More

  ಇಂದಿನಿಂದ ಬೆಂಗಳೂರು ಓಪನ್ ಟೆನಿಸ್: ಕನ್ನಡಿಗ ರೋಹನ್ ಬೋಪಣ್ಣಗೆ ಸನ್ಮಾನ

  ಬೆಂಗಳೂರು: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ಸೋಮವಾರ ಆರಂಭವಾಗಲಿರುವ ಬೆಂಗಳೂರು ಓಪನ್ ಪುರುಷರ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಪ್ರಧಾನ ಸುತ್ತಿನಲ್ಲಿ ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ್ರಾನ್ಸ್‌ನ ಜೆಫ್ರಿ ಬ್ಲಾಂಕಾನಿಯಾಕ್ಸ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದಾರೆ. ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ರಾಮ್‌ಕುಮಾರ್ ರಾಮನಾಥನ್ ಮೊದಲ ಸುತ್ತಿನಲ್ಲಿ ್ರಾನ್ಸ್‌ನ ಮತ್ತೊರ್ವ ಆಟಗಾರ ಮ್ಯಾಕ್ಸಿಮ್ ಜಾನ್ವಿಯರ್ ಅವರನ್ನು ಎದುರಿಸಲಿದ್ದಾರೆ.

  ಚೆನ್ನೈ ಓಪನ್ ಗೆದ್ದು ಎಟಿಪಿ ರ‌್ಯಾಂಕಿಂಗ್‌ನಲ್ಲಿ ಅಗ್ರ 100ರೊಳಗೆ ಪ್ರವೇಶಿಸಿದ ಸಂಭ್ರಮದಲ್ಲಿರುವ ನಗಾಲ್, ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂನ ಕ್ವಾಲಿಫೈಯರ್ ಸೇರಿ ಮೂರು ಬಾರಿ ಬ್ಲಾಂಕಾನಿಯಾಕ್ಸೃ್ ವಿರುದ್ಧ ಗೆದ್ದ ದಾಖಲೆ ಹೊಂದಿದ್ದು, ಅಜೇಯ ಓಟ ವಿಸ್ತರಿಸುವ ನಿರೀಕ್ಷೆಯಲ್ಲಿದ್ದಾರೆ. ಭಾರತದ ನಂ.2 ರಾಮ್‌ಕುಮಾರ್, ಮ್ಯಾಕ್ಸಿಮ್ ಜಾನ್ವಿಯರ್ ವಿರುದ್ಧ 1-1 ದಾಖಲೆ ಹೊಂದಿದ್ದಾರೆ. ಎರಡನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಲಿತ ಇಟಲಿಯ ಲುಕಾ ನಾರ್ಡಿ ಎದುರಾಗುವ ಸಾಧ್ಯತೆಗಳಿವೆ. ವೈಲ್ಡ್ ಕಾರ್ಡ್ ಪಡೆದಿರುವ ಮತ್ತೋರ್ವ ಆಟಗಾರ ಹಾಗೂ ಕನ್ನಡಿಗ ಪ್ರಜ್ವಲ್ ದೇವ್, 3ನೇ ಶ್ರೇಯಾಂಕಿತ ಆಸ್ಟ್ರೇಲಿಯಾದ ಆಡಮ್ ವಾಲ್ಟನ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

  ಡಬಲ್ಸ್‌ನ ಪ್ರಧಾನ ಸುತ್ತಿನಲ್ಲಿ ್ರಾನ್ಸ್‌ನ ಡಾನ್ ಆಡೆಡ್ ಮತ್ತು ಕೊರಿಯಾದ ಯುನ್ ಸಿಯೊಂಗ್ ಚುಂಗ್ ಜೋಡಿ ಅಗ್ರ ಶ್ರೇಯಾಂಕ ಪಡೆದಿದ್ದು, ಆಸ್ಟ್ರೇಲಿಯಾದ ಟ್ರಿಸ್ಟಾನ್ ಸ್ಕೂಲ್‌ಕೇಟ್-ಆಡಮ್ ವಾಲ್ಟನ್ ವಿರುದ್ಧ ಸೆಣಸಲಿದೆ. ಎನ್ ಶ್ರೀರಾಮ್ ಬಾಲಾಜಿ-ಆಂಡ್ರೆ ಬೆಗೆಮನ್ ಜೋಡಿ ಜರ್ಮನಿಯ ಮಾರ್ಕ್ ವಾಲ್ನರ್- ಜಾಕೋಬ್ ಷ್ನೈಟರ್ ವಿರುದ್ಧ ಕಾದಾಡಲಿದೆ. ಡಬಲ್ಸ್ ಪ್ರಧಾನ ಸುತ್ತಿನಲ್ಲಿ ಒಂಬತ್ತು ಭಾರತೀಯ ಆಟಗಾರರಿದ್ದಾರೆ.
  ಭಾನುವಾರ ನಡೆದ ಸಿಂಗಲ್ಸ್ ಅರ್ಹತಾ ಸುತ್ತಿನಲ್ಲಿ ಭಾರತೀಯರು ನಿರಾಸೆ ಅನುಭವಿಸಿದ್ದಾರೆ. ಕರಣ್ ಸಿಂಗ್, ಶಶಿಕುಮಾರ್ ಮುಕುಂದ್, ಸಿದ್ದಾರ್ಥ್ ವಿಶ್ವಕರ್ಮ, ನಿಕ್ಕಿ ಪೂಣಚ, ಆದಿಲ್ ಕಲ್ಯಾಣ್‌ಪುರ್ ಮೊದಲ ಸುತ್ತಿನಲ್ಲಿ ನಿರ್ಗಮಿಸಿದರು.

  ಇಂದು ಬೋಪಣ್ಣಗೆ ಸನ್ಮಾನ
  ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಪುರುಷರ ಡಬಲ್ಸ್ ಚಾಂಪಿಯನ್ ಎನಿಸಿಕೊಂಡು ಎಟಿಪಿ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿರುವ ಕನ್ನಡಿಗ ರೋಹನ್ ಬೋಪಣ್ಣ ಅವರಿಗೆ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ವತಿಯಿಂದ ಸೋಮವಾರ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕೆಎಸ್‌ಎಲ್‌ಟಿಎ ಕಾರ್ಯದರ್ಶಿ ಮಹೇಶ್ವರಿ ರಾವ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹಾಜರಿರಲಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts