Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ಸರ್ಜಿಕಲ್​ಗೆ ನೆರವಾದ ಚಿರತೆ ಮೂತ್ರ!

Thursday, 13.09.2018, 2:06 AM       No Comments

ಪುಣೆ: ಪಾಕಿಸ್ತಾನದ ಸೊಕ್ಕಡಗಿಸಲು ಆ ರಾಷ್ಟ್ರದ ಗಡಿಯೊಳಗೇ ನುಗ್ಗುವ ಮೂಲಕ 2016ರಲ್ಲಿ ಭಾರತೀಯ ಸೇನೆ ನಡೆಸಿದ್ದ ರಹಸ್ಯ ‘ಸರ್ಜಿಕಲ್ ದಾಳಿ’ಯ ಮತ್ತಷ್ಟು ಕುತೂಹಲಕರ ಮಾಹಿತಿ ಬಹಿರಂಗವಾಗಿದೆ. 29 ಉಗ್ರರ ಬೇಟೆಯಾಡಿ ಮೂರು ಭಯೋತ್ಪಾದಕರ ಶಿಬಿರಗಳನ್ನು ಧ್ವಂಸಗೊಳಿಸಿದ ಕಾರ್ಯಾಚರಣೆ ಯಶಸ್ಸಿಗೆ ನೆರವಾಗಿದ್ದು ಚಿರತೆ ಮೂತ್ರ ಎಂಬುದನ್ನು ನಗ್ರೋತಾ ಕೋರ್​ನ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಜೇಂದ್ರ ನಿಂಬೊರ್ಕರ್ ಬಹಿರಂಗಪಡಿಸಿದ್ದಾರೆ. ಬುಧವಾರ ಥೊರ್ಲೆ ಬಾಜಿರಾವ್ ಪೇಶ್ವೆ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸರ್ಜಿಕಲ್ ಸ್ಟ್ರೈಕ್​ನ ಆಸಕ್ತಿದಾಯಕ ಮಾಹಿತಿ ಹಂಚಿಕೊಂಡರು.

ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನಮಗೆ ವಾರದ ಮೊದಲಷ್ಟೇ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದ್ದರು. ಯಾವತ್ತು, ಎಲ್ಲಿ ಕಾರ್ಯಾಚರಣೆ ನಡೆಸಬೇಕೆಂಬುದು ನನ್ನನ್ನು ಹೊರತುಪಡಿಸಿ ಬೇರೆ ಯಾರಿಗೂ ತಿಳಿದಿರಲಿಲ್ಲ.

| ರಾಜೇಂದ್ರ ನಿಂಬೊರ್ಕರ್

ಮೊದಲೇ ನಡೆದಿತ್ತು ಅಧ್ಯಯನ

‘ಸರ್ಜಿಕಲ್ ದಾಳಿಗೆ ಮೊದಲೇ ನೌಶೆರಾ ಸೆಕ್ಟರ್​ನ ಜೀವವೈವಿಧ್ಯತೆ ಬಗ್ಗೆ ಅಧ್ಯಯನ ಮಾಡಿದ್ದೆವು. ಆ ಪ್ರದೇಶದಲ್ಲಿ ಚಿರತೆಗಳು ಆಗಾಗ್ಗೆ ದಾಳಿ ನಡೆಸಿ ನಾಯಿಗಳನ್ನು ಕೊಂದು ಹೊತ್ತೊಯ್ಯುತ್ತಿದ್ದವು. ಇದರಿಂದಾಗಿ ಸ್ಥಳೀಯರಿಗೂ ಚಿರತೆಯ ಆತಂಕ ಇತ್ತು. ಚಿರತೆಗೆ ಹೆದರಿಕೊಂಡೇ ನಾಯಿಗಳು ರಾತ್ರಿ ವೇಳೆ ಜನವಸತಿ ಪ್ರದೇಶಗಳನ್ನು ಬಿಟ್ಟು ಹೋಗುತ್ತಿರಲಿಲ್ಲ. ಏಕಾಏಕಿ ಸರ್ಜಿಕಲ್ ಸ್ಟ್ರೈಕ್ ನಡೆಸಿದರೆ ನಾಯಿಗಳು ಬೊಗಳುವ ಸದ್ದಿನಿಂದಾಗಿ ಕಾರ್ಯಾಚರಣೆ ವಿಫಲವಾಗುತ್ತದೆ ಎಂಬುದನ್ನು ಮನಗಂಡಿದ್ದೆವು. ಇದಕ್ಕಾಗಿ ಚಿರತೆ ಮೂತ್ರಕ್ಕೆ ಮೊರೆಹೋದವು. ನೌಶೆರಾ ವ್ಯಾಪ್ತಿಯ ಗಡಿಭಾಗದ ವ್ಯಾಪ್ತಿಯಲ್ಲಿ ಚಿರತೆ ಮೂತ್ರ ಸಿಂಪಡಿಸಿ ಅಲ್ಲಲ್ಲಿ ಮಲವನ್ನು ಎಸೆದಿದ್ದವು. ಹೀಗಾಗಿಯೇ ನಸುಕಿನ ಜಾವ ನಾವು ಪಾಕ್ ಗಡಿಗೆ ನುಗ್ಗಿದಾಗ ಚಿರತೆಯ ಆತಂಕದಲ್ಲಿದ್ದ ನಾಯಿಗಳು ನಮ್ಮ ಬಗ್ಗೆ ಸುಳಿವು ನೀಡಿರಲಿಲ್ಲ. ಪರಿಣಾಮ ನಮ್ಮ ಕಾರ್ಯಾಚರಣೆ ಯಶಸ್ವಿಯಾಯಿತು’ ಎಂದು ನಿಂಬೊರ್ಕರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

Back To Top