ಯುವಿ ಕೊಂಡ ಈ ನೂತನ ಬೈಕ್ ಬೆಲೆ ಎಷ್ಟು ಗೊತ್ತಾ?

ನವದೆಹಲಿ: ಟೀಂ ಇಂಡಿಯಾದ ಎಡಗೈ ದಾಂಡಿಗ ಹಾಗು ಯು ವಿ ಕ್ಯಾನ್​(YouWeCan) ಎನ್​ಜಿಒ ಸಂಸ್ಥಾಪಕ ಯುವರಾಜ್​ ಸಿಂಗ್​ ಅವರು ತಮ್ಮ ಮನೆಗೆ ಹೊಸ ಅತಿಥಿಯೊಬ್ಬರನ್ನು ಕರೆತಂದಿದ್ದಾರೆ.

ಯುವಿ ಕರೆತಂದಿರುವ ಆ ಹೊಸ ಅತಿಥಿ ಬೇರೆ ಯಾರು ಅಲ್ಲ, ಅದುವೇ ಹೊಸ ಬಿಎಂಡಬ್ಲ್ಯೂ ಜಿ 310 ಆರ್​ (BMW G 310 R) ಮೋಟರ್​ ಬೈಕ್​. 2.99 ಲಕ್ಷ ರೂ. ಬೆಲೆ ಬಾಳುವ ದುಬಾರಿ ಬೈಕ್​ನ್ನು ಚಂಡೀಗಢದಲ್ಲಿರುವ ತಮ್ಮ ಮನೆಗೆ ಕೊಂಡು ತಂದಿದ್ದಾರೆ.

ಭಾರತದ ಪಂಜಾಬ್​ ಪ್ರಾಂತ್ಯದಲ್ಲಿ ಸೇವೆಸಲ್ಲಿಸುವ ಚಂಡೀಗಢ ಹಾಗೂ ಲೂಧಿಯಾನದ ಬಿಎಂಡಬ್ಲ್ಯೂ ಕೃಷ್ಣ ಆಟೋಮೊಬೈಲ್ಸ್ ಕಂಪನಿಯಿಂದ ಈ ನೂತನ ಬೈಕ್​ ಅನ್ನು ಯುವಿ ಖರೀದಿ ಮಾಡಿದ್ದಾರೆ.​ ಈ ಮೂಲಕ ಇಂತಹ ಮೋಟರ್​ ಬೈಕ್​ ಕೊಂಡ ಮೊದಲ ಭಾರತೀಯ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. (ಏಜೆನ್ಸೀಸ್​)