24.9 C
Bangalore
Wednesday, December 11, 2019

ಎಚ್​ಎಎಲ್ ನ ಎಚ್​ಟಿಟಿ 40ನಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥರ ಹಾರಾಟ

Latest News

ಹುಣಸೂರು ಚುನಾವಣೆಯಲ್ಲಿ ತಟಸ್ಥನಾಗಿರುತ್ತೇನೆ ಎಂದು ಮೊದಲೇ ಘೋಷಿಸಿದ್ದೆ : ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್​.ವಿಶ್ವನಾಥ್​ ಅವರನ್ನು ಬೆಂಬಲಿಸುತ್ತೇನೆ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ ಎಂದು ಶಾಸಕ...

ಪೌರತ್ವ ತಿದ್ದುಪಡಿ ಮಸೂದೆ ಐತಿಹಾಸಿಕ ಮಸೂದೆಗಳಲ್ಲಿ ಒಂದು: ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಯು ಐತಿಹಾಸಿಕ ಮಸೂದೆಗಳಲ್ಲಿ ಒಂದೆಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾಗಿ ಬಿಜೆಪಿ ಸಂಸದೀಯ ಪಕ್ಷದ ಸಭೆಯ ಬಳಿಕ...

ಪ್ರಸಾದನ ಕಲಾವಿದ ರಾಮಕೃಷ್ಣ ಕನ್ನರ್ಪಾಡಿಗೆ ಜೋಳದರಾಶಿ ದೊಡ್ಡನಗೌಡ ಪುರಸ್ಕಾರ

ಬಳ್ಳಾರಿ: ರಂಗತೋರಣ ಸಂಸ್ಥೆಯ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರಕ್ಕೆ ಬೆಂಗಳೂರಿನ ಪ್ರಸಾದನ ಕಲಾವಿದ ರಾಮಕೃಷ್ಣ ಕನ್ನರ್ಪಾಡಿ ಆಯ್ಕೆಯಾಗಿದ್ದಾರೆ. ನಗರದ ರಾಘವ ಕಲಾಮಂದಿರದಲ್ಲಿ ಡಿ.28ರಂದು ಸಂಜೆ 5.45ಕ್ಕೆ...

ಡಿ.14 ರಂದು ಬೆಂಗಳೂರಿನಲ್ಲಿ ಮೀನುಗಾರರ ಸಮಾವೇಶ

ಮೈಸೂರು: ರಾಷ್ಟ್ರೀಯ ಮೀನುಗಾರರ ಸಂಘದ ವತಿಯಿಂದ ಡಿ. 14 ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಮೀನುಗಾರರ ಸ್ವಾಭಿಮಾನ ಸಮಾವೇಶ...

ಪರಸ್ಪರ ಭಾವನಾತ್ಮಕ ಸಂದೇಶ ಮೂಲಕ 2ನೇ ವಿವಾಹ ವಾರ್ಷಿಕೋತ್ಸವವನ್ನು ರಮಣೀಯವಾಗಿಸಿದ ವಿರುಷ್ಕಾ ದಂಪತಿ!

ನವದೆಹಲಿ: ತಾರಾ ದಂಪತಿಯಾದ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಂದು ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಈ ನೆನಪಿನ ಕ್ಷಣವನ್ನು...

ಬೆಂಗಳೂರು: ಎಚ್​ಎಎಲ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಎಚ್​ಟಿಟಿ 40 ಪ್ರಾಥಮಿಕ ತರಬೇತಿ ವಿಮಾನದಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥ (ಎಸಿಎಂ) ಆರ್​ಕೆಎಸ್ ಬದುರಿಯಾ ಮೊದಲ ಬಾರಿಗೆ ಹಾರಾಟ ನಡೆಸಿದರು.

ನ.14ರಂದು 1 ಗಂಟೆ ಹಾರಾಟ ನಡೆಸಿದ ಬದುರಿಯಾ ವಿಮಾನದ ಕಾರ್ಯಕ್ಷಮತೆಯನ್ನು ಅವಲೋಕಿಸಿದರು. ಮುಖ್ಯಸ್ಥರ ಜತೆಗೆ ವಿಮಾನದಲ್ಲಿ ಎಚ್​ಎಎಲ್​ನ ಮುಖ್ಯ ತರಬೇತಿ ಪೈಲಟ್ (ಎಫ್​ಡಬ್ಲ್ಯು), ಗ್ರೂಪ್ ಕ್ಯಾಪ್ಟನ್(ನಿ) ಕೆ.ಕೆ. ವೇಣುಗೋಪಾಲ್ ಇದ್ದರು.

ವಾಯುಸೇನಾ ಮುಖ್ಯಸ್ಥರು ಎಚ್​ಎಎಲ್ ಅಭಿವೃದ್ಧಿ ಪಡಿಸಿರುವ ಮಾದರಿ ಹಂತದಲ್ಲಿರುವ ವಿಮಾನವೊಂದರಲ್ಲಿ ಹಾರಾಟ ನಡೆಸಿದ್ದು ಇದೇ ಮೊದಲು. ವಿಮಾನದ ಕಾರ್ಯಕ್ಷಮತೆಗೆ ಸಂತೃಪ್ತಿ ವ್ಯಕ್ತಪಡಿಸಿದ ಆರ್​ಕೆಎಸ್ ಬದುರಿಯಾ ಯೋಜನೆ, ವಿನ್ಯಾಸ ಹಾಗೂ ಪರೀಕ್ಷಾ ತಂಡಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯೋಜನೆಯನ್ನು ಇನ್ನು ಮುಂದೆ ಸರ್ಟಿಫಿಕೇಷನ್​ಗಾಗಿ ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಹೆಚ್ಚಿನ ಉತ್ಪಾದನಾ ಸಾಮರ್ಥ್ಯವಿರುವ ತಯಾರಿಕಾ ವ್ಯವಸ್ಥೆಯತ್ತ ಎಚ್​ಎಎಲ್ ಗುರಿ ಹೊಂದಬೇಕು ಎಂದು ಸೂಚಿಸಿದರು.

ಏರ್​ಚೀಫ್ ಮಾರ್ಷಲ್ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ಎಚ್​ಎಎಲ್​ನ ಒಎಫ್​ಎಫ್​ಜಿ ಸಿಎಂಡಿ ವಿ.ಎಂ. ಚಮೋಲಾ, ನಿಗದಿತ ಸಮಯದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಿದ್ದಕ್ಕೆ ಎಚ್​ಟಿಟಿ 40 ತಂಡವನ್ನು ಅಭಿನಂದಿಸಿದರು.

ಸಿಒ (ಬಿಸಿ) ಶೇಖರ್ ಶ್ರೀವಾಸ್ತವ ಮಾತನಾಡಿ, ಸೂಕ್ತ ಸಂಖ್ಯೆಯಲ್ಲಿ ಎಚ್​ಟಿಟಿ 40 ವಿಮಾನಗಳ ತಯಾರಿಕೆಗೆ ಅಗತ್ಯ ಉತ್ಪಾದನಾ ಸೌಲಭ್ಯಗಳ ಕುರಿತು ಚರ್ಚೆಗಳು ನಡೆಯುತ್ತಿವೆ ಮತ್ತು ಎಚ್​ಎಎಲ್​ನ ಉತ್ಪಾದನೆ ಐಎಎಫ್ ಅಗತ್ಯತೆಗೆ ತಕ್ಕಂತೆ ಇರಲಿದೆ ಎಂದು ತಿಳಿಸಿದರು.

ಎಚ್​ಟಿಟಿ 40 ಎಲ್ಲ ಪ್ರಮುಖ ಪರೀಕ್ಷಾ ಅಂಶಗಳನ್ನೂ ಪೂರೈಸಿದೆ. ಅಲ್ಲದೆ, ಬಿಟಿಎ ಕಾರ್ಯಕ್ರಮಕ್ಕೆ ಏರ್ ಹೆಡ್​ಕ್ವಾರ್ಟರ್ಸ್ ಪ್ರಕಟಿಸಿರುವ ಪ್ರಾಥಮಿಕ ಸಿಬ್ಬಂದಿ ಗುಣಾತ್ಮಕ ಅಗತ್ಯತೆಗಳನ್ನು (ಪಿಎಸ್​ಕ್ಯುಆರ್) ಪೂರೈಸುತ್ತದೆ.

ಎಚ್​ಎಎಲ್​ನಂತಹ ಸಂಸ್ಥೆಗಳು ಸಮಯದಅಗತ್ಯಕ್ಕೆ ಸ್ಪಂದಿಸಲು ಮತ್ತು ನಿರೀಕ್ಷಿತ ಗುಣಮಟ್ಟವನ್ನು ಸಾಧಿಸಲು, ದರ ಮತ್ತು ಸಮಯ ಪಾಲನೆಗೆ ದೇಶಿ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಏರ್​ಚೀಫ್ ಮಾರ್ಷಲ್ ಬೆಂಬಲ ಸಹಕಾರಿ.

| ಆರೂಪ್ ಚಟರ್ಜಿ ಎನ್​ಜಿಜಿ, ಆರ್ ಆಂಡ್ ಡಿ ನಿರ್ದೇಶಕ

 

Stay connected

278,740FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...