗಿ ನಿಂತು ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಸಂತಾಪ ಸೂಚಿಸಿದರು. ನಂತರ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಿದರು.

ಮತ್ತೊಂದೆಡೆ ಲಾರ್ಡ್ಸ್​ನಲ್ಲಿ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯದ 3ನೇ ದಿನದಾಟದಲ್ಲಿ ಆಸೀಸ್​&ದ. ಆಫ್ರಿಕಾ ತಂಡಗಳ ಆಟಗಾರರು ಮತ್ತು ಅಂಪೈರ್​ಗಳು ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಿದರು. ಅಲ್ಲದೆ ದಿನದಾಟ ಆರಂಭಕ್ಕೆ ಮುನ್ನ ಉಭಯ ತಂಡಗಳ ಆಟಗಾರರು ಕ್ಯಾಪ್​ ತೆಗೆದು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

Share This Article

ಯಾವೆಲ್ಲ ಕಾಯಿಲೆಗಳಿಗೆ ಸೀಬೆ ಹಣ್ಣು ರಾಮಬಾಣ? ಸೇವನೆಯಿಂದ ಏನ್ನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Guava

Guava Fruit: ಸೀಬೆ ಹಣ್ಣು ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಬಹುತೇಕರು ಕೆಂಪು ಬಣ್ಣದ ಪೇರಳೆಯನ್ನು ಬಹಳ…

ಹೃದಯಾಘಾತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಎಣ್ಣೆ ಇದು! ಹೊಸ ಸಂಶೋಧನೆಯಿಂದ ಸಾಬೀತು | Oil

Oil: ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಹೆಚ್ಚು ಬಳಸುವ ವಸ್ತುಗಳಲ್ಲಿ ಒಂದಾಗಿದೆ. ಎಣ್ಣೆ ಇಲ್ಲದೆ ಬೇಯಿಸಿದ ಆಹಾರಗಳು…