ಮುಂಬೈ: ಕ್ರಿಕೆಟ್ನ ದಂತಕತೆ ಎಂದೇ ಪ್ರಸಿದ್ಧರಾದ ಸಚಿನ್ ತೆಂಡೂಲ್ಕರ್ 2013ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆಗ ಸಚಿನ್ ತೆಂಡೂಲ್ಕರ್ ಅವರನ್ನು ಬೀಳ್ಕೊಡುವುದಾಗ ವಿರಾಟ್ ಕೊಹ್ಲಿ ಒಂದು ಉಡುಗೊರೆ ಕೊಟ್ಟಿದ್ದಾರಂತೆ.
ಈ ಬಗ್ಗೆ ಅವರೇ ಇತ್ತೀಚೆಗೆ ಹೇಳಿಕೊಂಡಿದ್ದಾರೆ. ನನಗೆ ನನ್ನ ತಂದೆ ಕೊಟ್ಟಿದ್ದ ಅಮೂಲ್ಯ ಉಡುಗೊರೆಯನ್ನು ನಾನು ಸಚಿನ್ ತೆಂಡೂಲ್ಕರ್ ಅವರಿಗೆ ನೀಡಿದ್ದೆ ಎಂದು ಹೇಳಿದ್ದಾರೆ. ಸಚಿನ್ ಅವರು ಕ್ರಿಕೆಟ್ಗೆ ವಿದಾಯ ಹೇಳಿದ ಕ್ಷಣ ತುಂಬ ಭಾವುಕವಾಗಿತ್ತು ಎಂದು ಆ ದಿನಗಳನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನೆನಪಿಸಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಆಟಗಾರ ಎನಿಸಿಕೊಂಡವರು. ಯುವ ಪೀಳಿಗೆಯ ಎಷ್ಟೋ ಆಟಗಾರರಿಗೆ ಸ್ಫೂರ್ತಿಯಾಗಿದ್ದವರು. ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟು ಐದು ವರ್ಷವಾಗಿತ್ತು.
ಈಗ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ಗೆ ವಿದಾಯ ಹೇಳಿದ ಸಂದರ್ಭವನ್ನು ನೆನಪಿಸಿಕೊಂಡ ಟೀಂ ಇಂಡಿಯಾ ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ನನ್ನ ಪಾಲಿಗೆ ಸ್ಫೂರ್ತಿಯಾಗಿದ್ದವರು.
ನನಗೆ ಅವರೇ ಮಾದರಿಯಾಗಿದ್ದರು. ಅವರ ನಿವೃತ್ತಿಯ ಕ್ಷಣ ನನಗೆ ತುಂಬ ದುಃಖ ತಂದಿತ್ತು. ಸುಮಾರು 25 ವರ್ಷಗಳ ಕಾಲ ಅವರು ಭಾರತಕ್ಕಾಗಿ ಕ್ರಿಕೆಟ್ ಆಡಿದವರು. ಇನ್ನು ಮುಂದೆ ತಂಡದಲ್ಲಿ ಅವರಿರುವುದಿಲ್ಲ ಎಂಬುದೇ ನೋವು ತಂದಿತ್ತು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಆ ಸಮಯದಲ್ಲಿ ನಾನು ಅವರಿಗೆ ಉಡುಗೊರೆಯೊಂದನ್ನು ಕೊಟ್ಟೆ. ನನ್ನ ತಂದೆ ನನಗೆ ಕೊಟ್ಟಿದ್ದ ಪವಿತ್ರವಾದ ದಾರವನ್ನು ಸಚಿನ್ ಅವರಿಗೆ ನೀಡಿದೆ. ಸಚಿನ್ ಅವರನ್ನು ಬೀಳ್ಕೊಡುವಾಗ ಅದನ್ನು ನೀಡಿ, ಈ ಪವಿತ್ರವಾದ ದಾರವನ್ನು ಯಾವಾಗಲೂ ನನ್ನ ಬಳಿ ಇಟ್ಟುಕೊಳ್ಳುತ್ತಿದ್ದೆ, ಇದು ಅತ್ಯಮೂಲ್ಯವಾದದ್ದು ಎಂದು ಹೇಳಿದ್ದೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.