ಕಾರವಾರ: Indian Navy ಸೀಬರ್ಡ್ ನೌಕಾ ಯೋಜನೆಯ ನೌಕರರು ಸ್ಥಳೀಯರಿಗೆ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ನಾರಾಯಣ ಗೌಡ ಬಣದ ಜಿಲ್ಲಾ ಅಧ್ಯಕ್ಷ ಭಾಸ್ಕರ ಪಟಗಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕಾರವಾರ ಅಂಕೋಲಾದ ಜನ ದೇಶ ರಕ್ಷಣೆಗಾಗಿ ತಮ್ಮ ಜೀವನದ ಭಾಗವಾಗಿರುವ ಭೂಮಿ ಕೊಟ್ಟಿದ್ದಾರೆ. ದೇಶದ ಜನ ಅವರಿಗೆ ಅಭಿನಂದಿಸಬೇಕು. ಆದರೆ, ಮೀನುಗಾರರಿಗೆ, ಸ್ಥಳೀಯರಿಗೆ ನೌಕಾನೆಲೆಯ ಅನ್ಯ ಭಾಷಿಕ ಅಽಕಾರಿಗಳು ಕಿರುಕುಳ ನೀಡುತ್ತಿರುವುದು ಖಂಡನೀಯ. ನೌಕಾಸೇನೆಯ ಅನ್ಯಭಾಷಿಕ ಅಽಕಾರಿಗಳು ಕಾರವಾರದಲ್ಲಿ ಗೂಂಡಾಗಿರಿ ಮಾಡುತ್ತಿದ್ದಾರೆ. ಅವರಿಗೆ ಸ್ಥಳೀಯರ ಬಗ್ಗೆ ಗೌರವ ಇಲ್ಲ.
Indian Navy ಘಟನೆ:
ಇತ್ತೀಚೆಗೆ ಅಯ್ಯಪ್ಪ ಮಾಲಾಧಾರಿಗಳ ಮೇಲಿನ ಹಲ್ಲೆಯ ಘಟನೆಗೆ ರಾಜ್ಯ ಸರ್ಕಾರ ತನಿಖಾ ತಂಡ ರಚನೆ ಮಾಡಿ, ತನಿಖೆ ಮಾಡಿ ಕ್ರಮ ವಹಿಸಬೇಕು. ಸ್ಥಳೀಯ ಶಾಸಕರು ಈ ಕುರಿತು ಎಚ್ಚೆತ್ತು ಕ್ರಮ ವಹಿಸಬೇಕು. ಸಂಸದರು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಬೇಕು ಎಂದರು. ಕದಂಬ ನೌಕಾನೆಲೆಯ ವಿವಿಧ ನಾಮಫಲಕಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಇವೆ. ತ್ರಿಭಾಷಾ ಸೂತ್ರದಂತೆ ನೌಕಾನೆಲೆ( Indian Navy )ನಾಮಫಲಕಗಳನ್ನು ಕನ್ನಡದಲ್ಲಿಯೂ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಕರವೇ ಪದಾಧಿಕಾರಿಗಳಾದ ನರೇಂದ್ರ ತಳೇಕರ್, ಮಂಜುನಾಥ ನಾಯ್ಕ, ತಿಮ್ಮಪ್ಪ ನಾಯ್ಕ, ಗಣಪತಿ ನಾಯ್ಕ, ರಾಜಾ ನಾಯ್ಕ, ಶಶಾಂಕ ಕಾರವಾರ, ಜಗನ್ನಾಥ ಆಚಾರಿ ಪ್ರಶಾಂತ ತಾಂಡೇಲ, ನಾಗು ಹಳ್ಳೇರ, ಶ್ರೀಕಾಂತ ಪಟಗಾರ, ಕುಮಾರ ದೀವಟಗಿ ಸುದ್ದಿಗೋಷ್ಠಿಯಲ್ಲಿದ್ದರು.
ಭೇಟಿಯ ಸಮಯ ಬದಲಿಸಿ
ಜಿಲ್ಲಾಧಿಕಾರಿ ಅವರ ಸಾರ್ವಜನಿಕರ ಭೇಟಿಯ ಸಮಯ ಮಧ್ಯಾಹ್ನ ೩.೩೦ ರಿಂದ ೫ ಗಂಟೆಯವರೆಗೆ ಇದೆ. ಆದರೆ, ದೂರದ ಊರುಗಳ ಜನ ಇಲ್ಲಿಗೆ ಬಂದು, ಜಿಲ್ಲಾಽಕಾರಿಯವರನ್ನು ಭೇಟಿಯಾಗಿ ಸಾಯಂಕಾಲ ವಾಪಸಾಗಲು ಸಾಧ್ಯವಾಗದು. ಇದರಿಂದ ವಾರದಲ್ಲಿ ಒಂದು ದಿನ ಬೆಳಗ್ಗೆ ಸಾರ್ವಜನಿಕರ ಭೇಟಿಗೆ ಜಿಲ್ಲಾಽಕಾರಿ ಅವರು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: https://www.vijayavani.net/health-tips-your-smartphone-is-your-fitness-coach-is-it-surprising-read-this