ಮತ್ತೊಮ್ಮೆ ದುಸ್ಸಾಹಸಕ್ಕೆ ಇಳಿದರೆ ಹುಷಾರ್!

ನವದೆಹಲಿ: ಪುಲ್ವಾಮಾ ಆತ್ಮಾಹುತಿ ದಾಳಿ ಹಾಗೂ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕಿಸ್ತಾನದ ಉದ್ಧಟತನಕ್ಕೆ ಅತ್ಯುಗ್ರ ಎಚ್ಚರಿಕೆ ನೀಡಿರುವ ಭಾರತೀಯ ಸೇನೆ, ಭಾರತದ ಗಡಿಯೊಳಗೆ ನುಗ್ಗುವ ಸಾಹಸ ಮಾಡಿದರೆ ಯುದ್ಧ ಅನಿವಾರ್ಯ ಎಂದು ಗುಡುಗಿದೆ.

ಸರ್ಜಿಕಲ್ ಸ್ಟ್ರೈಕ್ ಬಳಿಕ ಭಾರತದ ಗಡಿಯೊಳಗೆ ಪಾಕಿಸ್ತಾನದ ಯುದ್ಧ ವಿಮಾನಗಳು ಬಂದಿರುವುದು ಹಾಗೂ ಭಾರತೀಯ ಪೈಲಟ್ ಬಂಧನಕ್ಕೆ ಸಂಬಂಧಿಸಿ ವಾಯು, ಭೂ ಹಾಗೂ ನೌಕಾ ಸೇನೆಯ ಹಿರಿಯ ಅಧಿಕಾರಿಗಳ ಜತೆಗೆ ರಕ್ಷಣಾ ಇಲಾಖೆ ಕಾರ್ಯದರ್ಶಿ ಗುರುವಾರ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಲಾಗಿದೆ.

ಭಾರತವು ಯಾರೊಂದಿಗೂ ಕಾಲು ಕೆದರಿಕೊಂಡು ಜಗಳಕ್ಕೆ ಹೋಗುವುದಿಲ್ಲ. ಪಾಕಿಸ್ತಾನದ ಉಗ್ರರ ಅಡಗುದಾಣ, ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ. ಅಗತ್ಯಬಿದ್ದರೆ ಭವಿಷ್ಯದಲ್ಲೂ ದಾಳಿ ನಡೆಸುತ್ತೇವೆ. ಆದರೆ ಪಾಕಿಸ್ತಾನ ವಾಯುಸೇನೆಯು ಭಾರತದ ಸೇನಾ ಕೇಂದ್ರದ ಮೇಲೆ ದಾಳಿ ನಡೆಸಿ ಉದ್ಧಟತನ ಪ್ರದರ್ಶಿಸಿದೆ. ಅವರ ಉದ್ದೇಶ ವಿಲವಾಗಿದೆ. ಆದಾಗ್ಯೂ ಭವಿಷ್ಯದಲ್ಲಿ ಇಂತಹ ಉದ್ಧಟತನ ಪ್ರದರ್ಶಿಸಿದರೆ ಭಾರತೀಯ ಸೇನೆ ಯಾವುದೇ ಕ್ರಮಕ್ಕೂ ಹಿಂಜರಿಯುವುದಿಲ್ಲ. ಭೂ, ವಾಯು ಹಾಗೂ ನೌಕಾ ಸೇನೆಯು ಸರ್ವ ಸನ್ನದ್ಧವಾಗಿದೆ, ಎಚ್ಚರಿಕೆಯಿರಲಿ ಎಂದು ಕಠಿಣ ಶಬ್ದಗಳಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಯುದ್ಧೋನ್ಮಾದ ಹಾಗೂ ಶಾಂತಿ ಸ್ಥಾಪನೆ ಕುರಿತು ಸ್ಪಷ್ಟನೆ ನೀಡಿರುವ ಸೇನೆಯ ಹಿರಿಯ ಅಧಿಕಾರಿಗಳು, ಭಾರತವು ತಾನಾಗಿ ಎಲ್ಲಿಯೂ ದಾಳಿ ನಡೆಸಿಲ್ಲ. ಭಾರತದ ಸೇನಾ ಕೇಂದ್ರದ ಮೇಲೆ ದಾಳಿ ನಡೆಸಿ ಪಾಕಿಸ್ತಾನವೇ ಜಿನೇವಾ ಒಪ್ಪಂದವನ್ನು ಮುರಿದಿದೆ. ಹೀಗಾಗಿ ಪರಿಸ್ಥಿತಿ ತಿಳಿಗೊಳಿಸುವುದು ಭಾರತದ ಕೈನಲ್ಲಿಲ್ಲ. ಪಾಕಿಸ್ತಾನ ಸೇನೆ ಹಾಗೂ ಸರ್ಕಾರ ಆ ಕೆಲಸ ಮಾಡಬೇಕಿದೆ ಎಂದು ಸೇನಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ದೇಶದ ಭದ್ರತಾ ಪಡೆಗಳ ನೈತಿಕ ಸ್ಥೈರ್ಯ ಮುಕ್ಕಾಗಲು ಬಿಡುವುದಿಲ್ಲ. ಭಾರತ ಹೋರಾಡಿಯೇ ಬದುಕುತ್ತದೆ, ಕಾಯಕ ಮಾಡಿಯೇ ಗೆಲ್ಲುತ್ತದೆ. ದೇಶದ ಪ್ರಗತಿಯ ಪಥಕ್ಕೆ ಯಾರೂ ಅಡ್ಡಗಾಲು ಹಾಕಲು ಬಿಡುವುದಿಲ್ಲ.
| ನರೇಂದ್ರ ಮೋದಿ ಪ್ರಧಾನಿ (ಬೂತ್‌ಮಟ್ಟದ ಕಾರ್ಯಕರ್ತರೊಂದಿಗೆ ಸಂವಾದದಲ್ಲಿ ಹೇಳಿಕೆ)

ಬಯಲಾದ ಪಾಕಿಸ್ತಾನದ ಕಳ್ಳಾಟ
ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕಿಸ್ತಾನ ಸರ್ಕಾರ ಹಾಗೂ ಸೇನೆಯು ಸುಳ್ಳಿನ ಕಥೆಗಳ ಮೂಲಕ ಜಾಗತಿಕವಾಗಿ ಮರ್ಯಾದೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದರೆ ಗುರುವಾರ ನಡೆದ ತ್ರಿಸೇನೆಯ ಹಿರಿಯ ಅಧಿಕಾರಿಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ ಸುಳ್ಳಿನ ಕಂತೆಗಳನ್ನು ಬಯಲು ಮಾಡಲಾಗಿದೆ. ಸರ್ಜಿಕಲ್ ಸ್ಟ್ರೈಕ್, ಪಾಕಿಸ್ತಾನ ವಾಯುಸೇನೆ ದಾಳಿ ಹಾಗೂ ಭಾರತದ ಪ್ರತ್ಯುತ್ತರ ಕುರಿತು ಸಾಕ್ಷ್ಯ ಸಮೇತ ಭಾರತ ತಿರುಗೇಟು ನೀಡಿದೆ.

# ಪಾಕಿಸ್ತಾನ ಸೇನೆ ಯಾವುದೇ ಎ್-16 ಯುದ್ಧ ವಿಮಾನ ಬಳಸಿಲ್ಲ ಎಂದು ಹೇಳಿಕೊಂಡಿದೆ.
# ಆದರೆ ಆ್ಯಮರಾಮ್ ಕ್ಷಿಪಣಿಯನ್ನು ಬಳಸಿರುವ ಬಗ್ಗೆ ಭಾರತಕ್ಕೆ ಸಾಕ್ಷ್ಯ ಲಭ್ಯವಾಗಿದೆ.
# ಆ್ಯಮರಾಮ್ ಕ್ಷಿಪಣಿಯ ಭಾಗಗಳು ಭಾರತದ ಭಾಗದಲ್ಲಿ ಬಿದ್ದಿವೆ. ಈ ಕ್ಷಿಪಣಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ಕೇವಲ ಎ್-16 ಯುದ್ಧ ವಿಮಾನಕ್ಕಿದೆ.
# ಇದಲ್ಲದೇ ಎಲೆಕ್ಟ್ರಾನಿಕ್ ಸಿಗ್ನೇಚರ್ ಮೂಲಕವೂ ಪಾಕಿಸ್ತಾನ ಬಳಿಸಿದ್ದ ಯುದ್ಧ ವಿಮಾನಗಳ ಮಾಹಿತಿ ಸಂಗ್ರಹಿಸಲಾಗಿದೆ.
#ಪಾಕ್ ದಾಳಿಗೆ ಭಾರತ ಪ್ರತ್ಯುತ್ತರ ನೀಡಿದ ಬಳಿಕ ಎರಡು ಮಿಗ್ ಯುದ್ಧ ವಿಮಾನ ಹೊಡೆದು, ಮೂವರು ಪೈಲಟ್‌ಗಳನ್ನು ಬಂಧಿಸಲಾಗಿದೆ ಎಂದು ಪಾಕ್ ಸೇನೆ ಹೇಳಿತ್ತು.
# ಕೆಲವೇ ಗಂಟೆಗಳ ನಂತರ ಇಬ್ಬರು ಪೈಲಟ್ ಎಂದು ಹೇಳಿಕೆ ತಿರುಚಲಾಯಿತು. ಸಂಜೆಯಾಗುತ್ತಿದ್ದಂತೆ ತನ್ನ ವಶದಲ್ಲಿ ಕೇವಲ ಒಬ್ಬ ಪೈಲಟ್ ಇದ್ದಾರೆ ಎಂದು ಹೇಳಿಕೊಂಡಿದೆ.
# ಪ್ರತಿದಾಳಿ ಸಂದರ್ಭದಲ್ಲಿ ಎರಡು ಪ್ಯಾರಾಚೂಟ್‌ಗಳಿಂದ ಪೈಲಟ್‌ಗಳು ಹಾರಿರುವುದಕ್ಕೆ ದಾಖಲೆಯಿದೆ. ಇವರಲ್ಲಿ ಓರ್ವ ಭಾರತದ ಪೈಲಟ್ ಆಗಿದ್ದು, ಇನ್ನೋರ್ವ ಪಾಕಿಸ್ತಾನದ ಎ್-16 ಯುದ್ಧ ವಿಮಾನದ ಪೈಲಟ್ ಎನ್ನುವುದು ಖಾತ್ರಿಯಾಗಿದೆ.
# ಮಿಗ್-21 ಯುದ್ಧ ವಿಮಾನದ ಭಾಗ ಎಂದು ಪಾಕಿಸ್ತಾನ ಸೇನೆ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಆದರೆ ಅದು ಎ್-16 ಯುದ್ಧ ವಿಮಾನದ ಬಿಡಿಭಾಗಗಳಾಗಿವೆ.