ಡಿಸ್ಕಸ್​ ಥ್ರೋ: ಅಂತಿಮ ಸುತ್ತಿಗೆ ಭಾರತದ ಕಮಲ್​ಪ್ರೀತ್ ಕೌರ್!

ಟೋಕಿಯೋ : ಜಪಾನಿನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ನಿನ್ನೆಯಿಂದ ಅಥ್ಲೆಟಿಕ್​ ಸ್ಪರ್ಧೆಗಳು ಆರಂಭವಾಗಿವೆ. ಅಥ್ಲೆಟಿಕ್​ ಸ್ಪರ್ಧೆಗಳಲ್ಲಿ ಭಾರತದ ಹಲವು ಪ್ರತಿಭಾವಂತ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಇಂದು ನಡೆದ ಮಹಿಳೆಯರ ಡಿಸ್ಕಸ್​ ಥ್ರೋನ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಕಮಲ್​ಪ್ರೀತ್ ಕೌರ್​ ಎರಡನೇ ಸ್ಥಾನ ಗಳಿಸಿದ್ದಾರೆ. ತನ್ಮೂಲಕ ಅವರು ಡಿಸ್ಕಸ್​ ಥ್ರೋ ಈವೆಂಟ್​ನ ಅಂತಿಮ (ಫೈನಲ್ಸ್​) ಸುತ್ತನ್ನು ಪ್ರವೇಶಿಸಿದ್ದಾರೆ. ಅಂತಿಮ ಸ್ಪರ್ಧೆ ಆಗಸ್ಟ್​ 2 ನೇ ತಾರೀಕಿನಂದು ನಡೆಯಲಿದೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಪದಕ ಗ್ಯಾರಂಟಿ! ಬಾಕ್ಸಿಂಗ್​ನಲ್ಲಿ … Continue reading ಡಿಸ್ಕಸ್​ ಥ್ರೋ: ಅಂತಿಮ ಸುತ್ತಿಗೆ ಭಾರತದ ಕಮಲ್​ಪ್ರೀತ್ ಕೌರ್!