ರಾಜಸ್ಥಾನ ಗಡಿ ಬಳಿ ಭಾರತದ ವಾಯುಗಡಿ ಉಲ್ಲಂಘಿಸಿದ ಪಾಕ್​ ಡ್ರೋನ್​ ಹೊಡೆದುರುಳಿಸಿದ ವಾಯುಪಡೆ

ಜೈಪುರ: ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿ ಬಳಿ ಭಾರತೀಯ ವಾಯು ಗಡಿಯನ್ನು ಉಲ್ಲಂಘಿಸಿದ ಪಾಕಿಸ್ತಾನ ಡ್ರೋನ್​ ಅನ್ನು ಭಾರತೀಯ ವಾಯು ಪಡೆಯ ಸುಖೋಯ್​ ವಿಮಾನ ಹೊಡೆದುರುಳಿಸಿದೆ.

ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ರಾಜಸ್ಥಾನದ ಬಿಕಾನೆರ್​ ನಲ್​ ಸೆಕ್ಟರ್​ನಲ್ಲಿ ಪಾಕಿಸ್ತಾನದ ಡ್ರೋನ್​ ಭಾರತೀಯ ವಾಯುಗಡಿಯನ್ನು ಉಲ್ಲಂಘಿಸಿರುವುದನ್ನು ಭಾರತೀಯ ವಾಯು ರಕ್ಷಣಾ ರಡಾರ್​ಗಳು ಪತ್ತೆ ಹಚ್ಚಿದ್ದವು. ತಕ್ಷಣ ಡ್ರೋನ್​ ಮೇಲೆ ದಾಳಿ ನಡೆಸಿದ ಸುಖೋಯ್​ 30 ಎಂಕೆಐ ವಿಮಾನ ಅದನ್ನು ಹೊಡೆದುರುಳಿಸಿದೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)