ಕೇಂದ್ರೀಯ ವಿದ್ಯಾಲಯದ 50 ವಿದ್ಯಾರ್ಥಿಗಳಿಗೆ ಪ್ರವಾಸ ಆಯೋಜಿಸಿದ ಭಾರತೀಯ ಸೇನೆ

ನವದೆಹಲಿ: ಯುವಜನತೆಯಲ್ಲಿ ದೇಶದ ಬಗ್ಗೆ ಕಾಳಜಿ, ದೇಶಪ್ರೇಮ ಮೂಡಿಸಲು, ಸೈನಿಕರ ಜೀವನ ಹೇಗಿರುತ್ತದೆ ಎಂದು ತಿಳಿಸಲು ಭಾರತೀಯ ಸೇನೆಯು ಕೇಂದ್ರೀಯ ವಿದ್ಯಾಲಯದಿಂದ 50 ವಿದ್ಯಾರ್ಥಿಗಳನ್ನು ಉತ್ತರಾಖಂಡ್​ನ ಗಡಿ ಭಾಗಗಳಿಗೆ ಪ್ರವಾಸಕ್ಕೆ ಕರೆದೊಯ್ದಿದೆ.

ಸೈನಿಕರ ಜೀವನದ ಬಗ್ಗೆ ಅವರಿಗೆ ತಿಳಿಸಲು ಮತ್ತು ಸೈನಿಕರ ಜೀವನ ಹೇಗಿರಲಿದೆ ಎಂದು ಅನುಭವವನ್ನು ಪಡೆಯುವಂತೆ ಮಾಡುವ ಉದ್ದೇಶದಿಂದ ಪಂಚ್​ಶುಲ್​ ಬ್ರಿಗೇಡ್ ಪ್ರವಾಸದಡಿ ಇವರನ್ನು ಕರೆದೊಯ್ಯಲಾಗಿದ್ದು, ಪ್ರವಾಸ ಮೇ 19ರಂದು ಮುಕ್ತಾಯಗೊಳ್ಳಲಿದೆ.

ಈ ಪ್ರವಾಸವು ದೇಶದ ಯುವಜನತೆಯ ಬಳಿ ಸಂಪರ್ಕ ಹೊಂದಲು ಮತ್ತು ಯುವ ಜನರನ್ನ ಸೇನೆಗೆ ಸೇರುವಂತೆ ಪ್ರೇರೇಪಿಸಲು ಸಹಕಾರಿಯಾಗುವ ಸಾಧ್ಯತೆ ಇದೆ. ಇಂತಹ ಯೋಜನೆಗಳು ದೇಶದಲ್ಲಿ ಸೈನಿಕರು ಮತ್ತು ಸಾಮಾನ್ಯ ಜನರ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎನ್ನಲಾಗಿದೆ.

ವಿಶ್ವದ ಎರಡನೇ ಅತಿ ದೊಡ್ಡ ಸೇನೆಯೆಂದರೆ ಅದು ಭಾರತೀಯ ಸೇನೆ. ರಾಷ್ಟ್ರದ ಶಾಂತಿ, ಭದ್ರತೆ ಮತ್ತು ಸಾರ್ವಭೌಮತ್ವವನ್ನು ಎತ್ತಿ ಹಿಡಿಯಲು ಇದು ಕಾರಣವಾಗಿದೆ. ಸಾರ್ವಜನಿಕರಿಗೆ ನೆರವು ನೀಡಲು ಅಗತ್ಯವಾದ ವೇಳೆ ಅಗತ್ಯವಾದ ಸ್ಥಳಗಳಲ್ಲಿ ಇದನ್ನು ಬಳಸಲಾಗುತ್ತದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *