ಭಾರತ ಕ್ರಿಕೆಟ್​ ತಂಡಕ್ಕೆ ಶುಭ ಹಾರೈಸಿದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​, ಶೋಯೆಬ್​ ಅಕ್ತರ್​

ನವದೆಹಲಿ: ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್​ ಸರಣಿ ಗೆದ್ದು ಏಷಿಯಾದ ಮೊದಲ ತಂಡವೆಂಬ ಇತಿಹಾಸ ನಿರ್ಮಿಸಿದ ಭಾರತೀಯ ಕ್ರಿಕೆಟ್​ ತಂಡ ಹಾಗೂ ನಾಯಕ ವಿರಾಟ್​ ಕೊಹ್ಲಿಗೆ ಪಾಕ್ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್​ ಖಾನ್​ ಶುಭ ಕೋರಿದ್ದಾರೆ.

ಟ್ವೀಟ್ ಮಾಡಿರುವ ಅವರು ಭಾರತ ಕ್ರಿಕೆಟ್​ ತಂಡದ ಸಾಧನೆಯನ್ನು ಹೊಗಳಿದ್ದಾರೆ. ವಿರಾಟ್​ ಕೊಹ್ಲಿ ಹಾಗೂ ತಂಡಕ್ಕೆ ಶುಭಾಶಯಗಳು. ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದ ಏಷ್ಯಾದ ಮೊದಲ ತಂಡವಾಗಿ ಭಾರತ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ಬೌಲರ್​ ಶೋಯೆಬ್​ ಅಕ್ತರ್​ ಕೂಡ ಭಾರತ ತಂಡವನ್ನು ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಸೋಲಿಸಿದ್ದನ್ನು ಪ್ರಶಂಸಿ, ಶುಭಾಶಯಗಳು ಟೀಂ ಇಂಡಿಯಾ ಎಂದು ಟ್ವೀಟ್​ ಮಾಡಿದ್ದಾರೆ.

ಶ್ರೀಲಂಕಾದ ಮಾಜಿ ಬ್ಯಾಟ್ಸ್​ಮನ್​ ರುಸ್ಸೆಲ್​ ಅರ್ನಾಲ್ಡ್​ ಅವರು ಟ್ವೀಟ್​ ಮಾಡಿದ್ದು, ಭಾರತ ತಂಡಕ್ಕೆ ಉತ್ತಮ ಕ್ರಿಕೆಟ್​ ತಂಡವೆಂಬ ಟ್ಯಾಗ್​ಗೆ ಅರ್ಹವಾಗಿದೆ. ಇದೊಂದು ಅತ್ಯುತ್ತಮ ಪ್ರದರ್ಶನವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫೀಲ್ಡ್​ಲ್ಲಿ ಹಾಗೂ ಅದರಾಚೆಗೂ ಉತ್ತಮ ನಡತೆ ತೋರಿದ್ದಾರೆ. ಅಗತ್ಯವಿದ್ದಲ್ಲಿ ಆಕ್ರಮಣಕಾರಿ ಮನೋಭಾವ ತೋರಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.