ಅಮೆರಿಕದ ಅಲ್ಬನಿಯ ಕಾಲೇಜಿನಲ್ಲಿ ಕಂಪ್ಯೂಟರ್​ಗಳನ್ನು ಹಾನಿ ಮಾಡಲು ಯತ್ನಿಸಿದ ಭಾರತೀಯ ಮೂಲದ ವಿದ್ಯಾರ್ಥಿಗೆ ಶಿಕ್ಷೆ

ವಾಷಿಂಗ್ಟನ್: ತಾವು ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಕಂಪ್ಯೂಟರ್​ ಅನ್ನು ದುರುದ್ದೇಶಪೂರ್ವಕವಾಗಿ ಹಾನಿಗೊಳಿಸಿದ ಆರೋಪದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನಿಗೆ ಅಮೆರಿಕದಲ್ಲಿ ಜೈಲು ಶಿಕ್ಷೆಯಾಗಿದೆ.

ನ್ಯೂಯಾರ್ಕ್​ನ ಅಲ್ಬನಿಯಲ್ಲಿರುವ ಸೇಂಟ್​ ರೋಸ್​ ಕಾಲೇಜಿನ ವಿದ್ಯಾರ್ಥಿ ವಿಶ್ವನಾಥ್​ ಅಕುತೋಟಾ (27) ಶಿಕ್ಷೆಗೆ ಗುರಿಯಾಗಿರುವವ. ಈತನಿಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಿರುವ ಅಮೆರಿಕದ ಸ್ಥಳೀಯ ನ್ಯಾಯಾಲಯ, ಜೈಲಿನಿಂದ ಬಿಡುಗಡೆಯಾದ ಬಳಿಕ ಒಂದು ವರ್ಷ ಈತನ ಚಲನವಲನಗಳ ಮೇಲೆ ನಿಗಾವಹಿಸುವಿಕೆಗೆ ಆದೇಶಿಸಿದೆ.

ತನ್ನ ಕಾಲೇಜಿನ 66 ಕಂಪ್ಯೂಟರ್​ಗಳು ಹಾಗೂ ಹಲವು ಮಾನಿಟರ್​ಗಳಿಗೆ ಯುಎಸ್​ಬಿ ಕಿಲ್ಲರ್​ ಎಂಬ ಸಾಧನವನ್ನು ವಿಶ್ವನಾಥ್​ ಅಳವಡಿಸಿದ್ದ. ಈ ಸಾಧನವು ಕಂಪ್ಯೂಟರ್​ನ ಆನ್​ಬೋರ್ಡ್​ ಕೆಪಾಸಿಟರ್​ಗಳು ತುಂಬಾ ವೇಗವಾಗಿ ಸತತವಾಗಿ ಚಾರ್ಜ್​ ಆಗುವಂತೆ ಹಾಗೂ ಡಿಸ್ಜಾರ್ಜ್​ ಆಗುವಂತೆ ಮಾಡುವ ಮೂಲಕ ವಿದ್ಯುತ್​ನ ಅತಿಹೆಚ್ಚು ಪ್ರವಹಿಸುವಿಕೆ ಆಗುವಂತೆ ಮಾಡಿ, ಕಂಪ್ಯೂಟರ್​ಗಳನ್ನು ಹಾಳುಗೆಡುವುದು ಈತನ ಉದ್ದೇಶವಾಗಿತ್ತು. ಫೆ.14ರಂದು ಈತ ಈ ಕೃತ್ಯ ಎಸಗಿದ್ದು, ಕಾಲೇಜು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *