ಹೊರ್ತಿ: ಭಾರತ ದೇಶದ ಭವ್ಯ ಪರಂಪರೆ ಹಾಗೂ ಸಂಸತಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಚಿಟಗುಪ್ಪದ ಶ್ರೀಗುರುಲಿಂಗ ಶಿವಾಚಾರ್ಯರು ಹೇಳಿದರು.
ಜೇವೂರ ಗ್ರಾಮದಲ್ಲಿ ಶನಿವಾರ ನಡೆದ ಹಠಯೋಗಿ ರೇವಣಸಿದ್ಧೇಶ್ವರರ 39ನೇ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ರೇವಣಸಿದ್ಧೇಶ್ವರರು ಸರಳ ಜೀವನ ನಡೆಸಿದ್ದಾರೆ. ಅಪಾರ ಶಕ್ತಿವುಳ್ಳವರಾಗಿ ಭಕ್ತರ ಉದ್ಧಾರ ಮಾಡಿದ್ದಾರೆ ಎಂದರು.
ಹಠಯೋಗಿ ರೇವಣಸಿದ್ಧೇಶ್ವರರ ಬೆಳ್ಳಿ ಮೂರ್ತಿಯನ್ನು ಆನೆ ಅಂಬಾರಿ ಮೇಲೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮಹಾಂತೇಶ ಶ್ರೀಗಳು ಆರ್ಶೀವಚನ ನೀಡಿದರು.
ಶ್ರೀಗುರುಪಾದೇಶ್ವರ ಶಿವಾಚಾರ್ಯ, ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ, ಶ್ರೀ ಆತ್ಮರಾಮ ಸ್ವಾಮೀಜಿ, ಶ್ರೀ ಆನಂದ ಶಾಸ್ತ್ರಿ, ಶ್ರೀಮಂತ ಕಾಪಸೆ, ಮಾದೇವ ನಡುವಿನಮನಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.

TAGGED:ಹೊರ್ತಿ